ಡಿಸಿಎಂ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣುಹಂಪಲು ವಿತರಣೆ

KannadaprabhaNewsNetwork | Published : May 16, 2025 2:23 AM
Follow Us

ಸಾರಾಂಶ

ಡಿಸಿಎಂಡಿ.ಕೆ.ಶಿವಕುಮಾರ್ ಅವರು ದಕ್ಷ ಆಡಳಿತಗಾರರಾಗಿ ರಾಜ್ಯಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಅತ್ಯುನ್ನತ ಅಧಿಕಾರ ಸಿಗುವಂತಾಗಲಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್‌ನಿಂದ ಪಟ್ಟಣದ ಗಂಗಾಧಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನರೆವೇರಿಸಿದ ನಂತರ ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಡಿಸಿಎಂಡಿ.ಕೆ.ಶಿವಕುಮಾರ್ ಅವರು ದಕ್ಷ ಆಡಳಿತಗಾರರಾಗಿ ರಾಜ್ಯಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಅತ್ಯುನ್ನತ ಅಧಿಕಾರ ಸಿಗುವಂತಾಗಲಿ ಎಂದು ಆಶಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮೂಲಕ ಜನಪರ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡುವ ಜೊತೆಗೆ ದೊಡ್ಡ ಅಧಿಕಾರವನ್ನು ಪಡೆಯುವಂತಾಗಲಿ ಎಂದರು.

ಈ ವೇಳೆ ಮನ್ಮುಲ್‌ನಿರ್ದೇಶಕ ಆರ್.ಎನ್ ವಿಶ್ವಾಸ್, ಕಾರ್ಯಧ್ಯಕ್ಷ ಶಿವಮಾದೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡಪ್ಪ, ಮಾಜಿ ಅಧ್ಯಕ್ಷ ದ್ಯಾಪೇಗೌಡ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಉಪಾಧ್ಯಕ್ಷ ಸಿ.ಮಾಧು, ಪುರಸಭೆ ಸದಸ್ಯರಾದ ರಾಜಶೇಖರ್, ಮಾರೇಹಳ್ಳಿ ಬಸವರಾಜು, ಆನಂದ್, ಬಸವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ವಿಶ್ವ, ಕಿರಣ್ ಶಂಕರ್, ಮಹದೇವು, ರಮೇಶ್ ಸೇರಿದಂತೆ ಇತರರು ಇದ್ದರು.

ಹೊನ್ನಾಳಮ್ಮನಿಗೆ ಸುಗಂಧ ಪುಷ್ಪಗಳ ಅಲಂಕಾರ ಸೇವೆ

ಕಿಕ್ಕೇರಿ: ಪಟ್ಟಣದ ಜನಾರ್ದನ ಬೀದಿಯಲ್ಲಿ ನೂತನವಾಗಿ ಪ್ರತಿಷ್ಟಾಪಿಸಿರುವ ಹೊನ್ನಾಳಮ್ಮ ದೇವಿಗೆ ವಿಶೇಷ ಸುಗಂಧ ಪರಿಮಳ ಪುಷ್ಪಗಳ ಅಲಂಕಾರ ಪೂಜಾ ಸೇವೆ ಜರುಗಿತು.

ದೇಗುಲ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷಕೆ.ಎಚ್.ಮೋಹನ್‌ಕುಮಾರ್ ಮಾತನಾಡಿ, ನೂತನ ವಿಗ್ರಹ ಪ್ರತಿಷ್ಟಾಪನೆಯ 48 ದಿನದ ಮಂಡಲ ಪೂಜೆ ಮೇ 10,11 ನಡೆಯಲಿದೆ. ದೇವಿ ಪ್ರಾಣಪ್ರತಿಷ್ಟಾಪನೆಗೆ ಮತ್ತಷ್ಟು ಶಕ್ತಿ ಲಭಿಸಲು ಶಾಸ್ತ್ರೋಕ್ತವಾಗಿ ವಿವಿಧ ಹೋಮ ಹವನ, ಪೂಜೆಗಳು ಜರುಗುತ್ತಿವೆ ಎಂದರು.

ದೇವಿಗೆ ವಿಶೇಷ ಪೂಜೆ, ಅರ್ಚನೆ, ಮಹಾಮಂಗಳಾರತಿ ತೀರ್ಥ ಪ್ರಸಾದ, ಅನ್ನಪ್ರಸಾದ ವಿತರಣೆ ಜರುಗಿತು. ಕುಮಾರ್, ಬಾಬು, ಸೀತಾರಾಂ, ರಾಘವೇಂದ್ರ, ಪುನೀತ್, ಚಂದು, ತೇಜು ಮತ್ತಿತರರಿದ್ದರು.