ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಎಲ್ಲಾ ಅಧಿಕಾರಿಗಳದೇ ದರ್ಬಾರು. ಹೇಳೋರಿಲ್ಲ. ಕೇಳೋರಿಲ್ಲ ಅನ್ನುವಂತಾಗಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಿ.ಪ್ರಭು ಗುರುವಾರ ನಗರಸಭೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರಸಭೆಯಲ್ಲಿ ಯಾವ ಕೆಲಸಗಳು ಆಗುತ್ತಿಲ್ಲ. ಇ ಸ್ವತ್ತು ವಿತರಣೆಯಾಗಿಲ್ಲ. ಸಾರ್ವಜನಿಕರ ಯಾವ ಕೆಲಸಗಳೂ ಆಗುತ್ತಿಲ್ಲ. ಸಕಾಲದಲ್ಲಿ ಅರ್ಜಿಗಳೆ ಸ್ವೀಕೃತಿ ಆಗುತ್ತಿಲ್ಲ. ಪೌರಾಯುಕ್ತರು ಕಚೇರಿಯಲ್ಲಿ ಕೂತು ಏನು ಮಾಡ್ತಿದ್ದೀರಾ? ಅಧಿಕಾರಿಗಳನ್ನು ಕಂಟ್ರೋಲ್ ಮಾಡೋಕು ಆಗ್ತಿಲ್ಲ?. ಕೆಲವು ಅಧಿಕಾರಿಗಳು ಕಚೇರಿಗೆ ಬರೋಲ್ಲ. ಆದ್ರೆ ಹಾಜರಾತಿ ಹಾಕಿರ್ತಾರೆ. ಕಮೀಷನರ್ ಚೇರಲ್ಲಿ ಕೂತು ಏನ್ ಮಾಡ್ತೀದ್ದೀರಾ ಎಂದು ಕಮೀಷನರ್ ಮನ್ಸೂರ್ ಆಲಿಯವರನ್ನು ಮತ್ತು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಜಿ.ಪ್ರಭು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಸ್ವೀಕೃತಿ ಕೊಡದೆ ತಿಂಗಾಳುಗಟ್ಟಲೆ ಅವರನ್ನು ಅಲೆದಾಡಿಸಿ ಬೇಜಾರು ಮಾಡಿಸುತ್ತಿದ್ದೀರಿ. ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದರೂ ಅದನ್ನು ಮೊದಲು ಇನ್ ವರ್ಡ್‌ನಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ಕೊಡದೆ ತಿಂಗಳಾನುಗಟ್ಟಲೆ ಅಲೆದಾಡಿಸುವುದು ಯಾಕೆ? ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಹಾಜರಾತಿಗೆ ಸಹಿ ಹಾಕಿ ಗೈರು ಹಾಜರಾಗಿದ್ದರ ಬಗ್ಗೆ ಹೀಗೆ ಒಂದಲ್ಲಾ ಎರಡಲ್ಲಾ ಪ್ರತಿಯೊಂದು ವಿಭಾಗದಲ್ಲೂ ಕರ್ತವ್ಯ ಲೋಪ ಎಸಗುತಿದ್ದಾರೆ ಎಂಬುದನ್ನು ಪತ್ತೆಹಚ್ವಿದ ಜಿಲ್ಲಾಧಿಕಾರಿ ಎಲ್ಲಾ ಅದಿಕಾರಿಗಳಿಗೂ ತರಾಟೆಗೆ ತೆಗೆದುಕೊಂಡರು. ಜನಸ್ನೇಹಿಯಾಗಿ ಕೆಲಸ ಮಾಡಬೇಕಿದ್ದ ಕಚೇರಿಗಳು ಜನರನ್ನು ತಿಂಗಳಾನುಗಟ್ಟಲೆ ಅಲೆದಾಡಿಸುವುದು ತಪ್ಪು. ಬಾಕಿ ಇರುವ ಸಾರ್ವಜನಿಕರ ಕೆಲಸ ಮುಗಿಸಿ ಇಲ್ಲಂದ್ರೆ ಮನೆಗಳಲ್ಲಿ ಇರಿ ಎಂದು ಖಡಕ್ ಎಚ್ಚರಿಕೆ ನೀಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಇನ್ನು ಪೆಂಡಿಂಗ್ ಇರುವ ಫೈಲುಗಳನ್ನು ಕ್ಲಿಯರ್ ಮಾಡಲು ಇಬ್ಬರು ಶಿರಸ್ತೇದಾರರನ್ನು ನೇಮಕ ಮಾಡಿದ್ದು, ಅವರು ಇಲ್ಲಿನ ಎಲ್ಲಾ ಅಧಿಕಾರಿಗಳನ್ನು ಚುರುಕುಗೊಳಿಸಿ ಕೆಲಸ ಮಾಡಿಸಲು ತಿಳಿಸಲಾಗಿದೆ. ಇಲ್ಲಿ ಪೆಂಡಿಂಗ್ ಇರುವ ಎಲ್ಲ ಅರ್ಜಿದಾರರಿಗೆ ಡಿಸಿ ಸಹಿ ಹಾಕುತ್ತಿಲ್ಲ ಎಂದು ಸುಳ್ಳು ಹೇಳಿ ಕಾಲದೂಡುತ್ತಿರುವ ಬಗ್ಗೆಯೂ ನನ್ನ ಬಳಿ ದೂರುಗಳು ಬಂದಿವೆ. ನಗರಸಭೆ ಯಾವ ವಿಭಾಗದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ನೋಡಿಕೊಳ್ಳಲು ಸಕಾಲ ಮಾದರಿಯಲ್ಲಿ ಕೆಲಸ ಆಗಿರುವ ಬಗ್ಗೆ ಅರ್ಜಿದಾರ ಚೆಕ್ ಮಾಡಿಕೊಳ್ಳಲು ಅನುಕೂಲ ಅಗುವಂತೆ ಕೆಲಸ ಮಾಡಿಸಬೇಕು ಎಂದರು.ಈ ವೇಳೆ ನಗರಾಭಿವೃದ್ಧಿ ಯೋಜನಾ ನಿರ್ಧೇಶಕ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಮಂಜುಳ, ಜಿಲ್ಲಾದಿಕಾರಿ ಕಚೇರಿ ಅಧಿಕಾರಿಗಳು ಇದ್ದರು.ಸಿಕೆಬಿ-5ನಗರಸಭೆಗೆ ಜಿಲ್ಲಾಧಿಕಾರಿ ಜಿ.ಪ್ರಭು ದಿಢೀರ್ಟಿ ಭೇಟಿ ನೀಡಿ ಪೌರಾಯುಕ್ತ ಸೇರಿ ಎಲ್ಲ ಅದಿಕಾರಿಗಳಿಗೆ ತರಾಟೆಗೆ ತೆಗೆದು ಕೊಂಡರು.