ಹರಿಹರ: ವಿವಿಧ ಸಂಘಗಳಲ್ಲಿ ಮಾಡಿ, ಜಿಗುಪ್ಸೆಗೊಂಡು ತಾಯಿ ಮತ್ತು ವಿಕಲಚೇತನ ಮಗಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ವಿವರ: ಸುವರ್ಣಮ್ಮ ಮಗಳು ಗೌರಮ್ಮರೊಂದಿಗೆ ಜು.೧ಕ್ಕೆ ಹೂವಿನಹಡಗಲಿ ತಾಲೂಕಿನಲ್ಲಿರುವ ಮತ್ತೊಬ್ಬ ಪುತ್ರಿಯ ಮನೆಗೆ ತೆರಳಿದ್ದಾರೆ, ಅಲ್ಲೆರಡು ದಿನ ಇದ್ದು, ನಂತರ ಅದೇ ತಾಲೂಕಿನಲ್ಲಿರುವ ಇನ್ನೊಬ್ಬ ಮಗಳ ಮನೆಗೆ ತೆರಳಿದ್ದಾರೆ. ಅಲ್ಲಿಂದ ಗಂಗನರಸಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದರು. ಆದರೆ, ಇವರಿಬ್ಬರೂ ಹರಿಹರದ ನೀರು ಸರಬರಾಜು ಕೇಂದ್ರದ ಬಳಿಯ ಜೋಡು ಬಸವೇಶ್ವರ ದೇವಸ್ಥಾನದ ಬಳಿ ಇರುವುದನ್ನು ಜು.೬ಕ್ಕೆ ಗ್ರಾಮದ ಕೆಲವರು ಗಮನಿಸಿದ್ದಾರೆ.
ಮಕ್ಕಳ ಊರಿನಿಂದ ಬಂದವರು ನಾಲ್ಕು ದಿನಗಳ ಕಾಲ ಗಂಗನರಸಿಗೆ ಹೋಗದೆ ಹರಿಹರದಲ್ಲೆ ಇವರು ಸುತ್ತಾಡಿದ್ದಾರೆ ಎಂದು ಹೇಳಲಾಗಿದೆ.ಸಾಲದ ಹೊರೆ:
ಇವರು ಮೈಕ್ರೋ ಫೈನಾನ್ಸ್ ಸೇರಿ ಮೂರು ಸಂಘಗಳಲ್ಲಿ ೩ ಲಕ್ಷ ರು.ಗೂ ಅಧಿಕ ಸಾಲ ಪಡೆದಿದ್ದರು. ತಿಂಗಳಿಗೊಂದು ಕಂತನ್ನು ಮತ್ತೊಂದು ಸಂಘಕ್ಕೆ ಪಾವತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಳೆದೆರಡು ವಾರಗಳಿಂದ ಸಂಘಗಳಿಗೆ ಕಂತನ್ನು ಪಾವತಿಸಿರಲಿಲ್ಲ, ಸಂಘದ ಸಿಬ್ಬಂದಿ ಕಂತಿನ ಹಣ ಪಾವತಿಸುವಂತೆ ಇವರಿಗೆ ದುಂಬಾಲು ಬಿದ್ದಿದ್ದರೆನ್ನಲಾಗಿದೆ. ಇದರಿಂದ ಬೇಸತ್ತು ಇವರು ಜು.1ರಂದು ಊರು ತೊರೆದಿದ್ದರು ಎಂದು ತಿಳಿದು ಬಂದಿದೆ.
ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.