ಕನ್ನಡಪ್ರಭ ವಾರ್ತೆ ಮುಧೋಳ
ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ದಾನಮ್ಮ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಗಿದ್ದ ಮುಧೋಳ ಕೌಟಿಲ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಆನಂದ ಮೇತ್ರಿ ಮಾತನಾಡಿ ವಿದ್ಯಾರ್ಥಿನಿಯರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕವೆಂದು ಎಂದರು.ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಕಲಾ ಮೇಳಗಳೊಂದಿಗೆ ವಿಭಿನ್ನ ಸಂಸ್ಕೃತಿಯ ವೇಷಭೂಷಣಗಳನ್ನು ಧರಿಸಿ ಡೊಳ್ಳು ಕುಣಿತ, ಕುಂಭ, ಆರತಿಯೊಂದಿಗೆ ವಿಜೃಂಭಣೆ ಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು. ನಂತರ ಉತ್ತರ ಕರ್ನಾಟಕದ ಇಳಕಲ್ ಸೀರೆಯಲ್ಲಿ ದಾನಮ್ಮ ಉತ್ಸವ ನಾಮಾಂಕಿತ ಒಳಗೊಂಡ ಬ್ಯಾನರ್ ಅನಾವರಣಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು.
ಕಾಲೇಜಿನ ಪ್ರಾಚಾರ್ಯ ಡಾ.ಎಮ್.ಎಮ್.ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ ದಾನಮ್ಮೋತ್ಸವ ಒಂದು ಸಾಂಸ್ಕೃತಿಕ ಉತ್ಸವ. ಈ ಉತ್ಸವ ನಮ್ಮ ಸಂಸ್ಕೃತಿಯ ದ್ಯೂತಕ. ಇಂತಹ ಕಾರ್ಯಕ್ರಮಗಳ ಆಯೋಜನೆಯ ಯಶಸ್ಸು ವಿದ್ಯಾರ್ಥಿಗಳ ಪಾಲ್ಗೊಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದರು. ಸಾಂಕೃತಿಕ ವಿಭಾಗದ ಕಾರ್ಯಧ್ಯಕ್ಷರು ಹಾಗೂ ಕಲಾ ವಿಭಾಗದ ಮುಖ್ಯಸ್ಥ ಪ್ರೊ ಎಸ್.ಕೆ. ಸಾರವಾಡ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ ಎ.ಎನ್.ಬಾಗೇವಾಡಿ ವಂದಿಸಿದರು, ಪ್ರೊ.ಮಲ್ಲಿಕಾರ್ಜುನ ಎಮ್. ನಿರೂಪಿಸಿದರು.