ಜಗಳೂರು: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆ ಖಂಡಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿಯ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ವಕೀಲ ಆರ್. ಓಬಳೇಶ್ ಮಾತನಾಡಿ, ಅಮಿತ್ ಶಾ ಹೇಳಿಕೆ ಮನುವಾದ ಎತ್ತಿತೋರುತ್ತದೆ. ಅವರ ವಿರುದ್ಧ ಸೂಕ್ತ ಕಾಯಿದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಸಮಿತಿಯು ದೇಶದದ್ಯಾಂತ ಬೀದಿಗಿಳಿದು ಹೋರಾಟ ಮಾಡಲಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಶಾ ಅವರ ರಾಜೀನಾಮೆ ಪಡೆಯಬೇಕು ಎಂದರು.
ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಚಾಲಕ ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ಮುಖಂಡರಾದ ಪಲ್ಲಾಗಟ್ಟೆ ರಂಗಪ್ಪ, ಬೆಣ್ಣೆಹಳ್ಳಿ ನಿಜಲಿಂಗಪ್ಪ, ಬಸವರಾಜ್, ಭರಮಸಮುದ್ರ ಕುಮಾರ್, ಮಹಾಂತೇಶ್, ಮಂಜಪ್ಪ, ರಾಜಪ್ಪ, ರೈತ ಮುಖಂಡ ಕುಮಾರ್ ಇತರರಿದ್ದರು.- - - -೨೦ಜೆಎಲ್‌ಆರ್‌ಚಿತ್ರ೧: