ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ದಸಂಸ ಆಗ್ರಹ

KannadaprabhaNewsNetwork |  
Published : Jul 21, 2026, 04:15 AM IST
ಜಮಖಂಡಿ ನಗರದಲ್ಲಿ ದಲಿತ ಸಂಘರ್ಷ ಸಮೀತಿ ಸಾಗರ ಬಣದ ಪದಾಧಿಕಾರಿಗಳು  ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಶಿಕ್ಷಣ ಸಚಿವ  ಧರ್ಮೇಂದರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು,  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಅಕ್ರಮ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಚಳುವಳಿಗೆ ಬೆಂಬಲಿಸಿ ಡಿಎಸ್‌ಎಸ್‌ ಜಿಲ್ಲಾ ಸಮಿತಿ (ಸಾಗರ ಬಣ)ನೇತೃತ್ವದಲ್ಲಿ ಸೋಮುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಜಮಖಂಡಿ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಅಕ್ರಮ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಚಳುವಳಿಗೆ ಬೆಂಬಲಿಸಿ ಡಿಎಸ್‌ಎಸ್‌ ಜಿಲ್ಲಾ ಸಮಿತಿ (ಸಾಗರ ಬಣ)ನೇತೃತ್ವದಲ್ಲಿ ಸೋಮುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ನ್ಯಾಯಾವಾದಿ ಎನ್‌.ಎಸ್‌.ದೇವರವರ ಮಾತನಾಡಿ, ಕೇಂದ್ರ ಸರ್ಕಾರ ಸತ್ಯಾಗ್ರಹಿಗಳನ್ನು ಹತ್ತಿಕ್ಕುತ್ತಿದೆ. ಸೋನಂ ವಾಂಗ್ಚುಕ್‌ ಅವರ ಉಪವಾಸ ಸತ್ಯಾಗ್ರಹ ಸಹಿಸದ ಸರ್ಕಾರ ಪೊಲೀಸ್‌ ಕಾರ್ಯಾಚರಣೆ ನಡೆಸಲಾಗಿದೆ. ಸಚಿವರ ರಾಜೀನಾಮೆ ಪಡೆಯುವುದನ್ನು ಬಿಟ್ಟು ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತ ಬಲಿ ಕೊಡುತ್ತಿದೆ ಎಂದರು. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಪರಿಕ್ಷಾ ಅಕ್ರಮಗಳ ವಿರುದ್ಧ ಸೋನಂ ವಾಂಗ್ಚುಕ ಅವರ ನೇತೃತ್ವದಲ್ಲಿ ದೆಹಲಿಯ ಜಿಂತರ-ಮಂತರದಲ್ಲಿ ನಡೆಸುತ್ತಿರುವ ಹೋರಾಟಗಾರರ ಜತೆ ಕನಿಷ್ಠ ಮಾತುಕತೆ ನಡೆಸದೆ ಒತ್ತಾಯದಿಂದ ಬಂಧಿಸಿ ಚಿಕಿತ್ಸೆ ಕೊಡಿಸುತ್ತಿರುವುದು ಅಮಾನವೀಯ ಮತ್ತು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮುಖಾಂತರ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು.

ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ನ್ಯಾಯವಾದಿ ಸಂದೀಪ ಬೆಳಗಲಿ, ಸಾಹಿತಿ ಚಿತ್ತರಂಜನ ನಾಂದ್ರೆಕರ, ನ್ಯಾಯವಾದಿ ಶಶಿಕಾಂತ ದೊಡಮನಿ, ನ್ಯಾಯವಾದಿ ಪಾರಶೆಟ್ಟಿ, ಕಾಂಗ್ರೆಸ್‌ ಬ್ಲಾಕ ಅಧ್ಯಕ್ಷ ಮಹೇಶ ಪಾಟೀಲ, ನಗರ ಘಟಕದ ಅಧ್ಯಕ್ಷ ಮಹೇಶ ಕೋಳಿ, ರಾಜು ನದಾಫ್‌, ದಯಾನಂದ ಕಾಳೆ, ಶ್ಯಾಮರಾವ ಮಾದರ, ರವಿ ಸುತಾರ, ಮುತ್ತು ಹರಿಜನ, ಸಹಜಾನಂದ ದೊಡಮನಿ, ಅಡಿವೆಪ್ಪ ಮರೆಗುದ್ದಿ, ಅಶೋಕ ಸಿಂಗೆ, ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಶಶಿಕಾಂತ ದೊಡಮನಿ, ದೀಪಕ ಕಂಕಣವಾಡಿ, ಬಸವರಾಜ ದೊಡಮನಿ, ಪರಶು ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಚೂರು ವಲಯ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆ
ವಕೀಲಿಕೆ ಅತ್ಯಂತ ಗೌರವಯುತ ವೃತ್ತಿ