ಚಿತ್ತಾಪುರ, ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಡಿಸಿ ಭೇಟಿ

KannadaprabhaNewsNetwork |  
Published : Mar 22, 2024, 01:03 AM IST
ಫೋಟೋ- 21ಜಿಬಿ3 ಮತ್ತು 21ಜಿಬಿ4 | Kannada Prabha

ಸಾರಾಂಶ

ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕಲಬುರಗಿ ಗ್ರಾಮೀಣ ಮತ್ತು ಚಿತ್ತಾಪುರ ಮತಕ್ಷೇತ್ರದ ವ್ಯಾಪ್ತಿ ವಿವಿಧ ಮತಗಟ್ಟೆಗಳಿಗೆ ಭೇಟಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭಾ ಚುನಾವಣೆ ಹಿನ್ನೆಲೆ ಸತತ 3ನೇ ದಿನವೂ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕಲಬುರಗಿ ಗ್ರಾಮೀಣ ಮತ್ತು ಚಿತ್ತಾಪುರ ಮತಕ್ಷೇತ್ರದ ವ್ಯಾಪ್ತಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಯಲ್ಲಿನ ಮೂಲಸೌಕರ್ಯ ಕುರಿತು ಪರಿಶೀಲಿಸಿದರು.

ಕಲಬುರಗಿ ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿ ಚುನಾವಣಾ ಸಿದ್ಧತೆ ಬಗ್ಗೆ ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಅವರಿಂದ ಮಾಹಿತಿ ಪಡೆದುಕೊಂಡರು. ಕುಸನೂರ, ಶ್ರೀನಿವಾಸ ಸರಡಗಿಯಲ್ಲಿ ಮತಗಟ್ಟೆ ವೀಕ್ಷಿಸಿದರು.

ನಂತರ ಚಿತ್ತಾಪೂರ ಮತಕ್ಷೇತ್ರದ ಗುಂಡಗುರ್ತಿ, ಐನೊಳ್ಳಿ ಮತಗಟ್ಟೆ ವೀಕ್ಷಿಸಿದರು. ಮಾಡಬೂಳದಲ್ಲಿ ವಲನರೇಬಲ್ ಮತಗಟ್ಟೆ ಇರುವ ಕಾರಣ ಮತದಾರರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಮಾಡಲು ಏನಾದರು ಅಡ್ಡಿಗಳಿವೆ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದರು. ಏನೇ ಸಮಸ್ಯೆ ಇದ್ದರೆ ಸ್ಥಳೀಯ ಅಧಿಕಾರಗಳ ಗಮನಕ್ಕೆ ತರಬೇಕೆಂದರು.

ತದನಂತರ ಚಿತ್ತಾಪೂರ ಪಟ್ಟಣದಲ್ಲಿ ಸ್ಟ್ರಾಂಗ್ ರೂಂ ಆಗಿ ಗುರುತಿಸಿಕೊಂಡಿರುವ ಸರ್ಕಾರ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಸ್ಟ್ರಾಂಗ್ ರೂಂಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಸಿಸಿಟಿವಿ ಹಾಕಿಸಬೇಕು ಎಂದರು. ನಂತರ ವಾಡಿ ಪಟ್ಟಣದ ಸವಿತಾ ಸಮಾಜ ಸಮುದಾಯ ಭವನದ ಮತಗಟ್ಟೆ ವೀಕ್ಷಣೆ ಮಾಡಿದರು.

ಎಸ್.ಪಿ ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯ್ತಿ ಸಿ.ಇ.ಒ. ಭಂವರ್ ಸಿಂಗ್ ಮೀನಾ, ಚಿತ್ತಾಪೂರ ಎ.ಆರ್.ಒ ನವೀನ್ ಯು. ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ