ಕನ್ನಡಪ್ರಭ ವಾರ್ತೆ ಮಂಡ್ಯ
ನಿಯೋಗವನ್ನು ಕುರಿತು ಮಾತನಾಡಿದ ಖರ್ಗೆ ಅವರು, ಮಂಡ್ಯ ಮೂಲ ಕಾಂಗ್ರೆಸ್‌ನ ಭದ್ರಕೋಟೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಂಪುಗಾರಿಕೆಗೆ ಅವಕಾಶ ಕೊಡದೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು. ಹೈಕಮಾಂಡ್ ನಿಮ್ಮನ್ನು ನಂಬಿ ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಜೀವ ತುಂಬಿ ಕೆಲಸ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು. ಎಲ್ಲಾ ಸಮಾಜದವರನ್ನು ಪಕ್ಷದಲ್ಲಿ ಸಕ್ರಿಯಗೊಳಿಸುವ ಕರ್ತವ್ಯಕ್ಕೆ ಮುಂದಾಗುವಂತೆ ಮಾರ್ಗದರ್ಶನ ನೀಡಿದರು.
ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ, ಹೊಸಗಾವಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ಮಹೇಶ್, ಎಂ.ಕ್ರಾಂತಿ ಸಿಂಹ ಇದ್ದರು.ದಸರಾ ಮ್ಯಾರಥಾನ್: ವಿಜೇತರಿಗೆ ಬಹುಮಾನ ವಿತರಣೆಶ್ರೀರಂಗಪಟ್ಟಣ:ದಸರಾ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಕರಿಘಟ್ಟ ಬೆಟ್ಟದ ತಪ್ಪಲಿನವರೆಗೆ ನಡೆದ ಮ್ಯಾರಥಾನ್ ವಿಜೇತರಾದ ವಿವಿಧ ವಯೋಮಾನದ ಪುರುಷರು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
21 ರಿಂದ 50 ವರ್ಷ ಒಳಪಟ್ಟ ಪುರುಷರ ವಿಭಾಗ: ಪುರುಷೋತ್ತಮ್-ಪ್ರಥಮ, ಸುಮಂತ್ ಕುಮಾರ್-ದ್ವಿತೀಯ, ಸಿದ್ದಲಿಂಗೇಶ್-ತೃತೀಯ ಹಾಗೂ ಷಣ್ಮುಖ-ನಾಲ್ಕನೇ ಸ್ಥಾನ, ಮಹಿಳೆಯರ ವಿಭಾಗ; ಹರ್ಷಿತಾ -ಪ್ರಥಮ ,ಅನನ್ಯ- ದ್ವಿತಿಯ , ಪಿ.ಅಂಜು-ತೃತಿಯ ಸ್ಥಾನ.51 ವರ್ಷ ಮೇಲ್ಪಟ್ಟ ಪುರುಷರ ವಿಭಾಗ;ರವಿಕುಮಾರ್-ಪ್ರಥಮ, ಬಾಲಚಂದ್ರ- ದ್ವಿತೀಯ ಹಾಗೂ ಆರ್.ಸೋಮಶೇಖರ್- ತೃತೀಯ.