ಕನ್ನಡಪ್ರಭ ವಾರ್ತೆ ಗಂಗಾವತಿ
ಇಲ್ಲಿನ ಗಂಗಾವತಿ- ಕಾರಟಗಿ ತಾಲೂಕುಗಳಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ 500ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ಹಾನಿಯಾಗಿದೆ.ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವತಿ ಭಾಗದ ಪ್ರದೇಶಗಳಲ್ಲಿರುವ ಭತ್ತ ಹಾನಿಯಾಗಿದೆ. ಈಗ ಕಾರಟಗಿ ತಾಲೂಕಿನ ಕಾರಟಗಿ, ಮರಳಿ, ಹೇರೂರು, ಕೃಷ್ಣಾಪುರ, ಡಣಾಪುರ, ಅಯೋಧ್ಯಾ ಗ್ರಾಮಗಳಲ್ಲಿ ಭತ್ತ ಹಾನಿಯಾಗಿದೆ. ಇಲ್ಲಿ ವಿಶೇಷವಾಗಿ ಆರ್‌ಎನ್‌ಆರ್ ತಳಿಯ ಬತ್ತ ಮತ್ತು ಸೋನಾ ಮಸೂರಿ ಭತ್ತ ಬೆಳೆಯಲಾಗಿದೆ. ಕಾರಟಗಿ ಸಮೀಪದ ಬಸವಣ್ಣ ಕ್ಯಾಂಪ್, ಈಳಗಿನೂರು, ಜೂರಟಗಿ ಪ್ರದೇಶಗಳಲ್ಲಿ ಬತ್ತ ಮಳೆಯಿಂದ ಹಾನಿಗೀಡಾಗಿದೆ.ಸರ್ವೆ ಕಾರ್ಯ: ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ. ಪ್ರಗತಿಪರ ರೈತರಾದ ರೆಡ್ಡಿ ಶ್ರೀನಿವಾಸ, ಅಶೋಕ ಕಡ್ಡಿ, ಟ್ರ್ಯಾಕ್ಟರ್ ವೀರಪ್ಪ, ಸಿದ್ದರಾಮಸ್ವಾಮಿ ಡಣಾಪುರ, ಕೃಷ್ಣ ಕುರಬರ, ಕಾಂತರಾಜ್, ಧನಂಜಯ, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಿಗ ರಾಜು, ರಾಜು, ಸ್ವಾಮಿ ಇದ್ದರು.