ಡಿಸಿಯಿಂದ ಹಲವು ಇಲಾಖೆಗಳಲ್ಲಿ ಕೋಟಿಗಟ್ಟಲೆ ವಸೂಲಿ

KannadaprabhaNewsNetwork |  
Published : Dec 04, 2025, 01:30 AM IST
3ಎಚ್ಎಸ್ಎನ್14 :  | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯರ ಡಿಸೆಂಬರ್ ೬ರ ಕಾರ್ಯಕ್ರಮಕ್ಕೂ ವಿವಿಧ ಇಲಾಖೆಗಳಿಂದ ಕೋಟ್ಯಂತರ ವಸೂಲಿಗೆ ಇಳಿದಿರುವುದಾಗಿ ಗಂಭೀರ ಆರೋಪ ಮಾಡಿದ್ದು, ಸಿಎಂ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳಿಂದ ೪ರಿಂದ ೫ ಕೋಟಿ ವಸೂಲಿ ಮಾಡಲಾಗಿದೆ. ಹುಡಾ ಒಂದರಿಂದಲೇ ೧ ಕೋಟಿ ರು. ಹಣ ವಸೂಲಿ ಆಗಿದೆ. ಇದನ್ನು ಯಾವ ಕಾರ್ಯಕ್ರಮಕ್ಕೆ ಬಳಸುತ್ತಿದ್ದಾರೆ? ಜನರ ಊಟ, ವ್ಯವಸ್ಥೆ ಯಾರ ಹೊಣೆ? ಎಂದು ಪ್ರಶ್ನೆ ಮಾಡಿದರು. ನನಗೆ ನಿಖರ ಮಾಹಿತಿ ಇಲ್ಲ, ಆದರೆ ಹೀಗೆ ಮಾತುಗಳು ನಡೆಯುತ್ತಿದೆ. ಅಧಿಕಾರಿಗಳಿಂದ ವಸೂಲಿ ನಡೀತಿದೆ ಎಂದು ಹೇಳಿ ಗಂಭೀರ ಆರೋಪದ ಬಾಂಬ್ ಸಿಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಡಿ. 6ರಂದು ಹಾಸನ ನಗರದಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳಿಂದ ಕೋಟ್ಯಂತರ ರು. ವಸೂಲಿ ಮಾಡಲಾಗಿದೆ. ಇದರ ನೇತೃತ್ವವನ್ನು ಸ್ವತಃ ಜಿಲ್ಲಾಧಿಕಾರಿಗಳೇ ವಹಿಸಿಕೊಂಡಿದ್ದಾರೆ ಎಂದು ಶಾಸಕ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಗಂಭೀರವಾಗಿ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಶಾಸಕರಾದ ಸ್ವರೂಪ್‌, ಸಿ.ಎನ್‌. ಬಾಲಕೃಷ್ಣ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರ ಡಿಸೆಂಬರ್ ೬ರ ಕಾರ್ಯಕ್ರಮಕ್ಕೂ ವಿವಿಧ ಇಲಾಖೆಗಳಿಂದ ಕೋಟ್ಯಂತರ ವಸೂಲಿಗೆ ಇಳಿದಿರುವುದಾಗಿ ಗಂಭೀರ ಆರೋಪ ಮಾಡಿದ್ದು, ಸಿಎಂ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳಿಂದ ೪ರಿಂದ ೫ ಕೋಟಿ ವಸೂಲಿ ಮಾಡಲಾಗಿದೆ. ಹುಡಾ ಒಂದರಿಂದಲೇ ೧ ಕೋಟಿ ರು. ಹಣ ವಸೂಲಿ ಆಗಿದೆ. ಇದನ್ನು ಯಾವ ಕಾರ್ಯಕ್ರಮಕ್ಕೆ ಬಳಸುತ್ತಿದ್ದಾರೆ? ಜನರ ಊಟ, ವ್ಯವಸ್ಥೆ ಯಾರ ಹೊಣೆ? ಎಂದು ಪ್ರಶ್ನೆ ಮಾಡಿದರು. ನನಗೆ ನಿಖರ ಮಾಹಿತಿ ಇಲ್ಲ, ಆದರೆ ಹೀಗೆ ಮಾತುಗಳು ನಡೆಯುತ್ತಿದೆ. ಅಧಿಕಾರಿಗಳಿಂದ ವಸೂಲಿ ನಡೀತಿದೆ ಎಂದು ಹೇಳಿ ಗಂಭೀರ ಆರೋಪದ ಬಾಂಬ್ ಸಿಡಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ಭೂ ಅಕ್ರಮ:

೯೭ ಜನರಿಗೆ ೭೩ ಎಕರೆ ಭೂಮಿಯ ಅಕ್ರಮ ಮಂಜೂರಾತಿ, ೪೦೦ ಕೋಟಿ ರು. ವಂಚನೆ ಆರೋಪ ಕುರಿತು ಫೆಬ್ರವರಿಯಲ್ಲೇ ಕಂದಾಯ ಸಚಿವರಿಗೆ ಭೂ ಅಕ್ರಮದ ಬಗ್ಗೆ ದೂರು ಸಲ್ಲಿಸಲಾಗಿತ್ತು. ಸಚಿವ ಕೃಷ್ಣಬೈರೇಗೌಡ ಅವರು ತನಿಖೆಗೆ ಸೂಚನೆ ನೀಡಿದರೂ ಯಾವ ಪ್ರಗತಿ ಕಾಣಲಿಲ್ಲ. ಚಿಕ್ಕಕೊಂಡಗೊಳ ಗ್ರಾಮದಲ್ಲಿ ೭೩ ಎಕರೆ ಭೂಮಿಯನ್ನು ೯೭ ಜನರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದ್ದು, ಈ ಭೂಮಿಯ ಮೌಲ್ಯ ಸುಮಾರು ೪೦೦ ಕೋಟಿಗೂ ಹೆಚ್ಚು ಇದೆ. ಜೆಡಿಎಸ್ ಶಾಸಕರು ಇದು ವಿಶಾಲ ಪ್ರಮಾಣದ ಭೂ ವಂಚನೆ ಎಂದು ಆರೋಪಿಸಿ, ತಕ್ಷಣ ಎಸ್‌ಐಟಿ ರಚನೆ ಮಾಡಿ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು ಎಂದರು.

೪೦ ವರ್ಷ ಯಾರೂ ಸ್ವಾಧೀನಕ್ಕೆ ಬರದ ಭೂಮಿ ೨೦೨೩ರಲ್ಲಿ ಏಕಾಏಕಿ ಕಾಯಂ ಸಾಗುವಳಿ ಚೀಟಿ ನೀಡಲಾಗಿದೆ. ಈ ಭೂಮಿ ಮಂಜೂರು ಆಗಿ ಸುಮಾರು ೪೦ ವರ್ಷವಾದರೂ ಯಾರೂ ಸ್ವಾಧೀನಕ್ಕೆ ಬಂದಿಲ್ಲ. ೨೦೨೩ರಲ್ಲಿ ಏಕಾಏಕಿ ಕಾಯಂ ಸಾಗುವಳಿ ಚೀಟಿ ನೀಡಲಾಗಿದೆ. ಈಗ ವೇಗವಾಗಿ ಬಡಾವಣೆ ನಿರ್ಮಾಣ ಪ್ರಾರಂಭವಾಗಿದೆ. ಸ್ಥಳದಲ್ಲಿ ರಾಜಕಾಲುವೆಯನ್ನೇ ಮುಚ್ಚಿ ರಸ್ತೆ ನಿರ್ಮಿಸಿರುವ ಗಂಭೀರ ಆರೋಪವೂ ಕೇಳಿಬಂದಿದ್ದು, ಈ ಬೆಳವಣಿಗೆಗಳು ಯಾರಾದರೂ ಬಲವಾದ ಪ್ರಭಾವಕ್ಕೆ ಒಳಗಾಗಿ ಅಕ್ರಮ ಮಂಜೂರಾತಿ ನಡೆದಿದೆ ಎಂಬ ಅನುಮಾನವನ್ನು ಬಲಪಡಿಸುತ್ತಿವೆ ಎಂದು ದೂರಿದರು. ಹಾಸನದ ಶಾಸಕ ಎಚ್. ಪಿ. ಸ್ವರೂಪ್ ಮಾತನಾಡಿ, ಹಾಸನಕ್ಕೆ ಒಂದೇ ಒಂದು ರುಪಾಯಿ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಸನ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಸರ್ಕಾರದಿಂದ ಯಾವುದೇ ಕೆಲಸವೇ ಆಗಿಲ್ಲ. ಡಿಸೆಂಬರ್ ೬ರಂದು ಸಿಎಂ ಬರುತ್ತಿದ್ದಾರೆ. ಆದರೆ ಉದ್ಘಾಟನೆಯಾಗಲಿರುವ ಕೆಲಸಗಳೆಲ್ಲಾ ರೇವಣ್ಣ ಅವರ ಉಸ್ತುವಾರಿ ಅವಧಿಯದ್ದು, ಅನುದಾನ ಕುರಿತು ಅವರು ಅಧಿವೇಶನಗಳಲ್ಲಿ ಹಲವು ಬಾರಿ ಪ್ರಶ್ನಿಸಿದರೂ ಸರ್ಕಾರ ಬೇಕಾಬಿಟ್ಟಿ ಉತ್ತರ ನೀಡಿದೆ. ಹಾಸನ ಮಹಾನಗರಪಾಲಿಕೆಯ ಮೇಲ್ದರ್ಜೆಗೆ ಏರಿದರೂ ಅನುದಾನ ಮಾತ್ರ ಶೂನ್ಯ, ಹಾಸನ ನಗರಸಭೆಯನ್ನು ಮಹಾನಗರಪಾಲಿಕೆಗೆ ಮೇಲ್ದರ್ಜೆ ಮಾಡಲಾಗಿದೆ. ಹೊಸದಾಗಿ ೩೭ ಹಳ್ಳಿಗಳನ್ನು ಸೇರಿಸಲಾಗಿದೆ. ರಾಯಚೂರು ಮಹಾನಗರಪಾಲಿಕೆಗೆ 200 ಕೋಟಿ ರು. ಅನುದಾನ ಬಿಡುಗಡೆಯಾದರೂ, ಹಾಸನಕ್ಕೆ ಮಾತ್ರ ನಯಾಪೈಸೆ ಅನುದಾನ ನೀಡಿಲ್ಲ. ಸರ್ಕಾರದ ಮಲತಾಯಿ ಧೋರಣೆ ವಿರುದ್ದ ಈ ಚಳಿಗಾಲದ ಅಧಿವೇಶನದಲ್ಲಿ ಗಟ್ಟಿಯಾಗಿ ಹೋರಾಟ ಮಾಡುತ್ತೇನೆ ಎಂದು ಸ್ವರೂಪ್ ಪ್ರಕಾಶ್ ಹೇಳಿದರು.

ಅಧಿಕೃತ, ಅನಧಿಕೃತ ಬಡಾವಣೆ ನಿರ್ಮಾಣದ ಕುರಿತು ಹಿಂದಿನ ಅಧಿವೇಶನದಲ್ಲೇ ಪ್ರಶ್ನೆ ಕೇಳಲಾಗಿತ್ತಾದರೂ ಕ್ರಮ ಕೈಗೊಳ್ಳಲಾಗಿಲ್ಲ. ನಗರ ವ್ಯಾಪ್ತಿಯ ೨೫ ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ನಗರದ ಹೊರವಲಯದ ಚಿಕ್ಕಕೊಂಡಗೊಳ ಗ್ರಾಮ ವ್ಯಾಪ್ತಿಯಲ್ಲಿ ಈ ಅಕ್ರಮ ಮಂಜೂರಾತಿ ನಡೆದಿದೆಯೆಂಬ ಆರೋಪ ಇದ್ದು, ಒಟ್ಟು ಅವ್ಯವಹಾರದ ಅಂದಾಜು ೪೦೦ ಕೋಟಿ ಅಕ್ರಮವಾಗಿದೆ. ಕಂದಾಯ ಸಚಿವರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಆದರೆ ವರ್ಷ ಕಳೆದರೂ ಒಂದು ಹೆಜ್ಜೆಯೂ ಮುಂದುವರಿಯಲಿಲ್ಲ ಎಂದು ದೂರಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜೆಡಿಎಸ್ ಶಾಸಕರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂ ಅಕ್ರಮ, ವಂಚನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಭಾರೀ ಆರೋಪ ಹೊರಬಿದ್ದಿದೆ. ಈ ದೊಡ್ಡ ಮಟ್ಟದ ಭೂ ವಂಚನೆಯ ಬಗ್ಗೆ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದರು. ೭೩ ಎಕರೆ ಭೂಮಿ ೯೭ ಜನರಿಗೆ ಅಕ್ರಮ ಮಂಜೂರಾತಿ ಮಾಡಲಾಗಿದೆ. ನಗರದ ಹೊರವಲಯದ ಚಿಕ್ಕಕೊಂಡಗೊಳ ಗ್ರಾಮದಲ್ಲಿ ೯೭ ಜನರಿಗೆ ಅಕ್ರಮವಾಗಿ ೭೩ ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಅಕ್ರಮದ ಒಟ್ಟು ಮೌಲ್ಯ ಸುಮಾರು ೪೦೦ ಕೋಟಿ ಎಂದು ಅಂದಾಜಿಸಲಾಗಿದೆ. ಇದು ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯಲ್ಲೇ ನಡೆದಿರುವ “ದೊಡ್ಡ ವಂಚನೆ” ಎಂದು ಅವರು ಆರೋಪಿಸಿದರು. ಫೆಬ್ರವರಿಯಲ್ಲೇ ದೂರು ನೀಡಿ ತನಿಖೆಗೆ ಸೂಚನೆ ಕೊಡಲಾಗಿದ್ದರೂ ಆದರೆ ಕ್ರಿಯಾಶೀಲತೆ ಶೂನ್ಯವಾಗಿದೆ. ಸಚಿವ ಕೃಷ್ಣಬೈರೇಗೌಡ ಅವರು ತನಿಖೆಗೆ ಸೂಚನೆ ನೀಡಿದ್ದರೂ, ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ಹೇಳಲಾಗಿದೆ.

೪೦ ವರ್ಷಗಳ ಹಿಂದೆ ಮಂಜೂರಾದ ಈ ಭೂಮಿಯನ್ನು ಸ್ವಾಧೀನಕ್ಕೆ ಬರಲು ಯಾರೂ ಮುಂದೆ ಬರಲಿಲ್ಲ. ಆದರೆ ೨೦೨೩ರಲ್ಲಿ ಏಕಾಏಕಿ ಕಾಯಂ ಸಾಗುವಳಿ ಚೀಟಿ ನೀಡಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವೇಗವಾಗಿ ಬಡಾವಣೆ ನಿರ್ಮಾಣ ನಡೆಯುತ್ತಿರುವುದನ್ನೂ ಶಾಸಕರು ಪ್ರಶ್ನಿಸಿದರು. ರಾಜಕಾಲುವೆಯನ್ನೇ ಮುಚ್ಚಿ ರಸ್ತೆ ನಿರ್ಮಾಣ. ಈ ಪ್ರದೇಶದಲ್ಲಿ ರಾಜಕಾಲುವೆಯನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದು, ಇದು ಸಂಪೂರ್ಣ ಅಕ್ರಮ ಮತ್ತು ಪರಿಸರ ಹಾನಿಗೆ ಕಾರಣವಾಗುವ ಕ್ರಮ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲಾ ಅಂಶಗಳನ್ನು ಆಧಾರವಾಗಿ ಮುಂದಿಟ್ಟು, ಜೆಡಿಎಸ್ ಶಾಸಕರು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ,

ಭೂ ಅಕ್ರಮಕ್ಕೆ ಕಾರಣರಾದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ತನಿಖೆಗೆ ತಡವಾಗುತ್ತಿರುವುದು ಅನುಮಾನಾಸ್ಪದ ಎಂದು ಹೇಳಿದರು.

==*ಬಾಕ್ಸ್: ಹಾಸನ ಕ್ಷೇತ್ರಕ್ಕಾದರೂ ಅನುದಾನ ಕೊಡಿ

ನಮಗೆ ಅನುದಾನ ಕೊಡದಿದ್ದರೂ ಪರವಾಗಿಲ್ಲ. ಆದರೇ ಹಾಸನದ ಶಾಸಕ ಸ್ವರೂಪ್ ಪ್ರಕಾಶ್ ಅವರ ಹಾಸನ ಕ್ಷೇತ್ರಕ್ಕೆ ಅನುದಾನ ಕೊಡುವಲ್ಲಿ ಸರ್ಕಾರ ತೋರಿಸಿರುವ ಮಲತಾಯಿ ಧೋರಣೆಗೆ ಚಳಿಗಾಲದ ಅಧಿವೇಶನದಲ್ಲಿ ಗಟ್ಟಿಯಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ರಾಯಚೂರಿಗೆ ಅನುದಾನ ನೀಡಿರುವಂತೆ ಹಾಸನಕ್ಕೂ ೨೦೦ ಕೋಟಿ ಅನುದಾನ ಬೇಡ ಕನಿಷ್ಠ ೧೦೦ ಕೋಟಿ ರು. ಅನುದಾನ ನೀಡುವಂತೆ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ರೇವಣ್ಣ ಧೈರ್ಯ ತುಂಬಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಡಘಟ್ಟ ಗ್ರಾ.ಪಂ.ಗೆ ಗಾಂಧೀಗ್ರಾಮ ಪುರಸ್ಕಾರ: ರುದ್ರಮ್ಮ ಬಸವರಾಜು
ಕಳವಾಗಿದ್ದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ