ಜಿಎಂಪಿ ಅನುಷ್ಠಾನಕ್ಕೆ ಔಷಧ ಕಂಪನಿಗಳಿಗೆ ಗಡುವು ವಿಸ್ತರಣೆ

KannadaprabhaNewsNetwork |  
Published : Jun 19, 2025, 12:34 AM IST
2 | Kannada Prabha

ಸಾರಾಂಶ

ಸಣ್ಣ ಮತ್ತು ಮಧ್ಯಮ ಔಷಧ ಉದ್ಯಮಗಳಿಗೆ ಪರಿಷ್ಕೃತ ವೇಳಾಪಟ್ಟಿ ಎಂ-ಉತ್ತಮ ಉತ್ಪಾದನಾ ಅಭ್ಯಾಸಗಳು (ಜಿಎಂಪಿ) - ಅನುಷ್ಠಾನಗೊಳಿಸುವ ಗಡುವನ್ನು ಸರ್ಕಾರ ಈ ವರ್ಷದ ಅಂತ್ಯದವರೆಗೆ ವಿಸ್ತರಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಣ್ಣ ಮತ್ತು ಮಧ್ಯಮ ಔಷಧ ಉದ್ಯಮಗಳಿಗೆ ಪರಿಷ್ಕೃತ ವೇಳಾಪಟ್ಟಿ ಎಂ-ಉತ್ತಮ ಉತ್ಪಾದನಾ ಅಭ್ಯಾಸಗಳು (ಜಿಎಂಪಿ) - ಅನುಷ್ಠಾನಗೊಳಿಸುವ ಗಡುವನ್ನು ಸರ್ಕಾರ ಈ ವರ್ಷದ ಅಂತ್ಯದವರೆಗೆ ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಶಾಖೆಯ ಭಾರತೀಯ ಔಷಧೀಯ ಸಂಘದ ಅಧ್ಯಕ್ಷ (ಐಪಿಎ) ಉಪ ಔಷಧ ನಿಯಂತ್ರಕ ಡಾ. ಖಾಲಿದ್ ಅಹ್ಮದ್ ಖಾನ್ ತಿಳಿಸಿದರು.

ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಪಿ.ಎಚ್‌.ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಪಿ.ಎಚ್‌.ಡಿ.ಸಿ.ಸಿ.ಐ) ಆರೋಗ್ಯ ಸಮಿತಿ, ಔಷಧೀಯ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ (ಜಿಒಐ), ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್‌ಎಚ್‌ಇಆರ್) ಮತ್ತು ಭಾರತೀಯ ಔಷಧ ಸಂಘ (ಐಪಿಎ) ಮೈಸೂರು ಶಾಖೆ ಸಹೋಂಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಷ್ಕೃತ ಗುಣಮಟ್ಟದ ಚೌಕಟ್ಟನ್ನು ಅನುಷ್ಠಾನಗೊಳಿಸುವಲ್ಲಿ ಒಳಗೊಂಡಿರುವ ಆರ್ಥಿಕ ಹೊರೆಯಿಂದಾಗಿ, ಎಂಎಸ್‌ಎಂಇ ಸಂಸ್ಥೆಗಳಿಗೆ ಡಿಸೆಂಬರ್ 2025 ರವರೆಗೆ ಸಮಯ ನೀಡಲಾಗಿದೆ ಎಂದರು.

೨೫೦ ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಂಸ್ಥೆಗಳು ಮತ್ತು ಹೊಸದಾಗಿ ಸ್ಥಾಪಿಸಲಾದ ಎಲ್ಲಾ ಸ್ಥಾವರಗಳು ಪರಿಷ್ಕೃತ ವೇಳಾಪಟ್ಟಿ- ಎಂ ಅನ್ನು ತಕ್ಷಣವೇ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಮಾರ್ಗ ಸೂಚಿಗಳು ಡಬ್ಲ್ಯೂ.ಎಚ್‌.ಒ ಮತ್ತು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿರುತ್ತವೆ. ಒಟ್ಟು ಗುಣಮಟ್ಟ ನಿರ್ವಹಣೆ ಮತ್ತು ಬಲವಾದ ಔಷಧೀಯ ವ್ಯವಸ್ಥೆಗೆ ಒತ್ತು ನೀಡುತ್ತವೆ ಎಂದು ಅವರು ಹೇಳಿದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್. ಬಸವನಗೌಡಪ್ಪ ಅವರು ಔಷಧ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು. ಜಿಎಂಪಿಯನ್ನು ನಿುಂತ್ರಣವಾಗಿ ಪರಿಗಣಿಸದೆ ಮೂಲಭೂತ ಜವಾಬ್ದಾರಿಯಾಗಿ ಪರಿಗಣಿಸುವಂತೆ ಉದ್ಯಮವನ್ನು ಅವರು ಒತ್ತಾಯಿಸಿದರು.

ಕರ್ನಾಟಕದ ಮಾಜಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ, ಪರಿಷ್ಕೃತ ವೇಳಾಪಟ್ಟಿ ಎಂ ಅಡಿಯಲ್ಲಿ ತಪಾಸಣೆ ಕಾರ್ಯ ವಿಧಾನ ಮತ್ತು ನಿಯಂತ್ರಕ ಪ್ರಕ್ರಿಯೆ ಹೇಗೆ ವಿಕಸನಗೊಂಡಿವೆ ಎಂಬುದನ್ನು ವಿವರಿಸಿದರು.

ಸಮ್ಮೇಳನದಲ್ಲಿ ಐಪಿಎ ಮೈಸೂರು ಶಾಖೆ ಸದಸ್ಯರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ. ಪ್ರಮೋದ್ ಕುಮಾರ್, ಪಿ.ಎಚ್‌.ಡಿ.ಸಿ.ಸಿ.ಐನ ಜಂಟಿ ಕಾರ್ಯದರ್ಶಿ ಜತಿನ್ ನಾಗ್ಪಾಲ್, ಮೈಸೂರು ಆರ್‌.ಸಿ 2 ಫಾರ್ಮಾ ಸೊಲ್ಯೂಷನ್ಸ್‌ ಸಂಸ್ಥಾಪಕ ಡಾ.ಎಚ್.ವಿ. ರಘುನಂದನ್, ಔಷಧೀಯ ಇಲಾಖೆ ಅಧೀನ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಯಾದವ್‌, ಐಪಿಎ ಮೈಸೂರು ಕಾರ್ಯದರ್ಶಿ ಡಾ.ಆರ್.ಎಸ್. ಸವಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ