ಬಸವಣ್ಣನ ವ್ಯಕ್ತಿತ್ವಕ್ಕೆ ಧಕ್ಕೆ: ಶೆಟ್ಟರ್ ಖಂಡನೆ

KannadaprabhaNewsNetwork |  
Published : Nov 21, 2026, 02:00 AM IST
ಜಗದೀಶ ಶೆಟ್ಟರ್‌ | Kannada Prabha

ಸಾರಾಂಶ

ಬಸವ ಮಂಟಪ ಎಂಬ ಕೃತಿ ಮೂಲಕ ಲೇಖಕ ರವಿ ಹಂಜ ಅವರು ಬಸವಣ್ಣನವರು, ಶರಣ ಪರಂಪರೆ ಮತ್ತು ವೀರಶೈವ ಲಿಂಗಾಯತ ಅಸ್ಮಿತೆಯ ಬಗ್ಗೆ ಆಧಾರರಹಿತ ಹಾಗೂ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ.

ಹುಬ್ಬಳ್ಳಿ:

12ನೇ ಶತಮಾನದಲ್ಲೇ ಜಗತ್ತಿಗೆ ಮೊಟ್ಟಮೊದಲ ಸಂಸತ್ತಾದ ಅನುಭವ ಮಂಟಪ ನೀಡಿ, ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಮನುಕುಲಕ್ಕೆ ದಾರಿದೀಪವಾದ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿರುವುದು ಅತ್ಯಂತ ಖಂಡನೀಯ ಎಂದು ಸಂಸದ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಸವ ಮಂಟಪ ಎಂಬ ಕೃತಿ ಮೂಲಕ ಲೇಖಕ ರವಿ ಹಂಜ ಅವರು ಬಸವಣ್ಣನವರು, ಶರಣ ಪರಂಪರೆ ಮತ್ತು ವೀರಶೈವ ಲಿಂಗಾಯತ ಅಸ್ಮಿತೆಯ ಬಗ್ಗೆ ಆಧಾರರಹಿತ ಹಾಗೂ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂದು ಇಡೀ ಜಗತ್ತಿಗೆ ನೈತಿಕತೆಯ ಮಹಾಮಂತ್ರವನ್ನು ಬೋಸಿದ ಬಸವಣ್ಣನವರನ್ನು ಲೂಟಿಕೋರ, ಕೊಲೆಗಡುಕ ಎಂದು ಬಿಂಬಿಸಲು ಹೊರಟಿರುವುದು ಬೌದ್ಧಿಕ ದಿವಾಳಿತನದ ಪರಮಾವಧಿ. ಸಂಶೋಧನೆ ಹೆಸರಿನಲ್ಲಿ ಇತಿಹಾಸವನ್ನು ವಿಕೃತಗೊಳಿಸಿ, ಶರಣ ತತ್ವಗಳನ್ನು ಬುಡಮೇಲು ಮಾಡುವ ಇಂತಹ ಪೂರ್ವಾಗ್ರಹಪೀಡಿತ ಬರಹಗಳನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಇಂತಹ ವಿಕೃತ ಮನಸ್ಥಿತಿಗಳಿಗೆ ಸರ್ಕಾರ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಪರಿಪೂರ್ಣತೆಗೆ ಮಾತೃಭಾಷೆ ಅಗತ್ಯ: ಹಲಗತ್ತಿ
ಗೋ ಹತ್ಯೆ , ಮತಾಂತರ ನಿಷೇಧ ಹಿಂಪಡೆದರೆ ಉಗ್ರ ಹೋರಾಟ- ಮುತಾಲಿಕ್‌