ಅಲ್ದೂರಿನಲ್ಲಿ ಶೀಘ್ರ ಹೈಟೆಕ್‌ ಸರ್ಕಾರಿ ಆಸ್ಪತ್ರೆ

KannadaprabhaNewsNetwork |  
Published : Apr 04, 2026, 01:45 AM IST
ಸ | Kannada Prabha

ಸಾರಾಂಶ

ಚಿಕ್ಕಮಗಳೂರು82 ವರ್ಷಗಳ ಹೀಮದೆ ನಿರ್ಮಾಣವಾಗಿರುವ ಆಲ್ದೂರು ಪಟ್ಟಣದ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದಾನವಾಗಿ ನಿರ್ಮಿಸಿಕೊಡಲು ಮುಂದಾಗಿದ್ದೇವೆ ಎಂದು ಕಟ್ಟಡದ ದಾನಿ ಕೆ.ಶ್ಯಾಮ್ ಪ್ರಸಾದ್ ಹೇಳಿದರು.

ಶ್ಯಾಮ್ ಪ್ರಸಾದ್ ಮಾಹಿತಿ । ಖಾಸಗಿ ಸಂಸ್ಥೆಯಿಂದ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

82 ವರ್ಷಗಳ ಹೀಮದೆ ನಿರ್ಮಾಣವಾಗಿರುವ ಆಲ್ದೂರು ಪಟ್ಟಣದ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದಾನವಾಗಿ ನಿರ್ಮಿಸಿಕೊಡಲು ಮುಂದಾಗಿದ್ದೇವೆ ಎಂದು ಕಟ್ಟಡದ ದಾನಿ ಕೆ.ಶ್ಯಾಮ್ ಪ್ರಸಾದ್ ಹೇಳಿದರು.

ಪಟ್ಟಣದಲ್ಲಿ ಚಿಕ್ಕಮಗಳೂರು ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್, ವಿದ್ಯಾ ಹರ್ಬ್ಸ್ ಪ್ರೆವೇಟ್ ಲಿಮಿಟೆಡ್ ಸಂಸ್ಥೆಯಿಂದ ಸಾರ್ವ ಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, 8ರಿಂದ 10 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ಉದ್ಘಾಟಿಸಬೇಕೆಂಬ ಚಿಂತನೆ ಇದೆ ಎಂದರು.

ಆಲ್ದೂರು ಸುತ್ತಮುತ್ತ ಹಲವು ಗ್ರಾಮಗಳಿವೆ. ಎಲ್ಲ ವರ್ಗದ, ಎಲ್ಲ ಸಮುದಾಯದವರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇರುವುದನ್ನು ಗಮನಿಸಿದ್ದೇವೆ. ಆರೋಗ್ಯವೇ ಎಲ್ಲರಿಗೂ ದೊಡ್ಡ ಆಸ್ತಿ. ಪ್ರಾಥಮಿಕ ಹಂತದ ಚಿಕಿತ್ಸೆ ಗುಣಮಟ್ಟ ದಿಂದ ಕೂಡಿರಬೇಕು ಎಂಬ ಆಕಾಂಕ್ಷೆಇದೆ ಎಂದು ಹೇಳಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಜನಪ್ರತಿನಿಧಿಗಳಿಂದ ಶಾಲೆ, ಆಸ್ಪತ್ರೆ, ಮೂಲ ಸೌಕರ್ಯ ದೊರೆಯ ಬೇಕೆಂಬುದು ಜನರ ಅಭಿಪ್ರಾಯ. ಆದರೆ ಹೃದಯ ವಿಶಾಲತೆ ಹೊಂದಿರುವ ಶ್ಯಾಮ್ ಪ್ರಸಾದ್ ಅವರಂತ ದಾನಿಗಳಿಂದ ಆಲ್ದೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂದರು.

ಈ ವೇಳೆ ದಾನಿ ಶ್ಯಾಮ್ ಪ್ರಸಾದ್, ವೀಣಾ ದಂಪತಿ, ಮಕ್ಕಳಾದ ವಿದ್ಯಾ, ವಿನಯ ಅವರನ್ನು ಸನ್ಮಾನಿಸಲಾಯಿತು. ಡಿಎಚ್‌ಒ ಶರತ್ ಬಾಬು, ತಾಲೂಕು ವೈದ್ಯಾಧಿಕಾರಿ ಸೀಮಾ, ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸುರೇಶ್, ರೇಣು ಕಾರ್ಯ ಇದ್ದರು. -- ಕೋಟ್‌ --

ಇಂದು ಸೇವೆಗಳು ವ್ಯಾಪಾರವಾಗಿವೆ. ಆದರೆ, ಶ್ಯಾಮ್ ಪ್ರಸಾದ್ ಅವರಂತಹ ದಾನಿಗಳು ಸಮಾಜದಲ್ಲಿರುವ ಸಿರಿವಂತರಿಗೆ ಮಾದರಿಯಾಗಬೇಕು.

ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ.ಫೋಟೋ:

ಚಿಕ್ಕಮಗಳೂರಿನಲ್ಲಿ ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಸೋಮವಾರ ದಾನಿ ಕೆ.ಶ್ಯಾಮ್ ಪ್ರಸಾದ್‌ ಶಂಕುಸ್ಥಾಪನೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹವಾಮಾನ ವೈಪರಿತ್ಯಕ್ಕೆ ಮಾವು ಫಸಲು ಶೇ.50 ಕುಸಿತ!
ಸಡಗರದ ಹೂವಿನಹಳ್ಳಿ ಶ್ರೀರಾಚೋಟಿ ವೀರಭದ್ರಸ್ವಾಮಿ ರಥೋತ್ಸವ