ಕನ್ನಡ ಸಾಹಿತ್ಯದ ಮೌಲ್ಯಯುತ ಬೆಳವಣಿಗೆಗೆ ದಾಸ ಸಾಹಿತ್ಯ ಸಹಕಾರ

KannadaprabhaNewsNetwork |  
Published : Feb 25, 2024, 01:45 AM IST
ಮುಂಡಗೋಡ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ. ಎಸ್. ಸದಾನಂದ ಪಟ್ಟಣದ ಹೊರ ವಲಯ ನ್ಯಾಸರ್ಗಿ ದಲೈಲಾಮ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಮತ್ತು ದಲೈಲಾಮ ಸರ್ಕಾರಿ ತರಬೇತಿ ಕೇಂದ್ರ ನ್ಯಾಸರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ದಿ. ರೇಣುಕಾ ಹನಮಂತಪ್ಪ ಕಲಾಲ ರವರ ಸ್ಮರಣಾರ್ಥ ದಾಸ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಕ್ರಾಂತಿ, ಸಾಮಾಜಿಕ ಚಿಂತನೆ ಬೇರೆ ಆಗಿಸಿಕೊಂಡ ಸಾಹಿತ್ಯವೇ ದಾಸ ಸಾಹಿತ್ಯ. ಕನ್ನಡ ಸಾಹಿತ್ಯ ಮೌಲ್ಯಯುತವಾಗಿ ಬೆಳೆಯಲು ಇದು ಸಹಾಯಕವಾಗಿದೆ.

ಮುಂಡಗೋಡ:

ಸಾಮಾಜಿಕ ಕ್ರಾಂತಿ, ಸಾಮಾಜಿಕ ಚಿಂತನೆ ಬೇರೆ ಆಗಿಸಿಕೊಂಡ ಸಾಹಿತ್ಯವೇ ದಾಸ ಸಾಹಿತ್ಯ. ಕನ್ನಡ ಸಾಹಿತ್ಯ ಮೌಲ್ಯಯುತವಾಗಿ ಬೆಳೆಯಲು ಇದು ಸಹಾಯಕವಾಗಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ಎಸ್. ಸದಾನಂದ ಹೇಳಿದರು ಪಟ್ಟಣದ ನ್ಯಾಸರ್ಗಿ ದಲೈಲಾಮ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ದಿ. ರೇಣುಕಾ ಹನುಮಂತಪ್ಪ ಕಲಾಲ ಸ್ಮರಣಾರ್ಥ ನಡೆದ ದಾಸ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಹಲವು ಚಳವಳಿಗಳು ನಡೆದಿವೆ. ಅವುಗಳಲ್ಲಿ ೧೨ನೇ ಶತಮಾನದಲ್ಲಿ ವಚನಗಳ ಮೂಲಕ ಶರಣರ ಮತ್ತು ದಾಸ ಸಾಹಿತ್ಯ ಚಳವಳಿಗಳು ನಡೆದಿವೆ. ದಾಸ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದ್ದು. ಇದು ಸಾಮಾಜಿಕ ಅಸಮಾಧಾನ ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದೆ ಎಂದರುಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಉತ್ತಮ ವಾತಾವರಣದಿಂದ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎನ್ನುವಂತೆ ದಾಸ ಸಾಹಿತ್ಯ ಕುರಿತು ವಿದ್ಯಾರ್ಥಿಗಳು ಮನನ ಮಾಡಿ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಪಾಂಡುರಂಗ ಟಿಕ್ಕೊಜಿ ಮಾತನಾಡಿ, ದಾಸ ಸಾಹಿತ್ಯ ಚಳವಳಿಯ ಪುರಂದರ ದಾಸರು, ಕನಕದಾಸರು ಇತರೆ ದಾಸರ ಮುಂಡಿಗೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಪ್ರಯೋಜಕರಾದ ಎಂ.ಎಚ್. ಕಲಾಲ, ಕಸಾಪ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ವಿನಾಯಕ ಶೇಟ್, ಉಪನ್ಯಾಸಕ ರವಿ. ಭಜಂತ್ರಿ, ಆರ್.ಜೆ. ಬೆಳ್ಳೆನವರ, ಡಾ. ಪಿ.ಪಿ. ಛಬ್ಬಿ ಮಾತನಾಡಿದರು. ಉದ್ಯಮಿ ಸತೀಶ. ಕುರ್ಡೇಕರ್, ಡಾ. ಅನುಪಮ್, ಎಸ್.ಬಿ. ಹೂಗಾರ, ಸಂಗಪ್ಪ. ಕೋಳೂರು, ಗೋಪಾಲ. ಪಾಟೀಲ, ಆರ್.ಎಸ್. ಕಲಾಲ, ಗೌರಮ್ಮ ಕೊಳ್ಳಾನವರ, ಆನಂದ. ಹೊಸೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಬ್ಲೇಡ್‌, ಮನೆಗೆ ಬಂದಿದ್ದು ಹಳೆ ಬಟ್ಟೆ
ಉಪನಗರ ರೈಲು ಯೋಜನೆ ಬಾಧಿತರಿಗೆ ಕೆ-ರೈಡ್‌ನಿಂದ ವಿಮಾ ಪತ್ರ ವಿತರಣೆ