ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರಂಗಾಯಣದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗೋತ್ಸವವನ್ನು ಸೆ.22ರ ಸಂಜೆ 5.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸುವರು. ರಂಗಾಯಣದ ನಾಟಕಗಳ ಭಿತ್ತಿಚಿತ್ರ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ವಿ. ವೆಂಕಟೇಶ್ ಉದ್ಘಾಟಿಸುವರು ಎಂದು ಹೇಳಿದರು.
ಇದೇ ವೇಳೆ ರಂಗಭೂಮಿ ಮತ್ತು ಕಿರುತೆರೆ ಕಲಾವಿದ ಧರ್ಮೇಂದ್ರ ಅರಸ್ ಅವರಿಗೆ ನವರಾತ್ರಿ ರಂಗಗೌರವ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಮೊದಲಾದವರು ಪಾಲ್ಗೊಳ್ಳುವರು ಎಂದರು.ಕಾಲೇಜು ನವರಾತ್ರಿ ರಂಗೋತ್ಸವದಲ್ಲಿ 400 ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ 10 ನಾಟಕಗಳು ಸೆ.22 ರಿಂದ ಅ.1 ರವರೆಗೆ ಪ್ರತಿದಿನ ಸಂಜೆ 7ಕ್ಕೆ ಭೂಮಿಗೀತದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ಅಲ್ಲದೆ, ಅಂತರರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವನ್ನು ಸೆ.22 ರಿಂದ ಅ.1 ರವರೆಗೆ ವನರಂಗದಲ್ಲಿ ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಲಂಬಾಡಿ/ಮಾತುರಿ ನೃತ್ಯ- ತೆಲಂಗಾಣ, ಲಾವಣಿ, ಹೋಲಿ ನೃತ್ಯ- ಮಹಾರಾಷ್ಟ್ರ, ಸಿದ್ದಿ ಢುಮಾಲ್ ನೃತ್ಯ- ಗುಜರಾತ್, ಸಂಬಲ್ ಪುರಿ ನೃತ್ಯ- ಒರಿಸ್ಸಾ, ತಿರುವತ್ತುರಕಳಿ ಮತ್ತು ಒಪ್ಪಾನ ನೃತ್ಯ- ಕೇರಳ, ಬಿಹು, ಗುಸಾನ್ ನೃತ್ಯ- ಅಸ್ಸಾಂ, ನೋರ್ತಾ ಮತ್ತು ಸೈತಾನ್ ನೃತ್ಯ- ಮಧ್ಯಪ್ರದೇಶ, ರಥ್ವಾ ನೃತ್ಯ- ಗುಜರಾತ್, ತಪ್ಪಾಟ್ಟಗುಳು ನೃತ್ಯ- ಆಂಧ್ರಪ್ರದೇಶ ಹಾಗೂ ಕರಗಂ, ಕಾವಾಡಿ, ತಪ್ಪಟ್ಟಮ್ ನೃತ್ಯ- ತಮಿಳುನಾಡು ತಂಡ ಪ್ರದರ್ಶನ ನೀಡಲಿದೆ ಎಂದು ವಿವರಿಸಿದರು.
-----
ನವರಾತ್ರಿ ನಾಟಕಗಳು
ಸೆ.23- ನೋವಿಗದ್ದಿದ ಕುಂಚ
ಸೆ.25- ಚಿತ್ರಪಟ ರಾಮಾಯಣ
ಸೆ.27- ಕಲ್ಯಾಣದ ಬಾಗಿಲು
ಸೆ.28- ಚೂರಿಕಟ್ಟೆ ಅಥಾರ್ತ್ ಕಲ್ಯಾಣಪುರಸೆ.29- ಮಾದಾರಿ ಮಾದಯ್ಯ
ಸೆ.30- ಜಾತ್ರೆಅ.1- ಜನ ಗಣ ಮನ