ಕಿವುಡುತನ ಗುಣಪಡಿಸುವ ಕಾಯಿಲೆ

KannadaprabhaNewsNetwork |  
Published : Oct 09, 2024, 01:35 AM IST

ಸಾರಾಂಶ

ಕಿವುಡುತನ ಗುಣಪಡಿಸಬಹುದಾದ ಕಾಯಿಲೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ಆರು ಕೋಟಿ ಜನರು ಕಿವುಡುತನದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು ಒಂದು ಲಕ್ಷ ಮಕ್ಕಳು ಹುಟ್ಟಿನಿಂದಲೇ ಕಿವುಡುತನ ಹೊಂದಿರುತ್ತಾರೆ'' ಎಂದು ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಿವುಡುತನ ಗುಣಪಡಿಸಬಹುದಾದ ಕಾಯಿಲೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ಆರು ಕೋಟಿ ಜನರು ಕಿವುಡುತನದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು ಒಂದು ಲಕ್ಷ ಮಕ್ಕಳು ಹುಟ್ಟಿನಿಂದಲೇ ಕಿವುಡುತನ ಹೊಂದಿರುತ್ತಾರೆ'''''''' ಎಂದು ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಇ.ಎನ್.ಟಿ ವಿಭಾಗದಲ್ಲಿ ಆಯೋಜಿಸಿದ್ದ ''''''''ವಿಶ್ವ ಕಿವುಡುತನ ಸಪ್ತಾಹ'''''''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಕಿವುಡುತನ ಸಪ್ತಾಹ ಆಚರಣೆಯ ಮೂಲ ಉದ್ದೇಶ ಕಿವುಡುತನದಿಂದ ಬಳಲುತ್ತಿರುವವರಿಗೆ ಲಭ್ಯವಿರುವ ಚಿಕಿತ್ಸೆ ಬಗ್ಗೆ ತಿಳಿಸುವುದಾಗಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಜನನದಿಂದ ಕಿವುಡುತನದಿಂದ ಬಳಲುತ್ತಿರುವ ಆರು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸುಮಾರು ₹10 ಲಕ್ಷ ವೆಚ್ಚದ ಕಾಕ್ಲಿಯರ್ ಇಂಪ್ಲ್ಯಾಂಟ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ನವಜಾತ ಶಿಶುಗಳಲ್ಲಿ ಕಿವುಡುತನ ಪತ್ತೆ ಹಚ್ಚುವ ಆಧುನಿಕ ಯಂತ್ರ (ಒ.ಎ.ಇ) ಲಭ್ಯವಿದೆ ಎಂದು ವಿವರಿಸಿದರು.ಸಪ್ತಾಹದ ಅಂಗವಾಗಿ ಹತ್ತು ವರ್ಷದೊಳಗಿನ ಮಕ್ಕಳಿಗೆ ಶ್ರವಣ ಸಾಮರ್ಥ್ಯ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವುಡುತನ ಹಾಗೂ ತಡೆಗಟ್ಟುವಿಕೆ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಅರ್ಚನಾ ಮೈತ್ರಿ ಕಿವುಡುತನ ಒಂದು ನೋಟ ಎಂಬ ಪ್ರಬಂಧವನ್ನು ಇದೆ ವೇಳೆ ಮಂಡಿಸಿದರು. ಕಾಕ್ಲಿಯರ್ ಇಂಪ್ಲ್ಯಾಂಟ್ ಕುರಿತು ಬಿಇಸಿ ಧ್ವನಿ (ಎಫ್ಎಂ)ಯಲ್ಲಿ ಇಎನ್‌ಟಿ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ.ಸಿ.ಎಸ್.ಹಿರೇಮಠ ಅವರ ಸಂದರ್ಶನ ಪ್ರಸಾರವಾಯಿತು.ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಇ.ಎನ್.ಟಿ ವಿಭಾಗದ ಡಾ.ಸಿ.ಎಸ್.ಹಿರೇಮಠ, ಡಾ.ಎಸ್.ಎಸ್.ದೊಡ್ಡಮನಿ, ಡಾ.ಶಶಿಧರ ಸೂಲಿಗಾಂವಿ, ಡಾ.ಪ್ರಭು ಕವಾಸಿ, ಡಾ.ಮಲ್ಲಿಕಾರ್ಜುನ ಪಾಟೀಲ, ಡಾ.ಸಂತೋಷ ಮಲಶೆಟ್ಟಿ, ಡಾ.ಪವನ ಹೊಸಮನಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಡಾ.ಸಿ.ಎಸ್.ಹಿರೇಮಠ ಮತ್ತು ತಂಡವನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಅಭಿನಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ