ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ ನೀರಿನ ಮಾದರಿಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಶಾಖಾಧಿಕಾರಿಗಳ ಮೂಲಕ ಸಂಗ್ರಹಿಸಿ ಪರೀಕ್ಷಗೆ ಕಳುಹಿಸಿ. ಸದರಿ ನೀರಿನ ಮಾದರಿಗಳ ಪರೀಕ್ಷಾ ವರದಿಯನ್ನು ಶಾಖಾಧಿಕಾರಿಗಳ ಮೂಲಕ ಪಡೆದಿದ್ದು ಸೂಚಿತ ನೀರಿನ ಮಾದರಿಗಳ ನೀರು ಕುಡಿಯಲು ಯೋಗ್ಯವಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಆನಗೋಡು (ತೋಳಹುಣಸೆ) ಬಹುಗ್ರಾಮ ಕುಡಿಯುವ ನೀರು ಹಾಗೂ ಶುದ್ದ ಕುಡಿಯುವ ನೀರಿನ ಘಟಕದ ನೀರು ಕುಡಿಯಲು ಯೋಗ್ಯವಿಲ್ಲವೆಂಬ ಆರೋಪ ಸುಳ್ಳಿನಿಂದ ಕೂಡಿದೆ ಎಂದು ಹೇಳಿದರು.
1982-83 ಮತ್ತು 1985-86ನೇ ಸಾಲಿನಲ್ಲಿ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಆಶ್ರಯ ಬಡಾವಣೆಯ ಪಕ್ಕದಲ್ಲಿ ಸುಮಾರು 4-5 ವರ್ಷಗಳ ಹಿಂದೆ ವಸತಿ ಯೋಜನೆಯ ಬಡಾವಣೆ ಆಗಿದ್ದು ಸದರಿ ಬಡಾವಣೆಯಲ್ಲಿ ಬರತಕ್ಕ ನಾಗರೀಕ ಸೌಲಭ್ಯ ನಿವೇಶನ ಹಾಗೂ ಉದ್ಯಾನವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತಾಲೂಕು ಸರ್ವೇಯರ್ ಮೂಲಕ ಅಳತೆಯನ್ನು 2024 ರಲ್ಲಿ ಸರ್ವೇ ಮಾಡಿಸಿದಾಗ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಕ್ಷೆಯನುಸಾರ ಕಂಡುಬಂದ ಒತ್ತುವರಿಯನ್ನು ಭೀಮಪ್ಪ ಎಂಬುವರನ್ನು ಹೊರತುಪಡಿಸಿ ಉಳಿದವರು ತೆರವು ಮಾಡಿದ್ದಾರೆ ಎಂದು ದೂರಿದರು.ಬೋರ್‌ವೆಲ್ ನೀರು ಮತ್ತು ಬಹುಗ್ರಾಮ ಕುಡಿಯುವ ನೀರಿನ ನಳದ ನೀರನ್ನು ಕುಡಿಯಲು ಬಳಸದಿರಲು ಮತ್ತು ಆರ್‌ಒ ಪ್ಲಾಂಟ್ ನೀರನ್ನು ಮಾತ್ರ ಬಳಸಲು ಸೂಚನೆ ನೀಡಲಾಗಿದೆ. ಇದಲ್ಲದೇ, ಇದನ್ನು ಗ್ರಾಮದ ಮನೆಗಳ, ಜನ ವಸತಿ, ಜನನಿಬಿಡ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಮೂಲಕ ಬಿತ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಂ.ಎಸ್.ಬಸವರಾಜ್, ಅರ್.ನಾಗರಾಜ್, ಶಿವಕುಮಾರ್, ಹನುಮಂತಪ್ಪ, ಶೇಖರಪ್ಪ, ನಾಗರಾಜ್ ಸಿದ್ದಪ್ಪ ಇತರರು ಇದ್ದರು.