ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಪಟ್ಟಣದಲ್ಲಿ ಆದ್ಯ ವಚನಕಾರರೂ, ವಚನ ಬ್ರಹ್ಮರೆಂದು ಖ್ಯಾತರಾದ ಶರಣ ದೇವರ ದಾಸಿಮಯ್ಯ ಅವರ ಪುತ್ಥಳಿಯನ್ನು ಕೊಳ್ಳೇಗಾಲದಲ್ಲಿ ಫೆ.14ರಂದು ಅನಾವರಣ ಮಾಡಲಾಗುತ್ತಿದೆ. ಈ ಪುತ್ಥಳಿಯು ದೇವಲ ಮಹರ್ಷಿ ಮಹಾದ್ವಾರದ ಬದಿಯಲ್ಲಿ ಅನಾವರಣಗೊಳ್ಳಲಿದ್ದು, ಪುತ್ಥಳಿ ನಿರ್ಮಾಣಕ್ಕೆ 15ಲಕ್ಷ ಕ್ಕಿಂತ ಹೆಚ್ಚಿನ ಹಣವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಚಿವ ಎನ್ ಮಹೇಶ್ ಆಪ್ತ ಸಹಾಯಕರಾಗಿದ್ದ ಎನ್. ಗಿರೀಶ್ ಬಾಬು ಸ್ವತಃ ವ್ಯಯಿಸಿದ್ದು 14ರ ಬೆಳಗ್ಗೆ 10ಗಂಟೆಗೆ ಪುತ್ಥಳಿಯೂ ಎಲ್ಲಾ ರಾಜಕೀಯ ಮುಖಂಡರು, ದೇವಾಂಗ ಪೇಟೆಯ ಕುಲಸ್ಥರು, ಯಜಮಾನರು, ಮುಖಂಡರುಗಳ ಸಮ್ಮುಖದಲ್ಲಿ ಜರುಗಲಿದ್ದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಾಯಿತ್ರಿ ಪೀಠ, ಹೇಮಕೂಟ ಹಂಪೆಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿಸ್ವಾಮಿಜಿಗಳು, ಮುದ್ದನೂರು ಸಂಸ್ಥಾನ ಮಠ ಯಾದಗಿರಿಯ ಡಾ ಈಶ್ವರಾನಂದ ಸ್ವಾಮೀಜಿಗಳು, ದೇವಾಂಗ ಪೇಟೆಯ ವೇ. ಬ್ರ. ಶ್ರೀ ಪೂಲಾ ಕುಮಾರಸ್ವಾಮಿಗಳು, ವೇ.ಬ್ರ. ಪರಸಂ ಮಹೇಶ್ ಸ್ವಾಮಿಗಳು, ಮಲ್ಲಿಕಾರ್ಜುನಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಪುತ್ಥಳಿ ಅನಾವರಣವನ್ನು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಜಗದೀಶ್ ಶೆಟ್ಟರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಶ್ರೀನಿವಾಸಪ್ರಸಾದ್, ನಿಗಮ ಮಂಡಳಿ ಅದ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕರಾದ ಎ. ಆರ್ ಕೖಷ್ಣಮೂರ್ತಿ, ಮಂಜುನಾಥ್, ವಿ.ಪ ಸದಸ್ಯ ಮಂಜೇಗೌಡ, ವಿಶೇಷ ಆಹ್ವಾನಿತರಾಗಿ ಇಸ್ರೋ ವಿಜ್ಞಾನಿ ಎಂ.ವಿ. ರೂಪ ಆಗಮಿಸಲಿದ್ದಾರೆ. ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕರಾದ ಎಸ್.ಬಾಲರಾಜು, ಹರ್ಷವರ್ಧನ್, ಆರ್.ನರೇಂದ್ರ, ಎಂ ಡಿ ಲಕ್ಷ್ಮಿ ನಾರಾಯಣ್, ಜಿ ಎನ್ ನಂಜುಂಡಸ್ವಾಮಿ, ನಿರಂಜನ್ ಕುಮಾರ್, ಎಲ್ ನಾಗೇಂದ್ರ, ಕೆ ಆರ್ ಐಡಿ ಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಚಲನಚಿತ್ರ ನಿದೇರ್ಶಕ ಎಸ್. ಮಹೇಂದರ್, ಆಂದ್ರ ದೇವಾಂಗ ಸಂಘದ ನಿಧೇ೯ಶಕರಾದ ಎ ಎನ್ ನಾಗರಾಜಯ್ಯ, ಪೌರಾಯುಕ್ತ ರಮೇಶ್, ನಗರಸಭೆ ಸದಸ್ಯ ಎ ಪಿ ಶಂಕರ್, ಎಸ್ ಆರ್ ಮನೋಹರ್, ಚಿಂತು ಪರಮೇಶ್, ಶ್ರೀಮತಿ ಪವಿತ್ರ ರಮೇಶ್, ಹಾಗೂ ದೇವಾಂಗ ಕುಲದ ಶೆಟ್ಟಗಾರರು, ಯಜಮಾನರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ. ಫೆ.14ರ ಬೆಳಗ್ಗೆ ಪುತ್ಥಳಿ ಅನಾವರಣ ಬಳಿಕ ಕಾರ್ಯಕ್ರಮ ಉದ್ಘಾಟನೆ, ಬಳಿಕ ಗಣ್ಯರ ಭಾಷಣ, ಸ್ವಾಮಿಜಿಗಳಿಂದ ಆಶೀರ್ವಚನ, ಗಣ್ಯರಿಗೆ ಸನ್ಮಾನ ಜರುಗಲಿದ್ದು ಸಂಜೆ 4ರಿಂದ ಸಾಂಸ್ಕೖತಿಕ ಕಾರ್ಯಕ್ರಮ, 7 ಗಂಟೆಗೆ ವಿದ್ವಾನ್ ಶಿವಕುಮಾರ ಶಾಸ್ತ್ರಿ ಅವರಿಂದ ದೇವರ ದಾಸಿಯಮಯ್ಯ ಅವರ ದಿವ್ಯ ಚರಿತ್ರೆಯನ್ನು ಹರಿಕಥೆ ಮೂಲಕ ನಡೆಯಲಿದೆ.