ವಿಶ್ವ ಪರ್ಯಾಯಕ್ಕೆ ವಿಜೃಂಭಣೆಯ ಹೊರೆಕಾಣಿಕೆ ಮೆರವಣಿಗೆಗೆ ನಿರ್ಧಾರ

KannadaprabhaNewsNetwork |  
Published : Nov 06, 2023, 12:47 AM IST
ಪುತ್ತಿಗೆ ಮಠದ ಪರ್ಯಾಯೋತ್ಸವದ ಹೊರೆಕಾಣಿಕೆ ಸಮಿತಿ ಸಭೆ | Kannada Prabha

ಸಾರಾಂಶ

ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ‌ ಮಹೋತ್ಸವದ ಹೊರೆಕಾಣಿಕೆ ಸಮಿತಿ ಸಭೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮುಂದಿನ ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ‌ ಮಹೋತ್ಸವದ ಹೊರೆಕಾಣಿಕೆ ಸಮಿತಿ ಸಭೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಪುತ್ತಿಗೆ ಶ್ರೀಗಳ ವಿಶ್ವಮಟ್ಟದ ಪರ್ಯಾಯ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸುವ ಹಿನ್ನೆಲೆಯಲ್ಲಿ ಹೊರಕಾಣಿಕೆ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲು ಚಿಂತನೆ ನಡೆಸಲಾಗಿದೆ. ಸುಮಾರು ೫೦ ಭಾಗದಲ್ಲಿ ಹೊರೆಕಾಣಿಕೆ ಸಮಿತಿಗಳನ್ನು ಮಾಡಲಿದ್ದೇವೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಹೊರೆಕಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಉಭಯ ಜಿಲ್ಲೆಯ ಸಹಕಾರಿ ಧುರೀಣರು, ಸಹಕಾರಿ ಸಂಘಗಳು ಹೊರೆಕಾಣಿಕೆಗೆ ಕೊಡುಗೆ ನೀಡಲಿದ್ದಾರೆ ಎಂದರು.

ಆನೆಗುಡ್ಡೆ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಕೆ. ರಮಣ ಉಪಾಧ್ಯಾಯ, ಪರ್ಯಾಯ ಸಮಿತಿ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಆಚಾರ್ಯ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಮಂಜುನಾಥ ಉಪಾಧ್ಯ, ಶ್ರೀಕಾಂತ ನಾಯಕ್, ಶಶಿಕಾಂತ್ ಪಡುಬಿದ್ರಿ, ಜ್ಯೋತಿ ದೇವಾಡಿಗ, ಪದ್ಮಾ ದಿವಾಕರ್, ಶ್ರೀಕಾಂತ್ ಸಿದ್ದಾಪುರ, ಉದಯ್ ಮಠದಬೆಟ್ಟು, ಕೃಷ್ಣ ರಾವ್ ಕೊಡಂಚ, ಭಾಸ್ಕರ್‌ ರಾವ್‌ ಕಿದಿಯೂರು, ಎಲ್.ಎನ್.ಹೆಗ್ಡೆ, ರಾಘವೇಂದ್ರ ಕಿಣಿ, ರಾಘವೇಂದ್ರ ಭಟ್ ಕನರ್ಪಾಡಿ, ರಘುಪತಿ ರಾವ್, ಚೈತನ್ಯ ಮತ್ತಿತರರು ಇದ್ದರು.

ನಾಗರಾಜ್ ಆಚಾರ್ಯ ಸ್ವಾಗತಿಸಿದರು. ವಿಜಯ ರಾಘವ ವಂದಿಸಿದರು. ರವೀಂದ್ರ ಆಚಾರ್ಯ ನಿರೂಪಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ