ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇಗುಲದ ವಿಮಾನ ಗೋಪುರ ಕಳಶಾರೋಹಣ

KannadaprabhaNewsNetwork |  
Published : Oct 27, 2025, 12:00 AM IST
ವಿಮಾನ ಗೋಪುರ ಕಳಶಾರೋಹಣ  | Kannada Prabha

ಸಾರಾಂಶ

. ವಿಶೇಷ ಪುರೋಹಿತರ ನೇತೃತ್ವದಲ್ಲಿ ದೇವಿಯವರಿಗೆ ಅಭಿಷೇಕ, ನವದುರ್ಗ ಸಮೇತ ಚಂಡಿಕಾ ಹೋಮ, ಪ್ರತ್ಯಂಗಿರಿ ಹೋಮ ಹಾಗೂ ಮಹಾಪೂರ್ಣಾಹುತಿ ವಿಧಿಗಳು ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ ದಾಸೀಹಳ್ಳಿ ಗ್ರಾಮದ ಬೀದಿಗಳಲ್ಲಿ 108 ಕುಂಭಗಳ ಮೆರವಣಿಗೆ ಭಕ್ತಿ ಸಂಭ್ರಮವನ್ನು ಹೆಚ್ಚಿಸಿತು. ನಂತರ ವೃಶ್ಚಿಕ ಲಗ್ನದಲ್ಲಿ ಕಳಶಾರೋಹಣ, ಬಲಿ ಪ್ರಧಾನ ಹಾಗೂ ದೃಷ್ಟಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಅಮ್ಮನಹಟ್ಟಿ ಗಂಗಾಮಾಳಿಕಾ ದೇವಿ, ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸೇರಿದಂತೆ ಅನೇಕ ದೇವತೆಗಳ ಮೂರ್ತಿಗಳು ಆಗಮಿಸಿ ಕಾರ್ಯಕ್ರಮಕ್ಕೆ ವೈಭವ ತುಂಬಿದವು.

ಕನ್ನಡಪ್ರಭ ವಾರ್ತೆ ಅರಸೀಕೆರೆ ತಾಲೂಕಿನ ದಾಸೀಹಳ್ಳಿ ಗ್ರಾಮದಲ್ಲಿ ರಾಜರಾಜೇಶ್ವರಿ ಹುತ್ತದಮ್ಮ ದೇವಿಯವರ ನೂತನ ದೇವಾಲಯದ ವಿಮಾನ ಗೋಪುರ ಕಳಶಾರೋಹಣ ಕಾರ್ಯಕ್ರಮವು ಭವ್ಯವಾಗಿ ನೆರವೇರಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ಸಂಭ್ರಮ ನಡೆಯಿತು.ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆ ಹಾಗೂ ಗೋಪೂಜೆಗಳಿಂದ ಕಾರ್ಯಕ್ರಮ ಆರಂಭವಾಯಿತು. ವಿಶೇಷ ಪುರೋಹಿತರ ನೇತೃತ್ವದಲ್ಲಿ ದೇವಿಯವರಿಗೆ ಅಭಿಷೇಕ, ನವದುರ್ಗ ಸಮೇತ ಚಂಡಿಕಾ ಹೋಮ, ಪ್ರತ್ಯಂಗಿರಿ ಹೋಮ ಹಾಗೂ ಮಹಾಪೂರ್ಣಾಹುತಿ ವಿಧಿಗಳು ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ ದಾಸೀಹಳ್ಳಿ ಗ್ರಾಮದ ಬೀದಿಗಳಲ್ಲಿ 108 ಕುಂಭಗಳ ಮೆರವಣಿಗೆ ಭಕ್ತಿ ಸಂಭ್ರಮವನ್ನು ಹೆಚ್ಚಿಸಿತು. ನಂತರ ವೃಶ್ಚಿಕ ಲಗ್ನದಲ್ಲಿ ಕಳಶಾರೋಹಣ, ಬಲಿ ಪ್ರಧಾನ ಹಾಗೂ ದೃಷ್ಟಿ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಅಮ್ಮನಹಟ್ಟಿ ಗಂಗಾಮಾಳಿಕಾ ದೇವಿ, ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸೇರಿದಂತೆ ಅನೇಕ ದೇವತೆಗಳ ಮೂರ್ತಿಗಳು ಆಗಮಿಸಿ ಕಾರ್ಯಕ್ರಮಕ್ಕೆ ವೈಭವ ತುಂಬಿದವು. ದೇವಿಯವರಿಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಈ ಭವ್ಯ ಧಾರ್ಮಿಕ ಸಂಭ್ರಮದಲ್ಲಿ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್ ಮುಖಂಡ ಎನ್.ಆರ್‌. ಸಂತೋಷ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ದೇವಾಲಯ ಸಮಿತಿ ಸದಸ್ಯರು ಭಾಗವಹಿಸಿ ದೇವರ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!