ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ೧೮ ವರ್ಷಗಳಿಂದಲೂ ಅರುಣೋದಯ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರಾಗಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ೨೦೨೩ರ ಜೂ. ೨೨ರಂದು ಆರ್ಥಿಕ ಇಲಾಖೆ ಸಹಾಯನುದಾನಿತ ಯೋಜನೆಗೆ ಒಳಪಡಿಸಿದೆ. ಈ ಆದೇಶ ಹೊರಬಿದ್ದು ೨ ವರ್ಷವಾದರೂ ಸಹ ಪ್ರಮಾಣಪತ್ರ ನೀಡುವಲ್ಲಿ ಡಿಡಿಪಿಐ ಶಿವರಾಮೇಗೌಡ ಅವರು ಕರ್ತವ್ಯಲೋಪವೆಸಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಅನುಸೂಚಿತ ಜಾತಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ಶಿಕ್ಷಣ ಸಂಸ್ಥೆಯ ಬಗ್ಗೆ ತಿಳಿಸಿ, ಡಿಡಿಪಿಐ ಶಿವರಾಮೇಗೌಡರ ಕರ್ತವ್ಯಲೋಪ ಕುರಿತಂತೆ ಶಿಕ್ಷಕರು ಮಾಹಿತಿ ನೀಡಿದ್ದರೂ ಸಹ ಈವರೆವಿಗೂ ಅದು ಕಾರ್ಯಗತವಾಗಿಲ್ಲ ಎಂದು ಕಿಡಿಕಾರಿದರು.ಮುಖಂಡರಾದ ಅನಿಲ್‌ಕುಮಾರ್, ಬಿ.ಆನಂದ್, ಮುತ್ತುರಾಜು, ರಂಗಸ್ವಾಮಿ, ತಮ್ಮಣ್ಣ, ಶರಾವತಿ ಗೋಷ್ಠಿಯಲ್ಲಿದ್ದರು.