ಕನ್ನಡಪ್ರಭ ವಾರ್ತೆ ಕಾರಟಗಿ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿಯ ಬೇಜವಾಬ್ದಾರಿಯಿಂದಾಗಿ ಈಗ ನೀರು ತಡೆಯಲು ವಿಫಲರಾಗಿದ್ದು, ಇದರ ನೈತಿಕ ಹೊಣೆ ಹೊತ್ತು ತುಂಗಭದ್ರಾ ಮಂಡಳಿಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಶಿವರಾಜ ತಂಗಡಗಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಳೆದ ಒಂದೂವರೆ ವರ್ಷದಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ೭೦ ವರ್ಷಗಳ ಹಳೆಯದಾದ ಗೇಟ್‌ಗಳನ್ನು ಬದಲಾಯಿಸಬೇಕು. ೨೦೧೯ರಲ್ಲಿ ಮುನಿರಾಬಾದಿನಲ್ಲಿ ಎಡದಂಡೆ ಮೇಲ್ಮಟ್ಟದ ಕಾಲುವೆ ಬಳಿ ಗೇಟ್ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ನೀರು ಪೋಲಾದ ಘಟನೆ ನಡೆದಿತ್ತು. ಆ ರೀತಿಯ ಅವಘಡಗಳು ಸಂಭವಿಸಬಾರದೆಂದು ನಿಗಾವಹಿಸುವಂತೆ ಒತ್ತಾಯಿಸಿದರೂ ಕ್ರಮವಾಗಿಲ್ಲ ಏಕೆ? ಎಂದು ಪ್ರಶ್ನಿಸಿದರು.ಸಂಘದ ಕಲ್ಯಾಣ ಕರ್ನಾಟಕ ಘಟಕದ ಅಧ್ಯಕ್ಷ ಹನುಮಂತಪ್ಪ ಭೋವಿ ಮಾತನಾಡಿ, ಆ. ೧೬ರಂದು ಕಾರಟಗಿಯ ವಿಶೇಷ ಎಪಿಎಂಸಿಯಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಸಂಘದ ಉಪಾಧ್ಯಕ್ಷ ಮೋಹನ್ ಕುರಿ, ರಮೇಶ್ ಕಂಪ್ಲಿ, ಕಾರಟಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ ನಾಯಕ್, ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ, ತಾಲೂಕಾ ಉಪಾಧ್ಯಕ್ಷ ವೀರೇಶ್ ಮುಕ್ಕುಂದಾ ಮತ್ತು ಕನಕಮ್ಮ ಇನ್ನಿತರರು ಇದ್ದರು.