ಪರಿವರ್ತನೆಗೆ ಸಮಾಜದ ಧ್ವನಿಯಾಗಿ ನಿಂತ ದಾಸರು: ಡಾ.ಉಡಿಕೇರಿ

KannadaprabhaNewsNetwork |  
Published : Oct 19, 2025, 01:00 AM IST
ಫೋಟೋ- ದಾಸ ಸಾಹಿತ್ಯ ಸಮ್ಮೇಳನಕಲಬುರಗಿಯಲ್ಲಿಂದು ನಡೆದ ವಿಭಾಗೀಯ ದಾಸ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಗುವಿವಿ ಕುಲಪತಿ ಡಾ. ಸಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಶ್ರೀನಿವಾಸ ಸಿರನೂಕರ್‌, ಕಸಾಪ ಅದ್ಯಕ್ಷ ವಿಜಯ ತೇಗಲತಿಪ್ಪಿ ಸೇರಿದಂತೆ ಅನೇಕರಿದ್ದು. | Kannada Prabha

ಸಾರಾಂಶ

ಶೋಷಿತರು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಪರಿವರ್ತನೆಗಾಗಿ ದಾಸರು ಧ್ವನಿಯಾಗಿ ನಿಂತವರು. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಾಹಿತ್ಯ ರಚಿಸಿದರು ಎಂದು ಗುವಿವಿ ಕುಲಪತಿ ಡಾ.ಶಶಿಕಾಂತ ಉಡಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶೋಷಿತರು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಪರಿವರ್ತನೆಗಾಗಿ ದಾಸರು ಧ್ವನಿಯಾಗಿ ನಿಂತವರು. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಾಹಿತ್ಯ ರಚಿಸಿದರು ಎಂದು ಗುವಿವಿ ಕುಲಪತಿ ಡಾ.ಶಶಿಕಾಂತ ಉಡಿಕೇರಿ ಹೇಳಿದರು.

ನಗರದಲ್ಲಿ ಮಾಜಿ ಸೈನಿಕ ಶರಣಬಸಪ್ಪ ಓಗಿ ವೇದಿಕೆಯಲ್ಲಿ ಕಸಾಪ 3ನೇ ಕಲಬುರಗಿ ವಿಭಾಗೀಯ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಮಾಜದ ಶುದ್ಧೀಕರಣಕ್ಕೆ ದಾಸರು ಆಧ್ಯಾತ್ಮಿಕ ನೆಲೆಯಲ್ಲಿ ದಾಸ ಸಾಹಿತ್ಯ ರಚನೆ ಮಾಡಿದ್ದಾರೆ. ಆ ಸಾಹಿತ್ಯ ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ ಎಂದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಶರಣರು, ದಾಸರು ಮತ್ತು ಸೂಫಿ ಸಂತರು ಎಲ್ಲ ವರ್ಗದ ಜನರನ್ನು ಒಂದುಗೂಡಿಸುವಲ್ಲಿ ಸಾಹಿತ್ಯ ರಚಿಸಿದ್ದಾರೆ, ಆಧ್ಯಾತ್ಮಿಕ, ಸಾಮಾಜಿಕ ಜಾಗೃತಿಯನ್ನು ಮೂಡಿಸಿದ್ದಾರೆ. ಇವೆರಡು ಸಾಹಿತ್ಯ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪಾಲಿಕೆಯ ವಿಪಕ್ಷ ನಾಯಕಿ ಶೋಭಾ ದೇಸಾಯಿ, ಸ್ವಾಗತ ಸಮಿತಿಯ ಮಲ್ಲಣ್ಣ ನಾಗರಾಳ, ಕೃಷ್ಣಾಜೀ ಕುಲಕರ್ಣಿ, ಕಸಾಪ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ಸಿದ್ಧಲಿಂಗ ಬಾಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ , ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ , ಕಲ್ಯಾಣಕುಮಾರ ಶೀಲವಂತ, ಜಗದೀಶ ಮರಪಳ್ಳಿ ಮಾತನಾಡಿದರು.

ಡಾ. ಸುನಂದಾ ಸಾಲವಾಡಗಿ, ಓಂಕಾರ ನೃತ್ಯ ಸಾಧನಾ ಕಲಾ ತಂಡ, ಮಹಾಲಕ್ಷ್ಮೀ ಭಜನಾ ಮಂಡಳಿ, ಕಲ್ಪವೃಕ್ಷ ಶಿಕ್ಷಣ ಸಂಸ್ಥೆ, ರಂಗವಿಠಲ ಭಜನಾ ಮಂಡಳಿಯಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು.

ವಚನ- ದಾಸ ಸಾಹಿತ್ಯಗಳು ಜೀವನ ಕ್ರಮ

ನಂತರ ನಡೆದ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸಿದ್ದ ದಾಸ ಚಿಂತನೆ ಗೋಷ್ಠಿಯಲ್ಲಿ ದಾಸ ಸಾಹಿತ್ಯಕ್ಕೆ ಬ್ರಾಹ್ಮಣೇತರರ ಕೊಡುಗೆ ಕುರಿತು ಡಾ.ಜಗನ್ನಾಥ ತರನಳ್ಳಿ, ದಾಸ ಸಾಹಿತ್ಯ -ಸಾಮಾಜಿಕ ಕಾಳಜಿ ಕುರಿತು ಡಾ. ಶೈಲಜಾ ಕೊಪ್ಪರ, ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಶೇಷಮೂರ್ತಿ ಅವಧಾನಿ ಮಾತನಾಡಿದರು.

ಡಾ. ಶೈಲಜಾ ಕೊಪ್ಪ, ಪ್ರೊ. ಎಸ್.ಎಲ್. ಪಾಟೀಲ, ಸುರೇಶ ಗೌರೆ, ಚಂದ್ರಕಾಂತ ಏರಿ, ಜಗನ್ನಾಥ ಸೂರ್ಯವಂಶಿ, ಮಂಜುನಾಥ ಕಂಬಾಳಿಮಠ, ಗಂಗಾಧರ ಭಂಗರಗಿ, ಜಯಶ್ರೀ ಯಾದಗಿರಿ, ಮಲ್ಲಿನಾಥ ಸಂಗಶೆಟ್ಟಿ, ಸಂಗಪ್ಪ ಭೀಮಳ್ಳಿ, ಶಿವಕುಮಾರ ಸಿ.ಎಚ್., ಪ್ರಲ್ಹಾದ ಪೂಜಾರಿ, ದಾನೇಶ ಮಾಲಗತ್ತಿ ಇದ್ದರು.

ವ್ಯವಸ್ಥೆ ಮುರಿದು ಕಟ್ಟುವುದೇ ದಾಸರ ಆಶಯ

ಸಮಾರೋಪ ನುಡಿಗಳನ್ನಾಡಿದ ಗುಲಬರ್ಗಾ ವಿ.ವಿ. ನಿವೃತ್ತ ಕುಲಪತಿ ಡಾ. ಪರಿಮಾಳ ಅಂಬೇಕರ್, ಇದ್ದ ವ್ಯವಸ್ಥೆಯನ್ನು ಮುರಿದು ಕಟ್ಟುವುದೇ ದಾಸ ಸಾಹಿತ್ಯದ ಉದ್ದೇಶವಾಗಿದೆ ಎಂದರು.

ಡಾ. ಸಂತೋಷ ಹೊಸಮನಿ, ಡಾ. ಸುರೇಶ ಮಾಳೇಗಾಂವ, ಡಾ. ಇಂದುಮತಿ ದೇಶಮಾನ್ಯೆ, ವಸುಮತಿ ದೀಪಕ, ಶಕುಂತಲಾ ಚವ್ಹಾಣ, ವಿಜಯಲಕ್ಷ್ಮೀ, ಸ್ವಪ್ನಾ, ವೈಶಾಲಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ