ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರಾಧನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಕ್ರಮಹಿಸುವಂತೆ ತಹಸೀಲ್ದಾರ್ ರವರಿಗೆ ಸೂಚನೆ ನೀಡಿದರು.
ಈ ಹಿಂದೆ ಯಾವ ದೇವಸ್ಥಾನಗಳಿಗೆ ಹಣ ನೀಡಿದ್ದೇವೆ, ಅದನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರಾ ಎಂಬ ಕುರಿತು ವರದಿ ನೀಡುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದರು.ಆರಾಧನಾ ಸಮಿತಿಗೆ 2024-25ರಲ್ಲಿ ಸಾಮಾನ್ಯ ಗೆ 2,23,200 ರು., ಪರಿಶಿಷ್ಟ ಜಾತಿಗೆ 4,54,923 ರು., ಗಿರಿಜನ ಉಪಯೋಗಕ್ಕೆ 3,71,713 ರು. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಅರ್ಜಿಗಳು ಬಂದಿವೆ. ಕಳೆದ ಬಾರಿ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಬಳಿ 50 ಲಕ್ಷ ರು. ಅನುದಾನ ಕೇಳಿದ್ದೆ. ಆದರೆ, ಆಯ್ದ ದೇವಾಲಯಗಳಾದ ಕಬ್ಬಳಿಗೆರೆ, ತೇಜೂರು, ಉದ್ದೂರು ಹೊಸಹಳ್ಳಿ, ದುಮ್ಮಿ, ಬೀಜಘಟ್ಟದ ಆಂಜನೇಯ ಸ್ವಾಮಿ, ಕೊಣನೂರಿನ ಈಶ್ವರ ದೇವಾಲಯ, ಕಡವೀನಹೋಸಳ್ಳಿ ಬಸವೇಶ್ವರ ದೇವಾಲಯ, ಮಾರಕಮ್ಮ ದೇವಸ್ಥಾನ ಕಾರಹಳ್ಳಿ, ಬಸವೇಶ್ವರ ದೇವಸ್ಥಾನ ಬಾಣದಹಳ್ಳಿ ಸೇರಿದಂತೆ 10 ದೇವಸ್ಥಾನಕ್ಕೆ ತಲಾ 2.50ಲಕ್ಷ ರು. ನಂತೆ 25 ಲಕ್ಷ ರು. ಸರ್ಕಾರ ನೀಡಿದೆ ಎಂದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಓ ಪ್ರಕಾಶ್, ಸದಸ್ಯರಾದ ಬೆಳವಾಡಿ ನೀಲಮ್ಮ, ಹೆಗ್ಗಡಹಳ್ಳಿ ಪ್ರದೀಪ್ ನಾಯಕ್ ಇದ್ದರು.