ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ವಕೀಲರ ಸಭಾ ಭವನದಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಕೆ.ಎಂ.ಸುರೇಶ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2008ರಲ್ಲಿ ತಾವು ಕಾನೂನು ಸಚಿವರಿದ್ದಾಗ ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಉದ್ಘಾಟನೆಗೊಂಡಿದ್ದವು ಎಂದರು.
ನಾಡಿನ ಕೇಂದ್ರ ಬಿಂದು ದಾವಣಗೆರೆಯಲ್ಲೂ ಹೈಕೋರ್ಟ್ ಪೀಠದ ಅಗತ್ಯವಿದೆ. ವಕೀಲರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಹ ಈ ಬಗ್ಗೆ ಧ್ವನಿ ಎತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಚುನಾವಣೆಗಳು ಜನರಿಗೆ ತಮ್ಮ ಭಾವನೆ ವ್ಯಕ್ತಪಡಿಸಲು ಇರುವ ಅವಕಾಶವಾಗಿದೆ. ಅಂತಹ ಅವಕಾಶವನ್ನು ಪದವೀಧರ ಮತದಾರರು ಸಮರ್ಥವಾಗಿ ಬಳಸಬೇಕು. ವಿಪ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಮುಖಂಡರಾದ ಕೆ.ಎಂ.ಸುರೇಶ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾನು ಕೆ.ಎಂ.ಸುರೇಶ ಪರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದು, ನೀವೆಲ್ಲರೂ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶರಿಗೆ ಮತ ನೀಡುವ ಮೂಲಕ ಬೆಂಬಲಿಸಿ, ಗೆಲ್ಲಿಸಬೇಕು. ಆಗ್ನೇಯ ಪದವೀಧರರ ಕ್ಷೇತ್ರದ 10 ಚುನಾವಣೆಯಲ್ಲಿ 8 ಸಲ ಬಿಜೆಪಿ ಗೆದ್ದಿದೆ. 2 ಸಲ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ ಎಂದು ತಿಳಿಸಿದರು.
ನಾನು ಯಾವುದೇ ಜಿಲ್ಲೆ. ಊರಿನ ವಕೀಲರ ಸಂಘಕ್ಕೆ ಹೋದಾಗ ಕುಟುಂಬ ಸದಸ್ಯರನ್ನು ಭೇಟಿಯಾದಂತಾಗುತ್ತದೆ. ನಾನೊಬ್ಬ ಒಳ್ಳೆಯ ಲಾಯರ್ ಆಗಬೇಕೆಂದು ಬಯಸ್ಸಿದ್ದವನು. ಆದರೆ, ಕಾನೂನು ಸಚಿವನಾದೆ. ಓರ್ವ ಸರ್ಕಾರಿ ಶಾಲೆಯ ಶಿಕ್ಷಕರ ಮಗನಾದ ನಾನು ಶಿಕ್ಷಣ ಸಚಿವನೂ ಆದೆ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.
ಪಿತ್ತ ನೆತ್ತಿಗೇರಿದಾಗ ಇಂತಹ ಮಾತು ಬರುತ್ತವೆ: ಸಿಎಂ ಹೇಳಿಕೆಗೆ ಕಿಡಿ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸೇವೆ ಮಾಡಿದರೆ ಮುಕ್ತಿ ಸಿಗುತ್ತದೆಂದು ಸ್ವಾಮೀಜಿಗಳಿಗೆ ಹೇಳಿರುವುದು ಪಿತ್ತ ನೆತ್ತಿಗೇರಿದಾಗ ಮಾತ್ರ ಇಂತಹ ಪದ, ಮಾತುಗಳು ಹೊರ ಬರುತ್ತವೆ ಎಂದರು. ನಾವೆಲ್ಲರೂ ಖಾವಿ ಬಟ್ಟೆಗೆ, ಸ್ವಾಮೀಜಿಗಳು ಮಾಡುವ ಕಾರ್ಯಕ್ಕೆ ಶರಣಾಗಿದ್ದೇವೆ. ನಾವು ಸ್ವಾಮೀಜಿಗಳ ಆಶೀರ್ವಾದ ಪಡೆಯಬೇಕು. ಆದರೆ, ಅಂತಹ ಸ್ವಾಮೀಜಿಗಳಿಗೆ ಆಶೀರ್ವಾದ ಮಾಡುವ ಪರಿಸ್ಥಿತಿ ಬಂದು ಬಿಟ್ಟಿದೆ. ನಮ್ಮ ಸೇವೆ ಮಾಡಿ, ನೀವು ಚೆನ್ನಾಗಿರುತ್ತೀರಾ ಎಂಬ ಧೋರಣೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಧೋರಣೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಬಂದಿದೆಯೆಂಬುದನ್ನು ತೋರಿಸುತ್ತದೆ. ರಾಜಕೀಯ ಅಧಿಕಾರ, ಅದರ ಸ್ವಭಾವ, ಪಿತ್ತ ನೆತ್ತಿಗೇರಿಸುತ್ತದೆ. ಪಿತ್ತ ನೆತ್ತಿಗೇರಿದಾಗ ಸಹಜವಾಗಿಯೇ ಇಂತಹ ಪದಗಳು ಬರುತ್ತವೆ ಎಂದು ತಿಳಿಸಿದರು.
ದಾವಣಗೆರೆ: ಸ್ಟಿಂಗ್ ಆಪರೇಷನ್ ಕುರಿತಂತೆ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದು ತಮ್ಮ ಸಚಿವರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಕಳಿಸಿರುವ ಒಂದು ಸಂದೇಶವಾಗಿದ್ದು, ಮುಖ್ಯಮಂತ್ರಿ ಗಳಿಕೆಯಲ್ಲಿ ಎರಡು ಅಲುಗಿನ ಕತ್ತಿಯೂ ಇದೆ ಎಂದು ಸುರೇಶ ಕುಮಾರ ಹೇಳಿದ್ದಾರೆ.
ಎರಡನೇ ಮದುವೆ, ಎರಡನೇ ಮನೆ ಅಂತೆಲ್ಲಾ ಹೇಳಿಕೆಗಳನ್ನೂ ಸಿಎಂ ಆಡಿದ್ದಾರೆ. ಚುನಾವಣೆ ಗೆಲ್ಲಬೇಕಾದಾಗ ಇರುವ ಲಕ್ಷಣಗಳು ಬೇರೆ, ಚುನಾವಣೆ ಗೆದ್ದ ಮೇಲೆ ಇರಬೇಕಾದ ಲಕ್ಷಣಗಳೇ ಬೇರೆ. ಚುನಾವಣೆ ಗೆದ್ದು ಒಂದು ಸ್ಥಾನಕ್ಕೆ ಬಂದ ನಂತರ ಉದಾರತನ, ಸರ್ವವ್ಯಾಪಿ ಇರಬೇಕು. ಆ ಸ್ಥಾನಕ್ಕೆ ಬರುವ ತಂತ್ರವನ್ನು ಆಂತಹ ಸ್ಥಾನಕ್ಕೆ ಬಂದ ನಂತರವೂ ಬಳಸುತ್ತೇನೆನ್ನುವುದು ಒಳ್ಳೆಯ ಲಕ್ಷಣವಲ್ಲ ಎಂದು ಸಿಎಂ ಹೇಳಿಕೆಗೆ ಆಕ್ಷೇಪಿಸಿದರು.