ಜಗಳೂರು ಮುಖ್ಯ ರಸ್ತೆ ವಿಸ್ತರಣೆಗೆ ಗಡುವು: ಸಂತೋಷ್‌

KannadaprabhaNewsNetwork |  
Published : Oct 30, 2025, 01:15 AM IST
29 ಜೆ.ಜಿ.ಎಲ್.1) ಜಗಳೂರು ಪಟ್ಟಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ರಸ್ತೆ ಅಗಲೀಕರಣ ಸಂಬಂಧ ಅಂಗಡಿ ಮಾಲೀಕರಿಗೆ ಅನಧಿಕೃತ ಕಟ್ಟಡ ತೆರುವಿಗೆ ದಾವಣಗೆರೆ ಉಪವಿಭಾಗಾಧಿಕಾರಿ (ಎಸಿ)ಸಂತೋಷ್ ಕುಮಾರ್ ಸೂಚನೆ  | Kannada Prabha

ಸಾರಾಂಶ

ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯನ್ನು ೬೯ ಅಡಿ ವಿಸ್ತರಣೆಗೆ ಸೋಮವಾರದವರೆಗೆ ವರ್ತಕರು ಮತ್ತು ಕಟ್ಟಡದ ಮಾಲೀಕರಿಗೆ ಗಡವು ನೀಡಲಾಗಿದ್ದು, ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯ ಮಾಡಲಾಗುವುದು ಎಂದು ದಾವಣಗೆರೆ ಉಪವಿಭಾಗಾಧಿಕಾರಿ (ಎಸಿ) ಸಂತೋಷ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯನ್ನು ೬೯ ಅಡಿ ವಿಸ್ತರಣೆಗೆ ಸೋಮವಾರದವರೆಗೆ ವರ್ತಕರು ಮತ್ತು ಕಟ್ಟಡದ ಮಾಲೀಕರಿಗೆ ಗಡವು ನೀಡಲಾಗಿದ್ದು, ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯ ಮಾಡಲಾಗುವುದು ಎಂದು ದಾವಣಗೆರೆ ಉಪವಿಭಾಗಾಧಿಕಾರಿ (ಎಸಿ) ಸಂತೋಷ್ ಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು. ಈಗಾಗಲೇ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದೆ. ಕಾಮಗಾರಿಗೆ ಅಡಚಣೆಯಾಗದಂತೆ ಎರಡೂ ಬದಿಗಳಲ್ಲಿ ಅಕ್ರಮವಾಗಿ ತೆರವುಗೊಳಿಸಲು ಸಭೆ ಕರೆಯಲಾಗಿತ್ತು. ಯಾರು ಅಕ್ರಮವಾಗಿ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದಾರೆ ಅಂತಹವರು ಸೋಮವಾರದ ಒಳಗೆ ಸ್ವಯಂ ತೆರವಿಗೆ ಮುಂದಾಗಬೇಕು. ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದೇವೆ. ಆದರೂ ತೆರವುಗೊಳಿಸಿಲ್ಲ. ಹೀಗಾಗಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದೆ. ಪಟ್ಟಣದಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸೋಮವಾರದ ಒಳಗೆ ತೆರವುಗೊಳಿಸಿಕೊಳ್ಳದಿದ್ದರೆ ಪಿಬ್ಲ್ಯುಡಿ, ಪಪಂ, ಕಂದಾಯ ಮತ್ತು ಪೊಲೀಸ್ ಇಲಾಖೆ ನೆರವು ಪಡೆದುಕೊಂಡು ಅಧಿಕೃತವಾಗಿ ತೆರವು ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ಕಟ್ಟಡವಿರಲಿ, ಖಾಸಗಿ ಕಟ್ಟಡವಿರಲಿ ಅನಧಿಕೃತವಾಗಿದ್ದು ಕಂಡು ಬಂದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಗಾಗಲೇ ಸರಕಾರಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ದಾಖಲೆಗಳೆಲ್ಲವೂ ಸರಿ ಇದ್ದು ಎ-ಖಾತ ಹೊಂದಿ, ತೆರಿಗೆ ಕಟ್ಟಿಕೊಂಡು ಬಂದಂತಹ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಕೊಡಲು ಪ್ರಸ್ತಾವನೆ ಸಿದ್ಧ ಮಾಡಿದ್ದೇವೆ ಎಂದರು.

ಅಧಿಕೃತ ಕಟ್ಟಡಗಳು ಇದ್ದರೆ ಎಸ್ಆರ್ ವ್ಯಾಲಿವ್ ಪ್ರಕಾರ ಅಂದಾಜು ೧೦೦ ಕೋಟಿ ರು. ಪರಿಹಾರ ಕೊಡಬೇಕಾಗುತ್ತದೆ. ದಾಖಲೆಗಳು ಸರಿ ಇದ್ದ ಕಟ್ಟಡಗಳಿದ್ದರೆ ಪರಿಹಾರ ಕೊಡುತ್ತೇವೆ. ಒಂದು ವೇಳೆ ಅನಧಿಕೃತ ಕಟ್ಟಡಗಳು ಇದ್ದರೆ ಮುಲಾಜಿಲ್ಲದೇ ೬೯ ಅಡಿ ತೆರವುಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಪಂ ಚೀಫ್ ಆಫೀಸರ್ ಸಿ.ಲೋಕ್ಯಾನಾಯ್ಕ್, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ್, ಎಇ ಪುರುಷೋತ್ತಮರೆಡ್ಡಿ, ಆರ್.ಐ ಕೀರ್ತಿಂಜಯ, ಅನೇಕ ಅಧಿಕಾರಿಗಳು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು