ವೈಚಾರಿಕ ಕ್ರಾಂತಿ ಮಾಡಿದ್ದ ದಾಸಿಮಯ್ಯ: ರಮೇಶ ಬುಳ್ಳಾ

KannadaprabhaNewsNetwork |  
Published : Aug 13, 2024, 12:48 AM IST
(ಪೊಟೋ 12ಬಿಕೆಟಿ1, ಲೇಖಕ ರಮೇಶ ಬಳ್ಳಾ ಮಾತನಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಚನ ಸಾಹಿತ್ಯದ ಮೂಲಕ ಲಿಂಗ-ತಾರತಮ್ಯ, ಬಡವ-ಶ್ರೀಮಂತ, ಮೇಲು-ಕೀಳುಗಳೆಂಬ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ 11 ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನವರು ಹೊಸ ಯುಗವನ್ನೇ ಸೃಷ್ಟಿಸಿ ದೇವಭಾಷೆಯನ್ನು ಜನಭಾಷೆಯನ್ನಾಗಿ ಮಾಡಿದ್ದಾರೆ ಎಂದು ಲೇಖಕ ರಮೇಶ ಬಳ್ಳಾ ಅವರು ಹೇಳಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆವಚನ ಸಾಹಿತ್ಯದ ಮೂಲಕ ಲಿಂಗ-ತಾರತಮ್ಯ, ಬಡವ-ಶ್ರೀಮಂತ, ಮೇಲು-ಕೀಳುಗಳೆಂಬ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ 11 ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನವರು ಹೊಸ ಯುಗವನ್ನೇ ಸೃಷ್ಟಿಸಿ ದೇವಭಾಷೆಯನ್ನು ಜನಭಾಷೆಯನ್ನಾಗಿ ಮಾಡಿದ್ದಾರೆ ಎಂದು ಲೇಖಕ ರಮೇಶ ಬಳ್ಳಾ ಅವರು ಹೇಳಿದರು.ಬಾಗಲಕೋಟೆ ದೇವಾಂಗ ಸಮಾಜದಿಂದ ವಿದ್ಯಾಗಿರಿಯಲ್ಲಿ ಆಯೋಜಿಸಿದ ದಾಸಿಮಯ್ಯನವರ ವಚನಗಳ ಮಾಸಿಕ ಚಿಂತನಗೋಷ್ಠಿಯಲ್ಲಿ ದಾಸಿಮಯ್ಯನವರ ವಚನಗಳಲ್ಲಿ ವೈಚಾರಿಕತೆ ಮತ್ತು ವಿಜ್ಞಾನ ಕುರಿತು ಮಾತನಾಡಿ ಹಲವಾರು ವಚನಗಳನ್ನು ಪ್ರಸ್ತಾಪಿಸಿದರು. ರಾಮದುರ್ಗದ ಪ್ರದೀಪ್ ಗುರೂಜಿ ಮಾತನಾಡಿ ನಡೆ-ನುಡಿಗಳು ಕ್ರಿಯೆ ಜ್ಞಾನಗಳು ಒಂದಾಗಿದ್ದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಅದು ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿಗೆ ಎಡೆಮಾಡಿ ಕೊಡುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಎಸ್.ವಿ.ಚೌಡಾಪುರ ವಹಿಸಿದ್ದರು. ಅಧ್ಯಕ್ಷೀಯ ನುಡಿಗಳ ನಾಡಿ, ಚಿಂತನಗೋಷ್ಠಿಗಳ ಮೂಲಕ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆಗಳು ಬೆಳೆದರೆ ಗೋಷ್ಠಿ ಸಾರ್ಥಕವಾಗುತ್ತದೆ ಎಂದರು.ಶುಭಾ ಚನ್ನಿ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಮೋಹನ್ ಗೌರೀಶ, ಶಿವಶಂಕರ ಮುತ್ತಗಿ, ಬಸವರಾಜ ಚೆನ್ನಿ, ಶಂಕ್ರಪ್ಪ ಹಳ್ಳದ, ಎಸ್.ಬಿ.ಮಾಡಬಾಳ, ರವಿ ಕರ್ಜಗಿ, ವಿಠ್ಠಲ ಹಡ್ಲಗೇರಿ ಹಾಗೂ ಮಹಿಳಾ ಮಂಡಳದ ಸದಸ್ಯರು ಚೆನ್ನಿ ಪರಿವಾರದವರು ಭಾಗವಹಿಸಿದ್ದರು. ಕಾರ್ಯದರ್ಶಿ ಸುರೇಶ ದಡ್ಡಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪ ಚನ್ನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹನೂರು ಕ್ರೀಡಾಂಗಣ ಅಭಿವೃದ್ಧಿಗೆ ಶುಕ್ರದೆಸೆ
ಕೊಪ್ಪ ಒಕ್ಕಲಿಗರ ಸಂಘಕ್ಕೆ ಸಹದೇವ್ ಬಾಲಕೃಷ್ಣ ಅಧ್ಯಕ್ಷರಾಗಿ ಪುನರಾಯ್ಕೆ