14ರಂದು ದಾವಣಗೆರೆ ಕನ್ನಡೋತ್ಸವ-2

KannadaprabhaNewsNetwork |  
Published : Nov 06, 2026, 01:30 AM IST
5ಕೆಡಿವಿಜಿ4-ದಾವಣಗೆರೆಯಲ್ಲಿ ಗುರುವಾರ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಶಿವರತನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಕನ್ನಡೋತ್ಸವ-2ರ ಅಂಗವಾಗಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಮತ್ತು ಸ್ವರಾದ ಸಂಗೀತ ವೃಂದದ ತಂಡದಿಂದ ವಿಶೇಷ ಕನ್ನಡ ಹಾಡುಗಳ ಸಂಗೀತ ಮೆಡ್ಲಿ ಕಾರ್ಯಕ್ರಮ ನ.14ರಂದು ನಗರದ ಲಲಿತಕಲಾ ಮಹಾವಿದ್ಯಾಲಯದ ಆವರಣದ ಥೀಮ್ ಪಾರ್ಕ್‌ನಲ್ಲಿ ನ.14ರಂದು ನಡೆಯಲಿದೆ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಶಿವರತನ್ ತಿಳಿಸಿದ್ದಾರೆ.

- 4ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸ್ಪರ್ಧೆ: ಶಿವರತನ್ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಕನ್ನಡೋತ್ಸವ-2ರ ಅಂಗವಾಗಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಮತ್ತು ಸ್ವರಾದ ಸಂಗೀತ ವೃಂದದ ತಂಡದಿಂದ ವಿಶೇಷ ಕನ್ನಡ ಹಾಡುಗಳ ಸಂಗೀತ ಮೆಡ್ಲಿ ಕಾರ್ಯಕ್ರಮ ನ.14ರಂದು ನಗರದ ಲಲಿತಕಲಾ ಮಹಾವಿದ್ಯಾಲಯದ ಆವರಣದ ಥೀಮ್ ಪಾರ್ಕ್‌ನಲ್ಲಿ ನ.14ರಂದು ನಡೆಯಲಿದೆ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಶಿವರತನ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಕನ್ನಡೋತ್ಸವದ ಪ್ರಯುಕ್ತ ಮಕ್ಕಳಿಗೆ ಹಾಡಿನ ಸ್ಪರ್ಧೆ ನಡೆಯಲಿದೆ. 4ರಿಂದ 7ನೇ ತರಗತಿಯ ಕಿರಿಯರ ವಿಭಾಗ, 8ರಿಂದ 10ನೇ ತರಗತಿಯವರಿಗೆ ಹಿರಿಯರ ವಿಭಾಗ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ಎರಡೂ ವಿಭಾಗಗಳ ಸ್ಪರ್ಧಿ ಮಕ್ಕಳು ಜಾನಪದ ಗಾಯನ, ಜಾನಪದ ನೃತ್ಯ, ವೇಷಭೂಷಣ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಕರಕುಶಲ ಸ್ಪರ್ಧೆ (ಕಸದಿಂದ ರಸ) ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಶಾಲಾ ಮಕ್ಕಳಿಗೆ ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ನೆನಪಿಸುವ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಿದ್ದು, ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಅದೇ ಸಂಜೆ 4 ಗಂಟೆಗೆ ತಾಯಿ ಭುವನೇಶ್ವರಿ ಪುತ್ಥಳಿ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಸ್ವರಾಗ ಸಂಗೀತ ಕಾರ್ಯಕ್ರಮವು ಅಂದು ಸಂಜೆ 5ರಿಂದ 7ರವರೆಗೆ ನಡೆಯಲಿದೆ. ಸರ್ವರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ-93803-21534, 98806-43878ಗೆ ಸಂಪರ್ಕಿಸಲು ಶಿವರತನ್ ತಿಳಿಸಿದರು.

ಸಂಘಟನೆಯ ಆದಾಪುರ ನಾಗರಾಜ, ದಾ.ಹ.ಶಿವಕುಮಾರ, ರಾಜಣ್ಣ, ಶುಭಮಂಗಲ, ಸುನೀತಾ ಭೀಮಣ್ಣ ಇತರರು ಇದ್ದರು.

- - -

-5ಕೆಡಿವಿಜಿ4:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ