ಮುಂಗಾರು ಹಬ್ಬದ ಅದ್ಧೂರಿ ಆಚರಣೆಗೆ ನಿರ್ಧಾರ: ಮಾಜಿ ಶಾಸಕ ಎ. ಪಾಪಾರೆಡ್ಡಿ

KannadaprabhaNewsNetwork | Published : May 27, 2024 1:03 AM

ಸಾರಾಂಶ

ರಾಯಚೂರು ನಗರದ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪದಲ್ಲಿ ಮುಂಗಾರು ಸಾಂಸ್ಕತಿಕ ರಾಯಚೂರು ನಾಡ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬ ಕಳೆದ ವರ್ಷಕ್ಕಿಂತ ಈ ಭಾರೀ ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲು ಸಮಾಜದ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎ. ಪಾಪಾರೆಡ್ಡಿ ಹೇಳಿದರು.

ಸ್ಥಳೀಯ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪದಲ್ಲಿ ಸಮಾಜದ ಸಮ್ಮುಖದಲ್ಲಿ ನಡೆದ ಮುಂಗಾರು ಸಾಂಸ್ಕತಿಕ ರಾಯಚೂರು ನಾಡ ಹಬ್ಬದ ಪೂರ್ವಭಾವಿ ಮಹತ್ವದ ಸಭೆಯಲ್ಲಿ ರವಿವಾರ ಮಾತನಾಡಿ, ಪ್ರತಿ ವರ್ಷ ಮಾದರಿಯಲ್ಲಿ ಈ ಭಾರೀ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡುವುದರ ಮೂಲಕ ಹಬ್ಬಕ್ಕೆ ಮೆರಗು ತರಲಾಗುವುದು ಎಂದರು. ರಾಜ್ಯ ಮತ್ತು ಈ ಭಾಗದ ಜನಪ್ರಿಯ ಮುಂಗಾರು ಸಾಂಸ್ಕೃತಿಕ ಹಬ್ಬ ಜೂ.21, 22 ಮತ್ತು 23ರಂದು ಮೂರು ದಿನ ಕಾಲ ನಡೆಯಲಿದೆ ಎಂದರು.

ಕಾರಹುಣ್ಣಿಮೆ ಪ್ರಯುಕ್ತ ಮುನ್ನೂರು ಕಾಪು ಸಮಾಜದಿಂದ ಆಚರಣೆ ಮಾಡುವ ಮುಂಗಾರು ಹಬ್ಬ ರೈತರ ಕೃಷಿ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಈ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೈಭವಕರಣದಿಂದ ಆಚರಣೆ ಮಾಡುವುದರ ಮೂಲಕ ಇತರೆ ಸಮಾಜಕ್ಕೆ ಮಾದರಿಯಾಗಿದೆ. ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಮುನ್ನೂರು ಕಾಪು ಸಮಾಜ ಬಲಿಷ್ಠವಾಗಿದೆ ಎಂದರು. ಮುನ್ನೂರು ಕಾಪು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಬಲಿಷ್ಠರಾಗಬೇಕು.ಅ ನಿಟ್ಟಿನಲ್ಲಿ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಮುನ್ನೂರು ಕಾಪು ಸಮಾಜದ ಆಚರಣೆ ಮಾಡುವ ಸಾಂಸ್ಕೃತಿಕ ಕಾರ್ಯಕ್ರಮ ಇತರೇ ಸಮಾಜಗಳು ಆಚರಣೆ ಮಾಡಬೇಕು. ಆಗ ಮಾತ್ರ ಸಮಾಜಕ್ಕೆ ಗೌರವ ಸಲ್ಲುತ್ತದೆ ಎಂದರು. ಯುವಕರು ಸಮಾಜಕ್ಕೆ ಶಕ್ತಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಆಚರಣೆ ಮಾಡಬೇಕು ಸಮಾಜದಿಂದ ಯುವಕರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಸಮಾಜ ವ್ಯಕ್ತಿಗತವಲ್ಲ ಸಮಾಜದ ಅಭಿವೃದ್ಧಿ ಪರ ಕೆಲಸ ಮಾಡುತ್ತಿದೆ ಎಂದರು.

ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬದ ಪೂರ್ವಭಾವಿ ಮಹತ್ವದ ಸಭೆಯಲ್ಲಿ ಸಮಾಜದ ಮುಖಂಡರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾಜದ ಎಲ್ಲ ಮುಖಂಡರ ಸಲಹಾ ಸೂಚನೆ ಪಡೆಯಲಾಯಿತು.

ಸಭೆಯಲ್ಲಿ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ವಿ.ಕೃಷ್ಣಮೂರ್ತಿ, ಜಿ.ಬಸವರಾಜ ರೆಡ್ಡಿ, ರಾಳ ತಿಮ್ಮರೆಡ್ಡಿ, ಕುಕ್ಕಲ ದೊಡ್ಡ ನರಸಿಂಹಲು, ಬಂಗಿ ನರಸರೆಡ್ಡಿ, ಸುಗಣ್ಣಗಾರ್ ವೆಂಕಟರೆಡ್ಡಿ, ಬುಡತಪ್ಪಗಾರು ಆಂಜನೇಯ, ಜಿ.ಶೇಖರರೆಡ್ಡಿ, ಸೇರಿ ಹಿರಿಯರು,ಯುವಕರು,ರೈತರು ಪಾಲ್ಗೊಂಡಿದ್ದರು.

Share this article