ತಾಯಿಯ ಮೃತದೇಹ ಕಂಡು ಮಗಳು ಸಾವು..!

KannadaprabhaNewsNetwork |  
Published : May 31, 2026, 03:15 AM IST
Mother

ಸಾರಾಂಶ

ಕಾಗವಾಡ: ಅಗಲಿದ ತಾಯಿಯ ಕಂಡು ಆಘಾತಕ್ಕೊಳಗಾದ ಮಗಳು ತಾಯಿಯ ಶವದ ಎದುರೇ ಪ್ರಾಣ ಬಿಟ್ಟ ಘಟನೆ ಸಂಭವಿಸಿದೆ. ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ 76 ವರ್ಷದ ಹಣಮವ್ವ ರಾಮು ಮುಜಗೋಣಿ ಸಾವನ್ನಪ್ಪಿದ ಮಗಳು.

ಕಾಗವಾಡ: ಅಗಲಿದ ತಾಯಿಯ ಕಂಡು ಆಘಾತಕ್ಕೊಳಗಾದ ಮಗಳು ತಾಯಿಯ ಶವದ ಎದುರೇ ಪ್ರಾಣ ಬಿಟ್ಟ ಘಟನೆ ಸಂಭವಿಸಿದೆ. ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ 76 ವರ್ಷದ ಹಣಮವ್ವ ರಾಮು ಮುಜಗೋಣಿ ಸಾವನ್ನಪ್ಪಿದ ಮಗಳು.  

ಘಟನೆ ವಿವರ

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ವಾಸವಾಗಿರುವ ಶತಾಯುಷಿ, ತಾಯಿ ಗಂಗವ್ವ ಚನ್ನಬಸಪ್ಪ ಪಾರ್ಥಹನಳ್ಳಿ(101) ಇವರು ಶುಕ್ರವಾರ ವಯೋಸಹಜವಾಗಿ ನಿಧನರಾಗಿದ್ದರು. ತಾಯಿಯ ಸಾವಿನ ಸುದ್ದಿ ತಿಳಿದು ಹಣಮವ್ವ ಶುಕ್ರವಾರ ತನ್ನ ಮಕ್ಕಳೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊದಲಬಾಗಿಗೆ ತೆರಳಿದ್ದಳು. ಆದರೆ, ಅಲ್ಲಿ ತಾಯಿಯ ಶವ ಕಂಡು ಆಘಾತಕ್ಕೊಳಗಾದ ಹಣಮವ್ವ ಕುಸಿದು ಬಿದ್ದಿದ್ದು, ಆಕೆಯೂ ಸಹ ತಾಯಿಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. 

ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮಕ್ಕೆ ವಿವಾಹ

ಮೃತ ಹಣುಮವ್ವನನ್ನು ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮಕ್ಕೆ ವಿವಾಹ ಮಾಡಿ ಕೊಟ್ಟಿದ್ದರು. ಅವರಿಗೆ ಮೂರು ಜನ ಗಂಡು ಮಕ್ಕಳು ಅಪಾರ ಬಂಧು ಬಳಗವಿದೆ. ಅವರ ಅಂತ್ಯಕ್ರಿಯೆ ಶನಿವಾರ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ