ಕನ್ನಡಪ್ರಭ ವಾರ್ತೆ, ಹನೂರು
ಬಳಿಕ ರೈತರು ಮಾತನಾಡಿ, ಕಾವೇರಿ ಜಲ ವಿವಾದ ತೀರ್ಪು ಪ್ರಕಾರ ಪ್ರತಿವರ್ಷ 63.83 ಟಿಎಂಸಿ ನೀರು ಕುಡಿಯುವ ನೀರು ಹಾಗೂ ಸಣ್ಣ ನೀರಾವರಿ ಯೋಜನೆಗಳಿಗೆ ಮೀಸಲಾಗಿರಬೇಕು. ಆದರೆ ಸರ್ಕಾರ ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಫಲವಾಗಿದೆ. ಇದರ ಪರಿಣಾಮವಾಗಿ ನಮ್ಮ ಭಾಗದ ಅಂತರ್ಜಲ ಮಟ್ಟ ಕುಸಿದು ರೈತರು ಬೇಸಾಯ ಮಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ರೈತರ ಜೀವಾಳವಾದ ನೀರಾವರಿ ಯೋಜನೆ ಜಾರಿಗೆ ತರಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಧರಣಿಯಲ್ಲಿ ಸುಳ್ವಾಡಿ ಹಾಗೂ ಬಿದರಹಳ್ಳಿ ಚರ್ಚ್ ನ ಧರ್ಮ ಗುರುಗಳು ಮಹಿಳಾ ರೈತ ಸಂಘಟನೆಯ ಕನಕ, ಮಾಜಿ ಸೈನಿಕರಾದ ಜೋಸೆಫ್, ರೈತ ಸಂಘಟನೆಯ ಕಾರ್ಯಧ್ಯಕ್ಷ ಶೈಲೇಂದ್ರ, ಹಾಗೂ ರೈತ ಮುಖಂಡರಾದ ಅರ್ಪುತರಾಜ್, ಪುಟ್ಟಸ್ವಾಮಿ ಭಾಗವಹಿಸಿದ್ದರು.