ಡಿಡಿಪಿಐ ನಿಯಮ ಮೀರಿ ಒಪ್ಪಿಗೆ ಪ್ರಕರಣ: ಆಯುಕ್ತರಿಗೆ ವರದಿ ಸಲ್ಲಿಕೆ

KannadaprabhaNewsNetwork |  
Published : Apr 04, 2025, 12:48 AM IST
ಡಿಡಿಪಿಐ ನಿಯಮ ಮೀರಿ ಅನುಮತಿ ಪ್ರಕರಣ, ಆಯುಕ್ತರ ಕೈ ಸೇರಿದ ವಿಚಾರಣಾ ವರದಿ | Kannada Prabha

ಸಾರಾಂಶ

ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ನಿಯಮ ಮೀರಿ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ ಮತ್ತು ಗಣಕಯಂತ್ರ ತರಬೇತಿಗೆ ಫಲಾನುಭವಿಗಳ ನೇಮಕಕ್ಕೆ ಅನುಮತಿ ನೀಡಿದ ಪರಿಣಾಮ ನೂರಾರು ಮಂದಿ ಬಡ ರೈತಾಪಿ, ಹಿಂದುಳಿದ ವರ್ಗಗಳ ಮಕ್ಕಳು ಉದ್ಯೋಗದ ಆಸೆಗಾಗಿ ನಂಬಿ ಲಕ್ಷಾಂತರ ಲಂಚ ನೀಡಿ ಹಣ ಕಳೆದುಕೊಂಡು ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟ ಪ್ರಕರಣದ ಸುದೀರ್ಘ ವರದಿಯನ್ನು ಮೈಸೂರಿನ ವಿಭಾಗೀಯ ಜಂಟಿ ನಿರ್ದೇಶಕ ಪಾಂಡುರಂಗರವರು ಆಯುಕ್ತರಿಗೆ ಗುರುವಾರ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ನಿಯಮ ಮೀರಿ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ ಮತ್ತು ಗಣಕಯಂತ್ರ ತರಬೇತಿಗೆ ಫಲಾನುಭವಿಗಳ ನೇಮಕಕ್ಕೆ ಅನುಮತಿ ನೀಡಿದ ಪರಿಣಾಮ ನೂರಾರು ಮಂದಿ ಬಡ ರೈತಾಪಿ, ಹಿಂದುಳಿದ ವರ್ಗಗಳ ಮಕ್ಕಳು ಉದ್ಯೋಗದ ಆಸೆಗಾಗಿ ನಂಬಿ ಲಕ್ಷಾಂತರ ಲಂಚ ನೀಡಿ ಹಣ ಕಳೆದುಕೊಂಡು ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟ ಪ್ರಕರಣದ ಸುದೀರ್ಘ ವರದಿಯನ್ನು ಮೈಸೂರಿನ ವಿಭಾಗೀಯ ಜಂಟಿ ನಿರ್ದೇಶಕ ಪಾಂಡುರಂಗರವರು ಆಯುಕ್ತರಿಗೆ ಗುರುವಾರ ಸಲ್ಲಿಸಿದ್ದಾರೆ.

ವರದಿಯಲ್ಲಿ ಏನಿದೆ?

ಜಂಟಿ ನಿರ್ದೇಶಕರು ಮಾ. 19ರಂದು ವಿಚಾರಣೆ ನಡೆಸಿ ಈ ಪ್ರಕರಣದಲ್ಲಿ 5 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ರಾಮಚಂದ್ರರಾಜೇ ಅರಸ್ ಮತ್ತು ದೂರುದಾರ ನಿರಂಜನ್ ಮೂರ್ತಿ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ಇದೆ ವೇಳೆ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಡಿವೈಪಿಸಿ ಮಲ್ಲಿಕಾಜು೯ನ್, ಶಿಕ್ಷಣಾಧಿಕಾರಿ ನಾಗೇಂದ್ರ ಅವರಿಂದಲೂ ಸಹ ಹೇಳಿಕೆ ಪಡೆದುಕೊಂಡಿದ್ದರು. ಅಲ್ಲದೆ ಕಲಾಂ ಸಂಸ್ಥೆಗೆ ಉದ್ಯೋಗದ ಆಸೆಗಾಗಿ ಲಕ್ಷಾಂತರ ಹಣ ನೀಡಿ ಹಣ ಕಳೆದುಕೊಂಡ ಹಲವು ಮಹಿಳೆಯರು ನೀಡಿದ ಲಿಖಿತ ದಾಖಲೆ ಸಹಿತ ದೂರನ್ನು ಸಹ ಜಂಟಿ ನಿರ್ದೇಶಕರು ಪಡೆದುಕೊಂಡು ವಿಚಾರಣೆ ನಡೆಸಿದ್ದು ಈ ಸಂಬಂಧ 34 ಪುಟಗಳಿಗೂ ಅಧಿಕ ವರದಿಯನ್ನು ಉಲ್ಲೇಖಿಸಿ ಅವರು ಸಹ 4 ಪುಟಗಳ ಪ್ರಕರದ ಕುರಿತು ಸ್ವಯಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಯಮ ಮೀರಿ ಅನುಮತಿ ನೀಡಿದ್ದು ವಿಚಾರಣೆ ವೇಳೆ ಕಂಡು ಬಂದಿದೆ, ಅದೇ ರೀತಿಯಲ್ಲಿ ಡಿಡಿಪಿಐ ಅನುಮತಿಯಿಂದಾಗಿ ಸಂಭವಿಸಿದ ಭ್ರಷ್ಟಾಚಾರ, ಕನ್ನಡಪ್ರಭ ವರದಿ, ದೂರುದಾರರು ಸಲ್ಲಿಸಿದ ದಾಖಲೆ ಪ್ರತಿ, ಬಿಇಒಗಳ ಹೇಳಿಕೆ ಹೀಗೆ ಎಲ್ಲವನ್ನು ಕ್ರೋಡೀಕರಿಸಿ ಜಂಟಿ ನಿರ್ದೇಶಕ ಪಾಂಡುರಂಗ ಅವರು ಸವಿವರ ವರದಿಯನ್ನು ಸಾವ೯ಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ ಅವರಿಗೆ ಸಲ್ಲಿಸಿದ್ದಾರೆ.

ಪ್ರಕರಣದ ಗಂಭೀರತೆ ಬಗ್ಗೆ ಶಾಸಕರ ಚರ್ಚೆ

ಕಲಾಂ ಸಂಸ್ಥೆಗೆ ನಿಯಮ ಮೀರಿ ಆದೇಶ ನೀಡಿ ನೂರಾರು ಮಂದಿ ಲಕ್ಷಾಂತರ ಹಣ ಕಳೆದುಕೊಂಡ ಡಿಡಿಪಿಐ ಆದೇಶ ಮತ್ತು ಈ ಪ್ರಕರಣ ಕುರಿತು ವಿವರಣೆಯನ್ನು ಬುಧವಾರ ಸಕಾ೯ರದ ಅದೀನ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ಶಿಕ್ಷಣ ಇಲಾಖೆಯ ಆಯುಕ್ತರಾದ

ಡಾ. ತ್ರಿಲೋಕ್ ಚಂದ್ರ ಅವರ ಗಮನಕ್ಕೆ ಶಾಸಕರ ಎ .ಆರ್ ಕೃಷ್ಣಮೂರ್ತಿ ಅವರು ತಂದಿದ್ದು ಪ್ರಕರಣದ ಗಂಭೀರತೆ

ಬಗ್ಗೆಯೂ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ರಶ್ಮಿ ಮಹೇಶ್ ಅವರು ಜಂಟಿ ನಿರ್ದೇಶಕರ ಕಚೇರಿಗೆ ಕರೆ ಮಾಡಿ ತಕ್ಷಣ ವಿಚಾರಣಾ

ವರದಿ ಪ್ರತಿ ಸಲ್ಲಿಸುವಂತೆ ಸೂಚಿಸಿದ್ದರು ಎನ್ನಲಾಗಿದ್ದು ಗುರುವಾರ ಜಂಟಿ ನಿರ್ದೇಶಕರು ಆಯುಕ್ತರಿಗೆ ವರದಿ ಪ್ರತಿ ಸಲ್ಲಿಸಿ ಪ್ರಕರಣದ

ಗಂಭೀರತೆ ಕುರಿತು ವಿವರಿಸಿದ್ದಾರೆ ಎನ್ನಲಾಗಿದ್ದು ಡಿಡಿಪಿಐ ಅವರು ಈ ಪ್ರಕರಣದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ ಬಾಕ್ಸ್....

ಘಟನೆ ಹಿನ್ನೆಲೆ ಸಭೆಯಲ್ಲೂ ಗರಂಮ್ಮಾಗಿದ್ದ ಶಾಸಕ!

ಡಿಡಿಪಿಐ ಅವರು ಕಳೆದ ಜುಲೈ 29ರಂದು ಕೊಳ್ಳೇಗಾಲದ ಶ್ರೀನಿವಾಸ ಟಾಕೀಸ್ ರಸ್ತೆಯ ಕಲಾಂ ಸಂಸ್ಥೆ ಅಂದೆ ಸಲ್ಲಿಸಿದ ಅಜಿ೯ಗೆ

ಯೋಗ, ಗಣಕಯಂತ್ರ ತರಬೇತಿಗೆ ಅನುಮತಿ ನೀಡಿದ್ದರು . ಬಳಿಕ ಕಲಾಂ ಸಂಸ್ಥೆಯ ಪದಾಧಿಕಾರಿಗಳು ಫಲಾನುಭವಿಗಳಿಂದ 5 ಸಾವಿರದಿಂದ 1.75 ಲಕ್ಷದ ತನಕ ತರಬೇತಿ ಶಿಕ್ಷಕರ ನೇಮಕಕ್ಕಾಗಿ ಹಣ ವಸೂಲಿ ಮಾಡುತ್ತಿದ್ದ ವಿಚಾರ ಮನಗಂಡು ಕನ್ನಡಪ್ರಭ ದಿನಪತ್ರಿಕೆ ಹಲವಾರು ಬಾರಿ ಜಿಲ್ಲಾಡಳಿತದ ಕಣ್ತೆತೆರೆಸುವ ಸರಣಿ ವರದಿ ಪ್ರಕಟಿಸಲಾಯಿತಾದರೂ ಸಹ ಜಿಲ್ಲಾಡಳಿತ ಈ ಪ್ರಕರಣದಲ್ಲಿ ಮೌನ ತಾಳಿದ್ದನ್ನ ಪ್ರಶ್ನಿಸಿ ನಿರಂಜನ್ ಎಂಬುವರು ದೂರು ನೀಡಿದ್ದರು. ಈ ಬೆನ್ನಲ್ಲೆ ಪ್ರಕರಣದ ಬಗ್ಗೆ ಗಂಭೀರವಾಗಿ ಮಾಹಿತಿ ಪಡೆದ ಶಾಸಕ ಎ .ಆರ್. ಕೃಷ್ಣಮೂರ್ತಿ ಅವರು ಸದನದಲ್ಲೂ ಗಮನ ಸೆಳೆದಿದ್ದರು. ಮಾತ್ರವಲ್ಲ ಇತ್ತಿಚೇಗೆ

ಚಾ.ನಗರ ಕೆಡಿಪಿ ಸಭೆಯಲ್ಲೂ ಸಹ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರ ಕಾಯ೯ವೈಖರಿಯನ್ನು ಪ್ರಶ್ನಿಸಿದ್ದರಲ್ಲದೆ ಸಚಿವರಾದ ವೆಂಕಟೇಶ್

ಅವರನ್ನು ಇದು ಗಂಭೀರ ಪ್ರಕರಣ ಎಂದು ತಾವು ಪರಿಗಣಿಸಬೇಕಾಗಿ ಕೋರಿದ್ದನ್ನ ಇಲ್ಲಿ ಸ್ಮರಿಸಬಹುದು. ಮಾತ್ರವಲ್ಲ ಈ ಪ್ರಕರಣದಲ್ಲಿ ಡಿಡಿಪಿಐ ಅವರನ್ನು ಶಾಸಕರು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ