ಚಿನ್ನದ ಗಣಿ ಕಾರ್ಮಿಕರ ಮನೆಗಳ ಖಾತೆಗೆ ತೀರ್ಮಾನ

KannadaprabhaNewsNetwork |  
Published : Apr 04, 2026, 02:00 AM IST
2ಕೆಜಿಎಫ್‌1 | Kannada Prabha

ಸಾರಾಂಶ

ನಗರಸಭೆ ಅಧಿಕಾರಿಗಳು ಹಾಗೂ ಬಿಜಿಎಂಎಲ್ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಅಳತೆ ಕಾರ್ಯವನ್ನು ಸಂಪೂರ್ಣಗೊಳಿಸಿ ಕಾರ್ಮಿಕರ ಹೆಸರಿಗೆ ಖಾತೆ ಮಾಡಿಕೊಡಲಾಗುವುದೆಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್ಚಿನ್ನದ ಗಣಿಗಳ ಕಾರ್ಮಿಕರ ೨೮೦೦ ಮನೆಗಳನ್ನು ಎಸ್‌ಟಿಬಿಪಿ ಯೋಜನೆಯಡಿ ಸಮೀಕ್ಷೆ ಮಾಡಿ ಖಾತೆ ಮಾಡುವಂತೆ ಸಂಸದ ಮಲ್ಲೇಶ್ ಬಾಬು ಸೂಚನೆ ಹಿನ್ನೆಲೆಯಲ್ಲಿ ಪೌರಾಯುಕ್ತ ಶ್ರೀಧರ್ ಹಾಗೂ ಬಿಜಿಎಂಎಲ್‌ನ ಸಿಇಒ ಅಮಿತ್ ಅವರು ನಗರಸಭೆಯಲ್ಲಿ ಸಭೆ ನಡೆಸಿ ಸಾಧಕ ಬಾಧಕ ಕುರಿತು ಚರ್ಚೆ ನಡೆಸಿದರು.೨೮೦೦ ಮನೆಗಳ ಪೈಕಿ ಈಗಾಗಲೇ ೯೮೦ ಮನೆಗಳ ಅಳತೆ ಕಾರ್ಯ ಮುಗಿದಿದ್ದು, ಉಳಿದ ೧೭೨೦ ಮನೆಗಳ ಅಳೆತಯನ್ನು ಜನಗಣತಿ ಮುಗಿದ ನಂತರ ನಗರಸಭೆ ಅಧಿಕಾರಿಗಳು ಹಾಗೂ ಬಿಜಿಎಂಎಲ್ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಅಳತೆ ಕಾರ್ಯವನ್ನು ಸಂಪೂರ್ಣಗೊಳಿಸಿ ಕಾರ್ಮಿಕರ ಹೆಸರಿಗೆ ಖಾತೆ ಮಾಡಿಕೊಡಲಾಗುವುದೆಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು.ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಚದರ ಮೀಟರ್‌ಗೆ ರು. ೩೧೩ಚಿನ್ನದ ಗಣಿಗಳ ಕಾರ್ಮಿಕರ ಕನಿಷ್ಟ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಚದರ ಮೀಟರ್‌ಗೆ ೩೧೩ ರುಪಾಯಿಗಳನ್ನು ಸರ್ಕಾರ ನಿಗದಿಪಡಿಸಿದೆ, ದೊಡ್ಡ ಮನೆ ಮತ್ತು ಬಂಗ್ಲೆಗಳಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಾಗಲಿದೆ ಎಂದು ಸಭೆಗೆ ಕಂದಾಯ ಅಧಿಕಾರಿ ಜಯರಾಮ್ ತಿಳಿಸಿದರು. ಬಿಜಿಎಂಎಲ್ ಆಡಳಿತ ಮಂಡಳಿ ಎಸ್‌ಟಿಬಿಪಿ ಯೋಜನೆಯಡಿ ಮಂಜೂರು ಮಾಡಲಾದ ಮನೆಗಳ ನೋಂದಣಿಗೆ ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದಲ್ಲಿ ಕ್ರಮ ವಹಿಸಲಾಗುವುದು ಎಂದು ನೋಟಿಸ್ ನೀಡಿರುವುದರಿಂದ ಎಸ್‌ಟಿಬಿಪಿ (ಸ್ಪೆಷಲ್ ಟರ್ಮಿನಲ್ ಬೆನಿಫಿಟ್ ಪ್ಯಾಕೇಜ್) ಯೋಜನೆಯಡಿ ನೋಂದಾಯಿಸಿರುವ ೨೮೦೦ ಕುಟಂಬಗಳಿಗೆ ಶೀಘ್ರವಾಗಿ ಮನೆಗಳನ್ನು ಕಾರ್ಮಿಕರ ಹೆಸರಿಗೆ ನೊಂದಣಿ ಮಾಡಿ ಮನೆಗಳಿಗೆ ಖಾತೆ ನೀಡಲು ಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಯಿತು.ಕಾರ್ಖಾನೆಗೆ ಬೀಗ:ಬಿಜಿಎಂಎಲ್ ಕಾರ್ಖಾನೆ ಆಡಳಿತ ಮಂಡಳಿ ನಷ್ಟದ ಕಾರಣದಿಂದ ೨೦೦೧ರ ಮಾರ್ಚ್ ೧ರಂದು ಕಾರ್ಖಾನೆಗೆ ಬೀಗ ಜಡಿದ ನಂತರ ಎಸ್‌ಟಿಬಿಪಿ ಯೋಜನೆಯಡಿ ವಾಸವಿರುವ ಕಾರ್ಮಿಕರು ನೆಲದ ಶುಲ್ಕ ಪಾವತಿಸಿ ತಾವು ವಾಸಿಸುತ್ತಿರುವ ಮನೆಯನ್ನು ಸ್ವಂತ ಮಾಡಿಕೊಳ್ಳಬಹುದು ಎಂದು ಹೇಳಿದ್ದರ ಮೇರೆಗೆ ಸುಮಾರು ೩೨೦೦ ಕಾರ್ಮಿಕರು ಬಿಜಿಎಂಎಲ್ ಆಡಳಿತ ಮಂಡಳಿಗೆ ಹಣ ಪಾವತಿಸಿದ್ದರು. ಆದರೆ, ಕೆಲ ಕಾರ್ಮಿಕ ಸಂಘಟನೆಗಳು ಬಿಜಿಎಂಎಲ್ ಆಡಳಿತ ಮಂಡಳಿ ವಿರುದ್ಧ ದಾವೆ ಹೂಡಿದ್ದರಿಂದ ಅಂದಿನಿಂದ ಇಂದಿನವರೆಗೂ ಬಿಜಿಎಂಎಲ್ ಕಾರ್ಮಿಕರಿಗೆ ಬರಬೇಕಾಗಿರುವ ೫೨ ಕೋಟಿ ರು. ಗ್ರಾಚ್ಯುಟಿ ಹಣವಾಗಲಿ ಅಥವಾ ಮನೆಗಳ ಹಕ್ಕು ಪತ್ರಗಳನ್ನಾಗಲಿ ಬಿಜಿಎಂಎಲ್ ಸಂಸ್ಥೆಯವರು ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ನೀಡುವ ಗೋಜಿಗೆ ಹೋಗಿರಲಿಲ್ಲ.ಈಗಾಗಲೇ ಮನೆಗಳನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಿ ೧೨೫ ವರ್ಷಗಳು ಕಳೆದಿವೆ, ಸರಕಾರದ ಸ್ವಯಂ ಘೋಷಿತ ಅಸ್ತಿ ತೆರಿಗೆ ಪ್ರಕಾರ ೬೦ ವರ್ಷ ಮೇಲ್ಪಟ ಮನೆಗಳಿಗೆ ನಗರಸಭೆ ಕಾಯ್ದೆ ಅನ್ವಯ ತೆರಿಗೆ ವಿಧಿಸಲು ಬರುವುದಿಲ್ಲ, ನೆಲ ಬಾಡಿಗೆ ರೂಪದಲ್ಲಿ ಕರ ವಸೂಲಿಗೆ ಮಾತ್ರ ಅವಕಾಶವಿರುತ್ತದೆ ಎಂದು ಸಭೆಯಲ್ಲಿದ್ದ ಮಾಜಿ ನಗರಸಭೆ ಅಧ್ಯಕ್ಷರಾದ ಪಿ.ದಯಾನಂದ್ ತಿಳಿಸಿದರು.ಚಿನ್ನದ ಗಣಿಗಳ ಪ್ರದೇಶದಲ್ಲಿ ೧೦ ಸಾವಿರ ಕುಟಂಬಗಳಿದ್ದು, ಮೂರು ತಲಾಮಾರಿನ ಗಣಿ ಕಾರ್ಮಿಕರು ವಾಸ ಮಾಡುತ್ತಿದ್ದಾರೆ, ಈಗ ಎಸ್‌ಟಿಬಿಪಿ ಯೋಜನೆಯಡಿ ೨೮೦೦ ಕುಟಂಬಗಳಿಗೆ ವಾಸ ಮಾಡುತ್ತಿರುವ ಮನೆಗಳಿಗೆ ಖಾತೆ ನೀಡುತ್ತಿರುವುದು ಸರಿಯಷ್ಟೇ, ಮಿಕ್ಕ ೭೨೦೦ ಕುಟಂಬಗಳು ಕಥೆ ಎನು ಜೆಡಿಎಸ್ ಮುಖಂಡ ಎಸ್.ರಾಜೇಂದ್ರನ್ ಪ್ರಶ್ನೆ ಮಾಡಿದರು.೨ಕೆಜಿಎಫ್೧ನಗರಸಭೆ ಕಚೇರಿಯಲ್ಲಿ ಚಿನ್ನದ ಗಣಿಗಳ ಕಾರ್ಮಿಕರ ಮನೆಗಳಿಗೆ ಖಾತೆ ನೀಡುವ ಸಂಬಂಧ ಸಭೆ ನಡೆಸಿದ ಪೌರಾಯುಕ್ತ ಶ್ರೀಧರ್, ಸಿಇಒ ಅಮಿತ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ