ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಶಿರಮಗೊಂಡನಹಳ್ಳಿಯ ಸುಧಾ ವೀರೇಂದ್ರ ಪಾಟೀಲ ಸಮುದಾಯ ಭವನದಲ್ಲಿ ಮಂಗಳವಾರ ತಮ್ಮ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿಮಾನ, ಪ್ರೀತಿಯಿಂದ ಅಭಿನಂದಿಸಿದ ಎಲ್ಲರಿಗೂ ತಾವು ಚಿರಋಣಿ ಎಂದರು.
1989ರಲ್ಲಿ ಯಡಿಯೂರಪ್ಪ, ನಾನು ಸೇರಿದಂತೆ ನಾಲ್ವರು ಮಾತ್ರ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದೆವು. ಆಗ ಸದನದಲ್ಲಿ ನಾಲ್ವರೂ ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಮೇಲೆ ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಿ, ಹೋರಾಟ ಮಾಡಿದ್ದೆವು. ಆ ಹೋರಾಟದಿಂದಲೇ ರೈತರ ಸಾಲಮನ್ನಾ ಮಾಡಿಸಿದ್ದೆವು ಎಂದು ಅವರು ಮೆಲುಕು ಹಾಕಿದರು.ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷ ಕಟ್ಟಲು ಸಾಕಷ್ಟು ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ದೊಡ್ಡ ಶಕ್ತಿಯಾಗಿ, ಅಧಿಕಾರ ಹಿಡಿಯಲಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.ಈ ವೇಳೆಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿದರು.