ಮದ್ದೂರು ತಾಲೂಕು ಕಚೇರಿಗೆ ಡೀಸಿ ಡಾ.ಕುಮಾರ್ ದಿಢೀರ್ ಭೇಟಿ, ಪರಿಶೀಲನೆ

KannadaprabhaNewsNetwork | Published : Apr 10, 2025 1:03 AM

ಸಾರಾಂಶ

ಮದ್ದೂರು ಪಟ್ಟಣದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಚೇರಿಯ ಕಂದಾಯ, ಸರ್ವೇ ವಿಭಾಗ, ದಾಖಲಾತಿ ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯ ವೖಖರಿ ವೀಕ್ಷಿಸಿ ಸಾರ್ವಜನಿಕರ ಕೆಲಸಗಳು ತಾಲೂಕ ಕಚೇರಿಯ ಕಂದಾಯ ವಿಭಾಗದಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಚೇರಿಯ ಕಂದಾಯ, ಸರ್ವೇ ವಿಭಾಗ, ದಾಖಲಾತಿ ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯ ವೖಖರಿ ವೀಕ್ಷಿಸಿ ಸಾರ್ವಜನಿಕರ ಕೆಲಸಗಳು ತಾಲೂಕ ಕಚೇರಿಯ ಕಂದಾಯ ವಿಭಾಗದಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ಜಮೀನು ಅಳತೆ, ಖಾತೆ ಬದಲಾವಣೆ, ಒತ್ತುವರಿ ತೆರವು, ಪೋಡಿ ದುರಸ್ತಿ ಹಾಗೂ ರೆವಿನ್ಯೂ ದಾಖಲಾತಿ ಪ್ರತಿಗಳನ್ನು ನೀಡಲು ಅಧಿಕಾರಿಗಳು ಮತ್ತು ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದರು.

ಈ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಡಾ.ಕುಮಾರ್ ಸಾರ್ವಜನಿಕ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ತ್ವರಿತ ಗತಿಯಲ್ಲಿ ಮಾಡಿಕೊಡಬೇಕು. ಅನಗತ್ಯವಾಗಿ ವಿಳಂಬ ಮಾಡುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಇದೇ ವೇಳೆ ಮದ್ದೂರು ತಹಶೀಲ್ದಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ತಹಸೀಲ್ದಾರ್ ಡಾ.ಸ್ಮಿತಾರಾಮು, ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ , ಶಿರಸ್ತೇದಾರ್ ಲಕ್ಷ್ಮಿ ನರಸಿಂಹ ಹಾಗೂ ಭುವನಸುಂದರ್ ಇದ್ದರು.

ಮೇವು ಕತ್ತರಿಸುವ ಯಂತ್ರ ವಿತರಣೆ

ಮಂಡ್ಯ: ತಾಲೂಕು ದುದ್ದ ಹೋಬಳಿ ಜವರೇಗೌಡನಕೊಪ್ಪಲು ಗ್ರಾಮದಲ್ಲಿ ಕೃಷಿ ಇಲಾಖೆ ಮಂಡ್ಯ ವತಿಯಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ ಮೇವು ಕತ್ತರಿಸುವ ಯಂತ್ರ ಮತ್ತು ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ರವರು ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ ರವರು ರೈತರು ಖುಷ್ಕಿ ಬೇಸಾಯದಲ್ಲಿ ಏಕ ಬೆಳೆ ಪದ್ಧತಿ ಬಿಟ್ಟು ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಹೆಚ್ಚಿನ ಲಾಭಗಳಿಸಿ ಸದೃಢರಾಗಬಹುದು. ರೈತರು ಕೃಷಿ ಇಲಾಖೆ ಮತ್ತು ಎಲ್ಲಾ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಲು ಕರೆ ನೀಡಿದರು. ನಂತರ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಸುನಿತಾರವರು ಕೃಷಿ ಇಲಾಖೆಯಲ್ಲಿ ಕೃಷಿಯಾಂತೀಕರಣ ಸೂಕ್ಷ್ಮ ನೀರಾವರಿ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇತರೆ ಯೋಜನೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರವಿ ಬೋಜೇಗೌಡ ರವರು, ಚಂದ್ರುರವರು, ಮಹೇಂದ್ರ ರವರು, ಕುಳ್ಳಂಬಯ್ಯ ರವರು, ಸಿದ್ದೇಗೌಡರವರು,ನಾಗರಾಜು ಜೆ ಬಿ ರವರು, ಮಹಾದೇವ ರವರು, ತಮ್ಮಣ್ಣ ರವರು, ಸವಿತಾ ರವರು, ಆನಂದ, ಅಧಿಕಾರಿಗಳಾದ ಹರ್ಷ ರವರು, ಗಂಗನರಸಿಂಹಯ್ಯ ರವರು ಹಾಗೂ ಇತರರಿದ್ದರು.

Share this article