ಡಿಸಿಸಿ ಬ್ಯಾಂಕ್‌ ಚುನಾವಣೆ: 8 ಮಂದಿ ಆಯ್ಕೆ

KannadaprabhaNewsNetwork |  
Published : May 29, 2025, 01:38 AM IST
೨೮ಕೆಎಲ್‌ಆರ್-೧೪ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ನಡೆದ  ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗಿದ್ದು, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಗೆಲುವು ಘೋಷಣೆಯಾಗುತ್ತಿದ್ದಂರೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕ್‌ನ ೧೨ ನಿರ್ದೇಶಕರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ೧೨ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಈ ಮೊದಲೇ ೬ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಒಟ್ಟು ೧೨ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳ ಫಲಿತಾಂಶಕ್ಕೆ ಕೋರ್ಟ್ ತಡೆ ನೀಡಿದೆ.

ಕನ್ನಡಪ್ರಭ ವಾರ್ತೆ ಕೋಲಾರತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ೧೨ ನಿರ್ದೇಶಕರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ೧೨ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಈ ಮೊದಲೇ ೬ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಒಟ್ಟು ೧೨ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳ ಫಲಿತಾಂಶಕ್ಕೆ ಕೋರ್ಟ್ ತಡೆ ನೀಡಿದೆ.ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಗೋವಿಂದಗೌಡರು ೨೯ ಮತ ಪಡೆದರೆ, ಶಾಸಕ ಕೆ.ವೈ.ನಂಜೇಗೌಡರ ಆಪ್ತ ಬಿ.ಆರ್.ಶ್ರೀನಿವಾಸ್ ೧೭ ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ. ವಿಜೇತ ಅಭ್ಯರ್ಥಿಗಳು: ಬಂಗಾರಪೇಟೆ ತಾಲೂಕು ಕೃಷಿಪತ್ತಿನ ಸಹಕಾರ ಸಂಘಗಳಿಂದ ಕೆ.ಎನ್.ರಂಗನಾಥಾಚಾರಿ, ಮುಳಬಾಗಿಲು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅಭ್ಯರ್ಥಿ ವಿ.ರಘುಪತಿರೆಡ್ಡಿ, ಶ್ರೀನಿವಾಸಪುರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸ್ಪರ್ಧಿಸಿದ್ದ ಎ.ಸಿ.ನಾಗರತ್ನ, ಗುಡಿಬಂಡೆ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ೫ ಮತ ಪಡೆದ ಹೆಚ್.ಎನ್.ಮಂಜುನಾಥರೆಡ್ಡಿ, ಗೌರಿಬಿದನೂರು ಮತಕ್ಷೇತ್ರದಲ್ಲಿ ಕೆ.ಎನ್.ವೆಂಕಟರಾಮರೆಡ್ಡಿ, ಚೇಳೂರು ತಾಲೂಕಿನಲ್ಲಿ ಸ್ಪರ್ಧೆಗಿಳಿದಿದ್ದ ಕೆ.ವಿ.ಭಾಸ್ಕರರೆಡ್ಡಿ, ಕೋಲಾರ ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹೆಚ್.ವಿ.ವಿನೋದ್ ಕುಮಾರ್ ಜ.ಗಳಿಸಿದ್ದಾರೆ.

ತಡೆಹಿಡಿದ ಫಲಿತಾಂಶ

ಉಳಿದಂತೆ ಕೋಲಾರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಎಂ.ಆನಂದ್ ಕುಮಾರ್ ೬ ಮತ ಪಡೆದಿದ್ದು, ಪ್ರತಿಸ್ಪರ್ಧಿ ಕೆ.ಎಂ.ಮುನಿರಾಜ ೫ ಮತ ಪಡೆದಿದ್ದು, ಹೈಕೋರ್ಟ್ ನಿರ್ದೇಶನದಂತೆ ಫಲಿತಾಂಶ ಪ್ರಕಟಿಸಿಲ್ಲ.

ಚಿಂತಾಮಣಿ ತಾಲೂಕಿನಿಂದ ಸದರಿ ಕ್ಷೇತ್ರದಲ್ಲಿ ಎನ್.ನಾಗಿರೆಡ್ಡಿ ೮ ಮತ ಪಡೆದಿದ್ದು, ಜಿ.ಚಂದ್ರಾರೆಡ್ಡಿ ೬ ಮತ ಪಡೆದಿದ್ದರೂ, ಉಚ್ಯ ನ್ಯಾಯಾಲಯದ ಆದೇಶದಂತೆ ಫಲಿತಾಂಶ ತಡೆಹಿಡಿಯಲಾಗಿದೆ.

ಚಿಕ್ಕಬಳ್ಳಾಪುರ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಪಿ.ಎನ್.ಮುನೇಗೌಡ ೮ ಮತ ಪಡೆದಿದ್ದು, ಎಂ.ಎನ್.ಕೃಷ್ಣಮೂರ್ತಿ ೭ ಮತ ಪಡೆದಿದ್ದು ಈ ಕ್ಷೇತ್ರದ ಫಲಿತಾಂಶ ಹೈಕೋರ್ಟ್ ನಿರ್ದೇಶನದಂತೆ ಕಾಯ್ದಿರಿಸಲಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಹೆಚ್.ಎಸ್.ಮೋಹನ್ ರೆಡ್ಡಿ ೮೦ ಮತ ಪಡೆದಿದ್ದು, ಎಂ.ರಾಮಯ್ಯ ೬೫ ಮತ ಪಡೆದಿದ್ದು, ಈ ಕ್ಷೇತ್ರದ ಚುನಾವಣೆ ಫಲಿತಾಂಶವನ್ನು ಹೈಕೋರ್ಟ್ ನಿರ್ದೇಶನದಂತೆ ತಡೆಹಿಡಿಯಲಾಗಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ