ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ವಿಜ್ಞಾನ ವಿಭಾಗದಲ್ಲಿ ಬಾಗಲಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ (ಬಾಲಕರ ವಿಭಾಗದಲ್ಲಿ) ಭೀಮಪ್ಪ ಬಿರ್ಲಿ 600ಕ್ಕೆ 590 ಅಂಕ (ಶೇ.98.33) ಪಡೆದರೆ, ಹರೀಶ ಬಾಲರಡ್ಡಿ 600ಕ್ಕೆ 583 ಅಂಕ (ಶೇ.97.17), ಸಂಗಮೇಶ ಪಟ್ಟಣದ 600ಕ್ಕೆ 580 ಅಂಕ (ಶೇ.96.67) ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ದೇವಮ್ಮ ಯಡಹಳ್ಳಿ 600ಕ್ಕೆ 594 ಅಂಕ (ಶೇ.99), ಶ್ವೇತಾ ಹೊರಕೇರಿ 600ಕ್ಕೆ 579 ಅಂಕ (ಶೇ.96.50), ವಾಣಿಜ್ಯ ವಿಭಾಗದಲ್ಲಿ ಸಂಗೀತಾ ಗಾಡದಾರ 600ಕ್ಕೆ 593 ಅಂಕ (ಶೇ.98.83), ಲಕ್ಷ್ಮೀ ಭೂಮಾರ 600ಕ್ಕೆ 587 ಅಂಕ (ಶೇ.97.83), ತೇಜಶ್ವಿನಿ ದೊರೆಗೊಳ 600ಕ್ಕೆ 577 ಅಂಕ (ಶೇ.96.17) ಅಂಕ ಪಡೆದುಕೊಂಡವರನ್ನು ಸನ್ಮಾನಿಸಲಾಯಿತು.ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ವಿದ್ಯಾರ್ಥಿಗಳು ಸಾಧಿಸಿರುವ ಉತ್ತಮ ಫಲಿತಾಂಶ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ದ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು. ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.