ತಾಲೂಕಿನ ಹಾಗಲವಾಡಿ ಹೋಬಳಿಯ ಜೋಗಿಹಳ್ಳಿ ಗ್ರಾಮಸ್ಥರು ಮೊಬೈಲ್ ನೆಟ್ ವರ್ಕ್ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಹಾಗಲವಾಡಿ ಹೋಬಳಿಯ ಜೋಗಿಹಳ್ಳಿ ಗ್ರಾಮಸ್ಥರು ಮೊಬೈಲ್ ನೆಟ್ ವರ್ಕ್ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ಜೋಗಿಹಳ್ಳಿ ಗ್ರಾಮಸ್ಥರಿಗೆ ಮೊಬೈಲ್ ಟವರ್ ಇಲ್ಲದೆ ಯಾವುದೇ ಪೋನ್ ಗಳು ಬರುತ್ತಿಲ್ಲ ಪೋನ್ ಮಾಡಬೇಕಾದರೆ ಒಂದು ಕಿ.ಮೀ.ದೂರ ಹೋಗಿ ಪೋನ್ ನಲ್ಲಿ ಮಾತನಾಡುವ ಪರಿಸ್ಥಿತಿ ಎದುರಾಗಿದೆ. ಸುಮಾರು ಹತ್ತು ವರ್ಷ ಗಳಿಂದಲೂ ಮೊಬೈಲ್ ಟವರ್ ಹಾಕಿಕೊಡಿ ಎಂದು ಅಧಿಕಾರಿಗಳಿಗೂ ತಿಳಿಸಿದರೂ ಪ್ರಯೋಜವಾಗಿಲ್ಲ. ಊರಿನಲ್ಲಿ ಯಾರಿಗಾದರೂ ಸಮಸ್ಯೆ ಕಂಡು ಬಂದರೂ ಪೋನ್ ಗಳು ಹೋಗುವುದಿಲ್ಲ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಜೋಗಿಹಳ್ಳಿ ಗ್ರಾಮದಲ್ಲಿ 130ಮನೆಗಳು ಇದ್ದು ಈ ಊರಿಗೆ ಹೆಣ್ಣು ಕೊಡುವುದಕ್ಕೂ ಜನರು ಹಿಂಜರಿಯುತ್ತಾರೆ.ಪೋನ್ ಸಂಪರ್ಕವಿಲ್ಲದಿರುವಿದರಿಂದ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಜೋಗಿಹಳ್ಳಿ ಗ್ರಾಮ ಹಿಂದೂಳಿದ ಪ್ರದೇಶವಾಗಿದೆ. ಮೂಲಭೂತ ಸೌಕರ್ಯಗಳು ಇಲ್ಲದೆ ಕುಗ್ರಾಮವಾಗಿದೆ ಎನ್ನುತ್ತಾರೆ ಜೋಗಿ ಹಳ್ಳಿ ಗ್ರಾಮಸ್ಥರು.ಇಂತಹ ಅಧುನಿಕ 5ಜಿ. ನೆಟ್ ವರ್ಕ್ ಇದ್ದರೂ ಜೋಗಿಹಳ್ಳಿ ಗ್ರಾಮಕ್ಕೆ ಇಲ್ಲ ಮೊಬೈಲ್ ಟವರ್ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಮೊಬೈಲ್ ಟವರ್ ಹಾಕದೇ ಹೋದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಠಾಕಾರ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.