ಕನ್ನಡಪ್ರಭ ವಾರ್ತೆ ಕೋಲಾರಬಕ್ರೀದ್ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣೆ, ಹತ್ಯೆ ತಡೆಗಟ್ಟಲು ಕೋರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಧರ್ಮದಂಗಲ್ ನಡೆಸಲು ಷಡ್ಯಂತ್ರ ನಡೆಸಿ ಹಿಜಾಬ್ ಮರು ಜಾರಿ ಮಾಡಿರುವ ರಾಜ್ಯ ಸರ್ಕಾರದ ಧರ್ಮವಿರೋಧಿ ಕೃತ್ಯಗಳನ್ನು ಖಂಡಿಸಿ ಬಜರಂಗದಳದಿಂದ ಡಿಡಿಪಿಐ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.ಬಜರಂಗದಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಹರಿಪ್ರಸಾದ್‌ಗೆ ಮನವಿ ಸಲ್ಲಿಸಿ ಮಾತನಾಡಿ, ಬಕ್ರೀದ್ ವೇಳೆ ರಾಜ್ಯಾದ್ಯಂತ ಕಾನೂನುಬಾಹಿರವಾಗಿ ಗೋಹತ್ಯೆ, ಸಾಗಾಣಿಕೆ ನಡೆಯುವ ಸಾಧ್ಯತೆ ಇದೆ, ಇದನ್ನು ತಡೆಗಟ್ಟಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯಡಿ ಕ್ರಮಕ್ಕೆ ಆಗ್ರಹಿಸಿದರು.ಬೀಟ್ ಪೊಲೀಸರನ್ನು ಹಾಕಿ ಜಾನುವಾರು ಹತ್ಯೆ ನಡೆಯುವ ಮನೆ, ಕಟ್ಟಡ ಖಾಲಿ ಮಾಡಿಸಿ ಜಮೀನುಗಳನ್ನು ಜಪ್ತಿ ಮಾಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು. ವಧೆಯಾದ ಪ್ರತಿ ಜಾನುವಾರಿಗೂ ತಲಾ ೧ ಲಕ್ಷ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.ಸಣ್ಣಪುಟ್ಟ ಕಳವು ಪತ್ತೆ ಹಚ್ಚುವ ಪೊಲೀಸರಿಗೆ ದೊಡ್ಡದೊಡ್ಡ ಗೋವುಗಳ ಸಾಗಾಣೆ, ಹತ್ಯೆ ಗಮನಕ್ಕೆ ಬರುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು. ಜಿಲ್ಲಾ ಮಟ್ಟದಲ್ಲಿ ಪ್ರಾಣಿ ದಯಾಸಂಘ ಒಳಗೊಂಡು ಅಗತ್ಯ ಇಲಾಖೆಗಳ ಸಮನ್ವಯ ಸಾಧಿಸಿ ಸಭೆ ಕರೆದು ಬಕ್ರೀದ್ ಸಂದರ್ಭದಲ್ಲಿ ಜಾನುವಾರು ಬಲಿಯಾಗದಂತೆ ಕ್ರಮವಹಿಸಲು ಆಗ್ರಹಿಸಿ, ಹಿಂದೂಗಳ ಪೂಜ್ಯನೀಯ ಗೋವಂಶವನ್ನು ರಕ್ಷಿಸಲು ಬಜರಂಗದಳ ಕಟಿಬದ್ಧವಾಗಿದೆ ಎಂದು ತಿಳಿಸಿದರು.
ಹಿಜಾಬ್ ಜಾರಿಗೆ ಖಂಡನೆ:
ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ, ನ್ಯಾಯಾಂಗ ನಿಂದನೆ ಮಾಡಿರುವ ರಾಜ್ಯ ಸರ್ಕಾರ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ಕೇಸರಿ ಶಲ್ಯ ನಿಷೇಧಿಸಿ ಮಕ್ಕಳನ್ನು ದಾರಿ ತಪ್ಪಿಸುತ್ತಿದೆ, ಶಾಲೆಗಳಲ್ಲಿ ಸಮಾನತೆ ಕಾಪಾಡಲು ಇರುವ ಸಮವಸ್ತ್ರ ನೀತಿಯನ್ನೇ ಗಾಳಿಗೆ ತೂರಿದೆ ಎಂದು ಕಿಡಿಕಾರಿದರು.ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ಶಾಲೆ, ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ನಡುವೆ ಸಂಘರ್ಷ ತಂದಿಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಮುಖಂಡರಾದ ಬಾಲಾಜಿ, ಬಾಬು, ಮಂಜಣ್ಣ, ಭವಾನಿ, ವಿಶ್ವ, ರವಿ, ಮಂಜು, ವಿಶು, ಮುರಳಿ, ಪ್ರವೀಣ್, ವಿನೋದ್, ವಿಶಾಕ್, ಮಂಜುನಾಥ್, ವಿನೋದ್, ಆನಂದ್, ಅನಂತು, ಅರವಿಂದ್, ರಾಹುಲ್, ರಮೇಶ್, ಸುಹಾಸ್, ದೇವರಾಜು, ದೀಪಕ್, ಬಾಲಾಜಿ, ಅಭಿ, ರಾಜು, ಗೋವಿಂದ್, ಸುರೇಶ್, ಪ್ರಶಾಂತ್ ಇದ್ದರು.ಫೋಟೋ...೧೯ಕೆಎಲ್‌ಆರ್-೧