ಇಂದು ವಿಜಯ ಮೆಟಗುಡ್ಡರವರ 48ನೇ ಜನ್ಮ ದಿನ: ವಿವಿಧ ಸಾಮಾಜಿಕ ಕಾರ್ಯಕ್ರಮಗಳು

KannadaprabhaNewsNetwork |  
Published : Jul 12, 2025, 12:32 AM IST
ವಿಜಯ ಮೆಟಗುಡ್ಡ | Kannada Prabha

ಸಾರಾಂಶ

ಕೆಎಲ್‌ಇ ಸಂಸ್ಥೆ ಚೇರಮನ್ ಡಾ.ಪ್ರಭಾಕರ ಕೋರೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾರ್ಗದರ್ಶನದಲ್ಲಿ ಖ್ಯಾತ ಉದ್ಯಮಿ, ಬಿಜೆಪಿ ಜಿಲ್ಲಾ ಮುಖಂಡ ವಿಜಯ ಮೆಟಗುಡ್ಡ ಅವರ 48ನೇ ಜನ್ಮ ದಿನದ ಅಂಗವಾಗಿ ಜು.12 ರಂದು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕೆಎಲ್‌ಇ ಸಂಸ್ಥೆ ಚೇರಮನ್ ಡಾ.ಪ್ರಭಾಕರ ಕೋರೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾರ್ಗದರ್ಶನದಲ್ಲಿ ಖ್ಯಾತ ಉದ್ಯಮಿ, ಬಿಜೆಪಿ ಜಿಲ್ಲಾ ಮುಖಂಡ ವಿಜಯ ಮೆಟಗುಡ್ಡ ಅವರ 48ನೇ ಜನ್ಮ ದಿನದ ಅಂಗವಾಗಿ ಜು.12 ರಂದು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9 ಗಂಟೆಯಿಂದ 2 ಗಂಟೆವರೆಗೆ ಪಟ್ಟಣದ ವಿಜಯ ಸೊಸಿಯಲ್‌ ಕ್ಲಬ್‌ನ್ ಬ್ಯಾಡ್ಮಿಂಟನ ಹಾಲ್‌ನಲ್ಲಿ ರಕ್ತದಾನ ಶಿಬಿರ ಜರುಗಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಜೀವನ್ಮರಣ ಮಧ್ಯ ಹೋರಾಡುವ ಇನ್ನೊಬ್ಬರ ಆರೋಗ್ಯ, ಪ್ರಾಣ ರಕ್ಷಣೆಗೆ ನೆರವಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ವಿಜಯ ಮೆಟಗುಡ್ಡ ಅಭಿಮಾನಿ ಬಳಗದಿಂದ ಹಾಗೂ ಇಂಚಲ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಬೆಳಗ್ಗೆ 10 ಗಂಟೆಗೆ 650 ಬಾಲ ರಕ್ಷಣಾ ಕಿಟ್ ವಿತರಣೆ ಪಟ್ಟಣದ ಮತಕ್ಷೇತ್ರದ ಶಾಸಕರ ಮಾದರಿ ಸರ್ಕಾರಿ ಶಾಲೆ ನಂ.4 ರಲ್ಲಿ ಹಾಗೂ 11 ಗಂಟೆಗೆ ಆನಿಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 350 ಬಾಲ ರಕ್ಷಣಾ ಕಿಟ್ ವಿತರಣಾ ಕಾರ್ಯಕ್ರಮ ಜರುಗಲಿದೆ. ಮತಕ್ಷೇತ್ರದ ಎಲ್ಲ ಜನತೆಯ ಆನುಕೂಲಕ್ಕಾಗಿ ಉಚಿತ ವಾಹನ ಕಲಿಕಾ ಚಾಲನಾ (ಎಲ್‌ಎಲ್‌ಆರ್) ಪರವಾನಿಗೆ ಅರ್ಜಿಗಳನ್ನು ವಿಜಯ ಸೊಸಿಯಲ್‌ ಕ್ಲಬ್‌ನಲ್ಲಿ ಬೆಳಗ್ಗೆ 9 ರಿಂದ ಸಂಜೆ 3 ಗಂಟೆವರೆಗೆ ಪಡೆಯಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸುನೀಲ ಮರಕುಂಬಿ, ಪ್ರಪುಲ ಪಾಟೀಲ, ಸಂಜಯ ಕುಪ್ಪಸಗೌಡರ ಹಾಗೂ ಸಂಘಟಕರು ಮನವಿ ಮಾಡಿದ್ದಾರೆ. ಜನ್ಮದಿನದ ಅಂಗವಾಗಿ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ