ಕನ್ನಡಪ್ರಭ ವಾರ್ತೆ ಸುರಪುರ
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪಾಲಕ ಮತ್ತು ಪೋಷಕರ ಪಾತ್ರ ಅಗತ್ಯವಾಗಿದೆ. ಶಿಕ್ಷಕರಾದವರು ಅಗಾಧವಾದ ಪಾಂಡಿತ್ಯ ಹೊಂದಿರಬೇಕು. ಅಂದಾಗ ಮಾತ್ರ ಮಕ್ಕಳಿಗೆ ಸೃಜನಶೀಲ ಜ್ಞಾನ ನೀಡಲು ಸಾಧ್ಯ ಎಂದರು.ಬಿಸಿಯೂಟ ಸಹಾಯಕ ನಿರ್ದೇಶಕ ಪಂಡಿತ ಎ. ನಿಂಬೂರ, ಸಂಸ್ಥೆಯ ಕಾರ್ಯದರ್ಶಿ ಶರಣಬಸಪ್ಪ ನಿಷ್ಠಿ, ಮಾತೋಶ್ರೀ ಡಾ. ಶಾಂತಲಾ ನಿಷ್ಠಿ ಮಾತನಾಡಿದರು. ಸಮಾರಂಭವನ್ನು ಕಡ್ಲಪ್ಪನವರ ನಿಷ್ಠಿ ವಿರಕ್ತಮಠ ಪ್ರಭುಲಿಂಗ ಸ್ವಾಮೀಜಿ ಮತ್ತು ಲಕ್ಷ್ಮಿಪುರ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು.
ಸುರಪುರ ಸಂಸ್ಥಾನದ ರಾಜಾ ಲಕ್ಷ್ಮಿನಾರಾಯಣ ನಾಯಕ, ರಾಜಾ ಮಂಜುನಾಥ ನಾಯಕ, ಬಿಆರ್‌ಸಿ ಖಾದರ ಪಟೇಲ್, ಪ್ರಾಂಶುಪಾಲ ಶಿವಾನಂದ ಹವಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಮೌನೇಶ ಬಡಿಗೇರ ಸ್ವಾಗತಿಸಿದರು. ರೇವಪ್ಪ ಪಾಟೀಲ್ ನಿರೂಪಿಸಿದರು. ಶರಣಗೌಡ ಬಿರಾದಾರ್ ವಂದಿಸಿದರು.