ವಕೀಲಿಕೆ ಅತ್ಯಂತ ಗೌರವಯುತ ವೃತ್ತಿ

KannadaprabhaNewsNetwork |  
Published : Jul 21, 2026, 04:15 AM IST
ಹುಕ್ಕೇರಿ | Kannada Prabha

ಸಾರಾಂಶ

ವಕೀಲಿಕೆ ಅತ್ಯಂತ ಗೌರವಯುತ ವೃತ್ತಿಯಾಗಿದ್ದು, ಕಲಿಕೆ ವಕೀಲ ವೃತ್ತಿಯ ಬಹುಮುಖ್ಯ ಭಾಗವಾಗಿದೆ. ಸಂವಿಧಾನ ರಚನೆಯಿಂದ ಹಿಡಿದು ದೇಶಾದ್ಯಂತ ಯಾವುದೇ ಕಾನೂನು ರಚನೆಯಾದಲ್ಲಿ, ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುವುದರಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ದಿವಾಣಿ ಹಿರಿಯ ನ್ಯಾಯಾಧೀಶ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ವಕೀಲಿಕೆ ಅತ್ಯಂತ ಗೌರವಯುತ ವೃತ್ತಿಯಾಗಿದ್ದು, ಕಲಿಕೆ ವಕೀಲ ವೃತ್ತಿಯ ಬಹುಮುಖ್ಯ ಭಾಗವಾಗಿದೆ. ಸಂವಿಧಾನ ರಚನೆಯಿಂದ ಹಿಡಿದು ದೇಶಾದ್ಯಂತ ಯಾವುದೇ ಕಾನೂನು ರಚನೆಯಾದಲ್ಲಿ, ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುವುದರಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ದಿವಾಣಿ ಹಿರಿಯ ನ್ಯಾಯಾಧೀಶ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ವಕೀಲರ ಭವನದಲ್ಲಿ ಸೋಮವಾರ ಆಯೋಜಿಸಿದ ಹುಕ್ಕೇರಿ ನ್ಯಾಯವಾದಿಗಳ ಸಂಘಕ್ಕೆ ೨೦೨೬-೨೮ರ ಅವಧಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಅವರು, ವಕೀಲರು ಅಧ್ಯಯನ ಮಾಡುವುದು ಅಗತ್ಯ. ಕಠಿಣ ಪರಿಶ್ರಮ ಅನುಸರಿಸದಿದ್ದರೆ ಯಶಸ್ಸು ನಮ್ಮ ಕೈ ಹಿಡಿಯುವುದಿಲ್ಲ ಎಂದರು.ಕಿರಿಯ ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ, ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರುವ ಪರಿಣಾಮಕಾರಿ ಪ್ರಯತ್ನದಲ್ಲಿ ಹಿರಿಯ ವಕೀಲರಲ್ಲಿರುವ ತಾಳ್ಮೆ, ಪರಿಣತಿ, ಕಿರಿಯ ವಕೀಲರಲ್ಲಿ ಕಂಡು ಬರುತ್ತಿಲ್ಲ. ಬದ್ಧತೆಯಿಂದ ಕಾರ್ಯನಿರ್ವಹಿಸುವುದು ನಮ್ಮ ಕರ್ತವ್ಯ. ವಕೀಲರು ಹಾಗೂ ಸಿಬ್ಬಂದಿ ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿದರೇ ನ್ಯಾಯಾಂಗ ವ್ಯವಸ್ಥೆಗೆ ಘನತೆ ಬರುತ್ತದೆ ಎಂದರು.ಸಂಘದ ನೂತನ ಅಧ್ಯಕ್ಷ ಡಿ.ಕೆ.ಅವರಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸ್ಥಾನವನ್ನು ಅತ್ಯಂತ ಗೌರವದಿಂದ ಮುನ್ನಡೆಸಿಕೊಂಡು ಹೋಗಲಾಗುವುದು. ಸಂಘದಿಂದ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಮಾದರಿ ವಕೀಲರ ಸಂಘವನ್ನಾಗಿ ರೂಪಿಸಲಾಗುವುದು ಎಂದರು.ಸಂಘದ ನೂತನ ಅಧ್ಯಕ್ಷ ಡಿ.ಕೆ.ಅವರಗೋಳ, ಉಪಾಧ್ಯಕ್ಷ ಎಸ್.ಎಸ್.ಮರಿನಾಯಿಕ, ಕಾರ್ಯದರ್ಶಿ ಎಸ್.ಎನ್.ಮಗದುಮ್ಮ, ಸಹಕಾರ್ಯದರ್ಶಿ ಎಸ್.ಎ.ಮಲ್ಲಾಪೂರೆ, ಖಜಾಂಚಿ ಶಾಂತಾ ಶೀಲಯ್ಯನವರಮಠ, ಮಹಿಳಾ ಪ್ರತಿನಿಧಿ ಶೋಭಾ ಮಗದುಮ್ಮ ಅವರಿಗೆ ಚುನಾವಣಾಧಿಕಾರಿ ಎಸ್.ಸಿ.ನಾಯಿಕ, ಸಹಾಯಕ ಚುನಾವಣಾಧಿಕಾರಿ ದಯಾನಂದ ತಳವಾರ ಪ್ರಮಾಣ ಪತ್ರ ವಿತರಿಸಿದರು.ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಕುರಬೇಟ, ಅಪರ ಸರ್ಕಾರಿ ಅಭಿಯೋಜಕ ಅನಿಲ ಕರೋಶಿ, ನ್ಯಾಯವಾದಿಗಳಾದ ಪದ್ಮನಾಭ ಚೌಗಲಾ, ರಾಮಚಂದ್ರ ಜೋಶಿ, ಎ.ಎಂ.ಹ್ಯಾಟಗೋಳ, ಅನೀಸ ವಂಟಮೂರಿ, ರಾಜೀವ ಚೌಗಲಾ, ಕೆ.ಎಲ್.ಜಿನರಾಳಿ, ಬಿ.ಕೆ.ಮಗೆಣ್ಣವರ, ಉಮೇಶ ಪಾಟೀಲ, ಭೀಮಸೇನ ಬಾಗಿ, ಐ.ಕೆ.ಹೂಲಿಕಟ್ಟಿ, ಬಿ.ಎಂ.ಜಿನರಾಳಿ, ಆಶಾ ಸಿಂಗಾಡಿ, ಬಿ.ಎಂ.ಪಾಟೀಲ, ಮಹಾಂತೇಶ ಬೋರಗಲ್ಲಿ, ಸುನೀಲ ಡುಮ್ಮನವರ, ಅನಿಲ ಕರಡಿ, ಕೆ.ಎಂ.ಭೂಗಡಿಕಟ್ಟಿ, ಅಂಬರೀಶ ಬಾಗೇವಾಡಿ, ರೂಪಾ ಬಡಗಾಂವಿ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯವಾದಿ ಎಸ್.ಜಿ.ನದಾಫ್ ನಿರೂಪಿಸಿದರು. ನ್ಯಾಯವಾದಿ ಕೆ.ಪಿ.ಶಿರಗಾಂವಕರ ವಂದಿಸಿದರು. ಇದೇ ಸಂದರ್ಭದಲ್ಲಿ ನಿರ್ಗಮಿತ ಮತ್ತು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ