ಹಲವು ರೋಗಗಳಿಗೆ ನೃತ್ಯ ಚಿಕಿತ್ಸೆ ಸಹಕಾರಿ

KannadaprabhaNewsNetwork |  
Published : Jun 01, 2025, 01:31 AM IST
31ಎಚ್‌ಯುಬಿ24ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯ ಮನಃಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ‘ಡಾನ್ಸ್ ಥೆರಪಿ’ ಕುರಿತ ವಿಶೇಷ ಉಪನ್ಯಾಸ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ನೃತ್ಯ ಸಮಗ್ರ ರೋಗ ಗುಣಪಡಿಸುವ ವಿಧಾನವಾಗಿದ್ದು,ಅದರ ಚಿಕಿತ್ಸಕ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು

ಹುಬ್ಬಳ್ಳಿ: ವಿವಿಧ ಪ್ರಕಾರದ ನೃತ್ಯ ಚಿಕಿತ್ಸೆಯಿಂದ ಹಲವು ರೋಗ ಗುಣಪಡಿಸಬಹುದು. ಆದ್ದರಿಂದ ನೃತ್ಯ ಚಿಕಿತ್ಸೆ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ ಎಂದು ನೃತ್ಯ ಚಿಕಿತ್ಸಕಿ ದೀಪ್ತಿ ಹಸಬಿ ಹೇಳಿದರು.

ಇಲ್ಲಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ.ವಿಜ್ಞಾನ ಸಂಸ್ಥೆಯ ಮನಃಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಡಾನ್ಸ್ ಥೆರಪಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೃತ್ಯ ಸಮಗ್ರ ರೋಗ ಗುಣಪಡಿಸುವ ವಿಧಾನವಾಗಿದ್ದು,ಅದರ ಚಿಕಿತ್ಸಕ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಪ್ರಾಚಾರ್ಯೆ ಸುಮಂಗಲಾ ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜು ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಪಾಲ್ಗೊಂಡಿದ್ದರು.

ಎಂ. ದಿವ್ಯಶ್ರೀ ಪ್ರಾರ್ಥಿಸಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಜೆ. ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಥಿಲಿ ನರಗುಂದ ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮೀ ಮತ್ತು ಪಾಯಲ್ ನಿರೂಪಿಸಿದರು. ಮನಃಶಾಸ್ತ್ರ ಸಂಘದ ಕಾರ್ಯದರ್ಶಿ ಎಸ್.ಎಂ. ಚಂದನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ