ದಲಿತರು ದೇವರ ಜಾತ್ರೆಗಳನ್ನು ಮಾಡಬೇಡಿ

KannadaprabhaNewsNetwork | Published : Apr 23, 2025 12:34 AM

ಸಾರಾಂಶ

ದಲಿತರು ದೇವರ ಜಾತ್ರೆಗಳನ್ನು ಬಿಡಬೇಕು ಎನ್ನುವ ಮೂಲಕ ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ದಲಿತರು ದೇವರ ಜಾತ್ರೆಗಳನ್ನು ಬಿಡಬೇಕು ಎನ್ನುವ ಮೂಲಕ ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ತಾಲೂಕಿನ ಇಂದ್ರಬೆಟ್ಟ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು, ಭಾರತವು ಇನ್ನೂ ಜಾತಿ ಗ್ರಸ್ಥವಾಗಿಯೇ ಕಾಣುತ್ತಿರುವುದು ದುರಂತ. ಅಲ್ಲದೇ ಇಂದು ದಲಿತ ಸಮುದಾಯವು ದೇವರು ಮತ್ತು ಧರ್ಮದ ಹೆಸರಿನಲ್ಲಿ ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದೆ. ಹೀಗಾಗಿ ದೇವರು ಜಾತ್ರೆ ಉತ್ಸವದ ಆಚರಣೆಯನ್ನು ಬಿಡಬೇಕು ಎನ್ನುವ ಮೂಲಕ ಹೊಸ ವಿವಾದ ಮೈ ಮೇಲೆ ಎಳೆದುಕೊಂಡರು. ಟಿವಿಯಲ್ಲಿ ಬರುವ ಧಾರಾವಾಹಿ, ವಿನಾ ಕಾರಣ ಮೊಬೈಲ್‌ ಬಳಕೆ ತ್ಯಜಿಸಬೇಕು.ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪ್ರಬುದ್ಥತೆಯ ಬದುಕು ಕಟ್ಟಿಕೊಡಬೇಕು. ಅಂಬೇಡ್ಕರ್‌ ಹೇಳಿದ ಹಾಗೆ ಗುಡಿಸಲುಗಳಲ್ಲಿ ರಾಜರು ಹುಟ್ಟುವ ಕಾಲ ಇದಾಗಿದ್ದು, ನನ್ನ ಜನ ರಾಜರಾಗಿ ದೇಶ ಆಳುವ ಕನಸು ನನಸಾಬೇಕು ಆಗ ನನಗೆ ಸಂತಸವಾಗಲಿರುವ ವಿಚಾರ ಕುರಿತು ಪ್ರಸ್ತಾಪಿಸಿದರು.

ಬಳಿಕ ಇಂದ್ರಬೆಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ವಿತರಿಸಿ, ಭವಿಷ್ಯದಲ್ಲಿ ಉತ್ತಮ ಜ್ಞಾನವಂತರಾಗಬೇಕು ಎಂದು ಕರೆ ನೀಡಿದರು.

ಹಿರಿಯ ಮುಖಂಡರಾದ ರವಿಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಉಪನ್ಯಾಸಕರಾದ ಡಾ.ಕುಮಾರ್ ಇಂದ್ರಬೆಟ್ಟ, ಬೆಂಗಳೂರು ಸೆಂಟ್‌ ಜೋಸೆಫ್‌ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೇಮ ಜ್ಯೋತಿ, ಕತಿಕ್ಯಾತನಹಳ್ಳಿ ನರಸಿಂಹಪ್ಪ ,ದೊಡ್ಡಹಳ್ಳಿ ಮಾರಪ್ಪ , ಕಾರ್ಪೆಂಟರ್ ರಾಮಾಂಜಿನಪ್ಪ, ವೈ. ಎನ್ ಹೊಸಕೋಟಿ ಮಾರಪ್ಪ, ನಾರಾಯಣಪ್ಪ, ರವಿ ಐ.ಎಚ್‌.ಶಿವಕುಮಾರ್, ರಾಜು ಐ.ಕೆ.ಹನುಮಂತರಾಯ ಹಾಗೂ ಇತರೆ ಅನೇಕ ಮಂದಿ ಮುಖಂಡರು ಉಪಸ್ಥಿತರಿದ್ದರು.

Share this article