ಕನ್ನಡಪ್ರಭ ವಾರ್ತೆ ಮಹಾಲಿಂಗಪುರ19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.8 ಜಿಲ್ಲೆಗಳನ್ನೊಳಗೊಂಡ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿರುವ ದಿಶಾ ಮಹಾಲಿಂಗಪುರ ನಿವಾಸಿ ಮನೋಹರ ಶಿರೋಳ ಅವರ ಪುತ್ರಿಯಾಗಿದ್ದಾಳೆ. ಜು.23ರಿಂದ ಬೆಂಗಳೂರಿನಲ್ಲಿ ಜರುಗುವ ಕೆಎಸ್‌ಸಿಎ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದು, ಮಹಾಲಿಂಗಪುರ ಪಟ್ಟಣ ಮತ್ತು ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಸ್ಥಳೀಯ ಜೆಸಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದರೂ ಸಹ ಕಠಿಣ ಪರಿಶ್ರಮದಿಂದ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿ ಭರವಸೆ ಮೂಡಿಸಿದ್ದಾಳೆ ಎಂದು ಶಾಲೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.