ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಒಡ ಮೂಡಿಸುವುದೇ ಸಾಹಿತ್ಯವಾಗಿದೆ. ದಲಿತರ ನೋವು ನಲಿವುಗಳನ್ನು ಸಾಹಿತ್ಯ ರೂಪದಲ್ಲಿ ಹೊರತರುವ ಉದ್ದೇಶದಿಂದ ದಲಿತ ಸಾಹಿತ್ಯ ಬಂದಿದೆ. ಸಾಹಿತ್ಯದಲ್ಲಿ ದೇವನೂರು ಮಹಾದೇವ, ಸಿದ್ದಲಿಂಗಯ್ಯ, ತೋಟಗಹಳ್ಳಿ ರಾಮಯ್ಯ ತಮ್ಮದೆ ಆದ ಛಾವು ಮೂಡಿಸಿದ್ದಾರೆ ಎಂದರು.
ದೇವನೂರು ಮಹಾದೇವ ಬರೆದ ಕುಸುಮ ಬಾಲೆ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತು. ಮುಂದಿನ ದಿನಗಳಲ್ಲಿ ಯುವ ಲೇಖಕರು, ಸಾಹಿತಿಗಳು, ಬರಹಗಾರರು ದಲಿತ ಸಾಹಿತ್ಯ ಪರಿಷತ್ ಮೂಲಕ ಹೊರಬರುವಂತಾಗಲಿ ಎಂದು ಆಶಿಸಿದರು.ದಸಾಪ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿ, ಕಂಬಾಲಪಲ್ಲಿ, ಕೆಸ್ತಾರ ಸೇರಿದಂತೆ ಹಲವೆಡೆ ನಡೆದಂತಹ ದಲಿತರ ಮೇಲಿನ ದೌರ್ಜನ್ಯಗಳ ಮೂಲಕ ಹುಟ್ಟಿದಂತಹ ಸಾಹಿತ್ಯ ದಲಿತ ಸಾಹಿತ್ಯ, ಇಂತಹ ಸಾಹಿತ್ಯಗಳನ್ನು ನೋಡಲು ನಮ್ಮ ಮನಸ್ಸುಗಳು ತೆರೆದುಕೊಳ್ಳಬೇಕು, ದಲಿತ ಸಾಹಿತ್ಯ ಎಲ್ಲಾ ಸಾಹಿತ್ಯದ ಬೇರಾಗಿದೆ ಎಂದರು.
ದಸಾಪ ಗೌರವಾಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ದಲಿತರ ಅಭಿವೃದ್ಧಿ ಹಾಗೂ ನಿಮ್ಮ ಅಭಿವೃದ್ಧಿ ಕೈಯಲ್ಲಿ ಇದೆ. ನೀವು ಯಾರ ಹಿಂಬಾಲಕರಾಗದೆ ನಿಮ್ಮ ಹಿಂದೆ ಹಿಂಬಾಲಕರು ಬರುವ ಹಾಗೆ ಶಿಕ್ಷಣ ಉದ್ಯೋಗವನ್ನು ಪಡೆದು ನೀವು ಬೆಳೆದು ಮತ್ತೊಬ್ಬರನ್ನು ಬೆಳೆಸುವ ಗುಣವನ್ನು ಹೊಂದುವುರ ಜೊತೆಗೆ ಜಾಗೃತರಾಗಬೇಕು ಎಂದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ದೇವರಾಜು, ಕಸಾಪ ತಾಲೂಕು ಅಧ್ಯಕ್ಷ ಎಲ್.ಚೇತನ್ ಕುಮಾರ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಜು, ದಸಾಪ ತಾಲೂಕು ಅಧ್ಯಕ್ಷ ಬಿ.ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಬೊರಯ್ಯ, ಆದರ್ಶ ವಿದ್ಯಾಲಯ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಪಾಲ್ಗೊಂಡಿದ್ದರು.