ತುಟ್ಟಿ ಭತ್ಯ, ವೇತನ ಪರಿಷ್ಕರಣೆ ಸ್ಥಗಿತ-ಆಕ್ರೋಶ

KannadaprabhaNewsNetwork |  
Published : Mar 30, 2026, 02:00 AM IST
ನಿವೃತ್ತ ನೌಕರರ ಸಂಘದಿಂದ ತಾಲೂಕು ತಹಶೀಲ್ದಾರ ಎಸ್.ರೇಣುಕಾ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ ನಿವೃತ್ತ ನೌಕರರು. | Kannada Prabha

ಸಾರಾಂಶ

ನಿವೃತ್ತ ನೌಕರರಿಗೆ ಕೊಡಮಾಡುವ ತುಟ್ಟಿ ಭತ್ಯೆ ಹಾಗೂ ವೇತನ ಪರಿಷ್ಕರಣೆ ಸ್ಥಗಿತಗೊಳಿಸಲು ಯೋಜಿಸಿರುವ ಕೇಂದ್ರ ಸರ್ಕಾರ ನಿವೃತ್ತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದು ಒಂದಾದರೆ, ಸಂಸದರೂ ಹಾಗೂ ಶಾಸಕರ ವೇತನ ಹಾಗೂ ತುಟ್ಟಿಭತ್ಯೆಯನ್ನು ಚರ್ಚೆ ಇಲ್ಲದೆ ಎಲ್ಲ ಪಕ್ಷಗಳು ಒಂದಾಗಿ ಜಾರಿಗೆ ತರುತ್ತಿರುವುದು ವಿಷಾದನೀಯ ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಪ್ರೊ.ಸಿ. ಮಂಜುನಾಥ ತಿಳಿಸಿದರು.

ಹಾನಗಲ್ಲ: ನಿವೃತ್ತ ನೌಕರರಿಗೆ ಕೊಡಮಾಡುವ ತುಟ್ಟಿ ಭತ್ಯೆ ಹಾಗೂ ವೇತನ ಪರಿಷ್ಕರಣೆ ಸ್ಥಗಿತಗೊಳಿಸಲು ಯೋಜಿಸಿರುವ ಕೇಂದ್ರ ಸರ್ಕಾರ ನಿವೃತ್ತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದು ಒಂದಾದರೆ, ಸಂಸದರೂ ಹಾಗೂ ಶಾಸಕರ ವೇತನ ಹಾಗೂ ತುಟ್ಟಿಭತ್ಯೆಯನ್ನು ಚರ್ಚೆ ಇಲ್ಲದೆ ಎಲ್ಲ ಪಕ್ಷಗಳು ಒಂದಾಗಿ ಜಾರಿಗೆ ತರುತ್ತಿರುವುದು ವಿಷಾದನೀಯ ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಪ್ರೊ.ಸಿ. ಮಂಜುನಾಥ ತಿಳಿಸಿದರು.ಬುಧವಾರ ಹಾನಗಲ್ಲಿನ ತಹಸೀಲ್ದಾರ್ ಮೂಲಕ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಶನ್ ಆದೇಶದಂತೆ ತಾಲೂಕು ನಿವೃತ್ತ ನೌಕರರ ಸಂಘ ಪ್ರತಿಭಟನೆ ಹಾಗೂ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಮಾತನಾಡಿದರು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇದು ದೇಶಾದ್ಯಂತ ನಡೆಯುತ್ತಿರುವ ನಿವೃತ್ತರ ಪಾಲಿನ ಕರಾಳ ದಿನ. ಅಲ್ಲದೆ ಇಂದು ಇಡೀ ದೇಶದ ಎಲ್ಲ ನಿವೃತ್ತ ನೌಕರರು ದೇಶದ ಪ್ರಧಾನಿಗೆ ಮನವಿ ಮಾಡಿ, ಇಳಿ ವಯಸ್ಸಿನಲ್ಲಿರುವ ನಿವೃತ್ತ ನಾಗರಿಕರಿಗೆ ಆಘಾತಕಾರಿ ನಿಲುವು ಪ್ರಕಟಿಸಿದೆ. ಇದರಿಂದ ನಿವೃತ್ತ ನೌಕರರು ಆತಂಕಕ್ಕೀಡಾಗಿದ್ದಾರೆ. ನಿವೃತ್ತ ನೌಕರರ ಪಾಲಿಗೆ ಇದು ತೀರ ಆಘಾತಕಾರಿ ದಿನವಾಗಿದೆ. ಈ ಆದೇಶವನ್ನು ಹಿಂಪಡೆದು ಹಿಂದಿನಂತೆ ನಿವೃತ್ತಿ ಸೌಲಭ್ಯಗಳನ್ನು ಮುಂದುವರೆಸಬೇಕು ಎಂದರು.ಸರ್ಕಾರಿ ನೌಕರರ ಸಂಘದ ಕಚೇರಿಯದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ನಡಿಗೆ ನಡಿಸಿ ಸಂಘದಿಂದ ತಹಸೀಲ್ದಾರ್ ಮೂಲಕ ದೇಶದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಚ್.ಎನ್. ಪಾಟೀಲ, ರವಿರಾಜ ತಿರುಮಲೆ, ರಮೆಶಗೌಡ ಪಾಟೀಲ, ಪ್ರೊ.ಸಿ.ಮಂಜುನಾಥ, ಪ್ರೊ.ಮಾರುತಿ ಶಿಡ್ಲಾಪೂರ, ಎಸ್.ಬಿ.ಡುಮ್ಮೇರ, ಎನ್.ಎಂ.ತಳವಾರ, ಎನ್,.ಎಂ.ಪೂಜಾರ, ಹೆಚ್.ಆಯ್.ನಾಯಕ, ಉಷಾ ದೇಸಾಯಿ, ಲೀಲಾವತಿ ಪೂಜಾರ, ಎ.ವಾಯ್. ಅಡೆವೆಣ್ಣನವರ, ಎಲ್.ಡಿ.ಯರಕಲ್, ನಾರಾಯಣ ಚಿಕ್ಕೊರ್ಡೆ, ವಿ.ಎಂ.ಕೋತಂಬರಿ, ಎಲ್.ಆರ್.ಬಾರ್ಕಿ, ಎಸ್.ಎಸ್.ಕಾಶೀಕರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಆಗ್ರಹ
ಸಂಶೋಧಕರಿಗೆ ಆಳವಾದ ಅಧ್ಯಯನ ಅಗತ್ಯ