ಕುಕನೂರು: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿರುವುದು ವಿಷಾದನೀಯವಾಗಿದ್ದು, ಗಂಡ ಹೆಂಡತಿಯರು ಪರಸ್ಪರ ಹೊಂದಾಣಿಕೆ ಜತೆಗೆ ಪ್ರೀತಿ ವಿಶ್ವಾಸ ಹೊಂದಿದಾಗ ದಾಂಪತ್ಯ ಜೀವನ ಶಾಶ್ವತವಾಗಿ ಗಟ್ಟಿಯಾಗಿರುತ್ತದೆ ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.
ಶ್ರೀಶರಣ ಬಸವೇಶ್ವರ ಪುರಾಣ ಪ್ರವನಚ ಮಂಗಳಗೊಂಡಿತು. ಯಲಬುರ್ಗಾದ ಶ್ರೀಬಸವಲಿಂಗೇಶ್ವರ ಶಿವಾಚಾರ್ಯರು, ಶ್ರೀಸಿದ್ದೇಶ್ವರ ಶಿವಾಚಾರ್ಯರು, ಶ್ರೀಚಿದಾನಂದ ಸ್ವಾಮೀಜಿ ಹಾಗೂ ಗ್ರಾಮಸ್ಥರಿದ್ದರು. ಅನ್ನಸಂತರ್ಪಣೆ ಜರುಗಿತು.
ಅದ್ಧೂರಿ ರಥೋತ್ಸವ:ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ಗುಡ್ಡದ ಬಸವೇಶ್ವರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿ ಭಕ್ತಿ ಮರೆದರು.ನಾನಾ ಗ್ರಾಮಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ರಥೋತ್ಸವದುದ್ದಕ್ಕೂ ಭಕ್ತರು ಗುಡ್ಡದ ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷ ಕೂಗಿದರು.