ಶಿವಮೊಗ್ಗದಲ್ಲಿ 4ನೇ ರೈಲ್ವೆ ಕೋಚಿಂಗ್ ಡಿಪೋ

KannadaprabhaNewsNetwork |  
Published : Jul 12, 2025, 12:32 AM IST
ಶಿವಮೊಗ್ಗದಲ್ಲಿ 4ನೇ ರೈಲ್ವೆ ಕೋಚಿಂಗ್ ಡಿಪೋ | Kannada Prabha

ಸಾರಾಂಶ

ಶಿವಮೊಗ್ಗಕ್ಕೆ 2 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿ 7 ಹೊಸ ರೈಲುಗಳ ಸೇವೆ ಲಭ್ಯವಾಗಲಿವೆ. ಜೊತೆಗೆ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಕೂಡ ಆರಂಭವಾಗಲಿದೆ.

ಶಿವಮೊಗ್ಗ: ಶಿವಮೊಗ್ಗಕ್ಕೆ 2 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿ 7 ಹೊಸ ರೈಲುಗಳ ಸೇವೆ ಲಭ್ಯವಾಗಲಿವೆ. ಜೊತೆಗೆ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಕೂಡ ಆರಂಭವಾಗಲಿದೆ.

ಈ ಕುರಿತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದು, ನಗರ ಹೊರ ವಲಯದ ಕೋಟೆಗಂಗೂರಿನಲ್ಲಿ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಆರಂಭದೊಂದಿಗೆ ಶಿವಮೊಗ್ಗದಲ್ಲಿ ಹೊಸ ರೈಲ್ವೆ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಮತ್ತು ಮೈಸೂರು ರೈಲ್ವೆ ಮೇಲಿನ ಒತ್ತಡ ಕಡಿಮೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಅದಕ್ಕಾಗಿ ಬಹಳಷ್ಟು ರೈಲುಗಳು ಬೆಂಗಳೂರು ಮತ್ತು ಮೈಸೂರು ಬದಲಾಗಿ ಶಿವಮೊಗ್ಗದಿಂದ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ. 2026 ಜನವರಿಗೆ ರೈಲ್ವೆ ಕೋಚಿಂಗ್ ಡಿಪೋ ಆರಂಭ:ರೈಲ್ವೆ ಕೋಚಿಂಗ್ ಡಿಪೋ 2026ನೇ ಜನವರಿ ಅಂತ್ಯದೊಳಗೆ ಆರಂಭವಾಗಲಿದೆ. ಅದರ ಜತೆಗೆ ಎರಡು ವಂದೇ ಭಾರತ್ ರೈಲುಗಳು ಶಿವಮೊಗ್ಗದಿಂದ ಸಂಚಾರ ಆರಂಭಿಸುತ್ತವೆ. ಈಗಾಗಲೆ ಎರಡೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಹಾಗೂ ಗಾಡಿ ಸಂಖ್ಯೆಯನ್ನೂ ಇಲಾಖೆ ಪ್ರಕಟಿಸಿದೆ. ಶಿವಮೊಗ್ಗ ತಿರುಪತಿ ವಂದೇ ಭಾರತ್ ರೈಲು ಮುಂಜಾನೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.30ಕ್ಕೆ ತಿರುಪತಿ ತಲುಪುತ್ತದೆ. ಮತ್ತೆ ಸಂಜೆ 4.30ಕ್ಕೆ ಹೊರಟು ರಾತ್ರಿ 12.30 ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಮತ್ತೊಂದು ವಂದೇ ಭಾರತ್ ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿದೆ.ಶಿವಮೊಗ್ಗದಿಂದ ಇತರೆ ರಾಜ್ಯಕ್ಕೆ ಹೊಸ ರೈಲುಗಳು:ಶಿವಮೊಗ್ಗ ಎರ್ನಾಕುಲಂ(ಕೇರಳ), ಶಿವಮೊಗ್ಗ ಬಗಲ್‌ಪುರ್ (ಬಿಹಾರ), ಶಿವಮೊಗ್ಗ ಜಮ್‌ಶೆಡ್‌ಪುರ್ (ಜಾರ್ಖಂಡ್), ಶಿವಮೊಗ್ಗ ಚಂಡೀಗಢ, ಶಿವಮೊಗ್ಗ ಗೌಹಾಟಿ ರೈಲುಗಳ ಸಂಚಾರ ಜನವರಿ ಮತ್ತು ಫೆಬ್ರವರಿಯಲ್ಲಿ ಆರಂಭಿಸಲು ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಹೊಸ ರೈಲು ಮಾರ್ಗಗಳ ಸರ್ವೇ ಆರಂಭ:ಮತ್ತೊಂದು ಕಡೆ ತಾಳಗುಪ್ಪದಿಂದ ಹುಬ್ಬಳ್ಳಿ ಸಂಪರ್ಕಕ್ಕೆ ಸಿದ್ದಾಪುರ, ಶಿರಸಿ, ಮುಂಡಗೋಡು ತಡಸ ನಡುವೆ 150 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಆಗಿದೆ. ಈ ಮಾರ್ಗದಲ್ಲಿ ೧೯೫ ಹೆಕ್ಟೆರ್ ಖುಷ್ಕಿ ಭೂಮಿ, 317 ಹೆಕ್ಟೆರ್ ನೀರಾವರಿ, 190 ಹೆಕ್ಟೆರ್ ಅರಣ್ಯ ಭೂಮಿ ಬರುತ್ತದೆ. ಅರಣ್ಯ ಭೂಮಿಗೆ ಬದಲಿ ಭೂಮಿ ಕೊಡುವ ಕಾರ್ಯ ಆರಂಭವಾಗಿದೆ. ತಾಳಗುಪ್ಪ- ಹೊನ್ನಾವರ ರೈಲು ಮಾರ್ಗದ ಸರ್ವೆ ಸಹ ಆಗಿದೆ. ಇಲ್ಲಿ ಶೇ.73ರಷ್ಟು ಅರಣ್ಯ ಬರುವುದರಿಂದ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಚಿಕ್ಕಮಗಳೂರು- ಬೇಲೂರು ಹಾಸನ ನೂತನ ಮಾರ್ಗಕ್ಕೆ ಸರ್ವೆ ಆರಂಭವಾಗಿದೆ. ಬೀರೂರು ಶಿವಮೊಗ್ಗ ಡಬ್ಲಿಂಗ್‌ಗೆ 1900 ಕೋಟಿ ರು. ಅನುಮೋದನೆ ನೀಡಲಾಗಿದ್ದು ಈ ವರ್ಷಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಭದ್ರಾವತಿ- ಚಿಕ್ಕಜಾಜೂರು ನಡುವೆ 73 ಕಿ.ಮೀ. ರೈಲು ಮಾರ್ಗ ಸರ್ವೆಗೆ ಟೆಂಡರ್ ಆಗಿದೆ. ಇದು ವಿಐಎಸ್‌ಎಲ್‌ಗೆ ಅದಿರು ಸಾಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ