ಫೆ.9 ರಂದು ಐಗೂರಿನಲ್ಲಿ 9ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ

KannadaprabhaNewsNetwork |  
Published : Dec 03, 2025, 02:45 AM IST
ಫೆ.9 ರಂದು ಐಗೂರಿನಲ್ಲಿ 9ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ | Kannada Prabha

ಸಾರಾಂಶ

ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐಗೂರಿನಲ್ಲಿ ಫೆ. 9ರಂದು ಆಚರಿಸಲು ನಿರ್ದರಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐಗೂರಿನಲ್ಲಿ ಫೆ.9ರಂದು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಐಗೂರು ಹೋಬಳಿ ಕೇಂದ್ರದಲ್ಲಿ ಕನ್ನಡಮ್ಮನ ಹಬ್ಬಕ್ಕೆ ಸರ್ವ ಕನ್ನಡ ಮನಸ್ಸುಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು. ನಮ್ಮ ಮಾತೃಭಾಷೆ ಕನ್ನಡ ಅನ್ನಕೊಡುವ ಭಾಷೆಯಾಗಿದೆ. ಐಗೂರಿನಲ್ಲಿ ನಡೆಯುವ ಕನ್ನಡ ಸಮ್ಮೇಳನ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲೇ ನಡೆಸಲು ಕೈಜೋಡಿಸಿ ಎಂದು ಹೇಳಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ವಿವಿಧ ಸಮಿತಿಗಳ ರಚನೆ ಮತ್ತು ಎಲ್ಲರ ಜವಾಬ್ದಾರಿ ಕುರಿತು ವಿವರವಾದ ಮಾಹಿತಿ ನೀಡಿದರು. ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಮಿತಿಗೆ ಶಾಸಕ ಡಾ.ಮಂತರ್‌ಗೌಡ ಗೌರವ ಅಧ್ಯಕ್ಷರು, ಕ.ಸಾ.ಪ. ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಗಣ್ಯರನ್ನು ಸಮಿತಿಗೆ ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು. ಹಣಕಾಸು ಸಮಿತಿ ಅಧ್ಯಕ್ಷರಾಗಿ ಕೆ.ಪಿ.ರಾಯ್, ಸಂಚಾಲಕರಾಗಿ ಎಂ.ಮನೋಜ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಡಿ.ಬೆಳಿಯಪ್ಪ ಅಯ್ಕೆ ಮಾಡಲಾಯಿತು. ಸದಸ್ಯರನ್ನು ನೇಮಿಸಿಕೊಳ್ಳಲು ಅಧ್ಯಕ್ಷರಿಗೆ ಅಧಿಕಾರ ವಹಿಸಲಾಯಿತು. ಆಹಾರ ಸಮಿತಿ, ಮಚ್ಚಂಡ ಅಶೋಕ್(ಅ), ಬಿ.ಬಿ.ಭರತ್‌ಕುಮಾರ್(ಸ), ಸಬೀತಾ ಚನ್ನಕೇಶವ(ಪ್ರ.ಕಾ), ಕಿಬ್ಬೆಟ್ಟ ಧರ್ಮ, ವೇದಿಕೆ ನಿರ್ಮಾಣ ಸಮಿತಿ, ಸಿ.ಕೆ.ರೋಹಿತ್(ಅ), ವಿಶ್ವನಾಥರಾಜೇ ಅರಸ್(ಸ), ಕೆ.ಪಿ,.ಮುತ್ತಪ್ಪ(ಕಾ), ಮೆರವಣಿಗೆ ಸಮಿತಿ ಡಿ.ಎಸ್.ಚಂಗಪ್ಪಬಿ, ಎಸ್.ಪಿ.ಪೊನ್ನಪ್ಪ(ಸ), ಎಚ್.ಎಂ.ಸುದೀರ್(ಕಾ), ಅಲಂಕಾರ ಮತ್ತು ದ್ವಾರ ಸಮಿತಿ, ಕೆ.ಪಿ.ದಿನೇಶ್(ಅ), ಎಂ.ಪಿ.ಮೇಘನ್(ಸ), ಅನಿತಾ ಮಾದವನ್(ಕಾ), ವೇದಿಕೆ ಸಮಿತಿ ಕಡ್ಲೇರ ಹೊನ್ನಪ್ಪ(ಅ), ಡಿ.ಎನ್.ಸತೀಶ್ ಕುಮಾರ್(ಸ), ಬಿ.ಚಂದ್ರಶೇಖರ್(ಕಾ), ಸಾಂಸ್ಕೃತಿಕ ಸಮಿತಿ, ಎಚ್.ಕೆ.ಉಮೇಶ್ ಕುಮಾರ್(ಅ), ಯಶವಂತ್ ಕುಮಾರ್(ಸ), ವಿಜು ತೋಳೂರುಶೆಟ್ಟಳ್ಳಿ(ಕಾ), ಪ್ರಚಾರ ಸಮಿತಿ, ಎಸ್.ಎ.ಮುರಳೀಧರ್(ಅ), ಸುಕುಮಾರ್(ಸ), ಹಿರಿಕರ ರವಿ(ಕಾ), ಆರೋಗ್ಯ ಸಮಿತಿ ಪೂಪತಿ (ಅ), ಪೂರ್ಣಿಮ(ಸ), ಅಮುದ(ಕಾ), ಸ್ಮರಣ ಸಂಚಿಕೆ ಸಮಿತಿ, ಎಸ್.ಡಿ.ವಿಜೇತ್(ಅ), ಎಸ್.ಎಂ.ಚಂಗಪ್ಪ( ಸಂಪಾದಕರು), ಪಿ.ಕೆ.ಸೋಮಯ್ಯ ಮತ್ತು ಕಾಜೂರು ಸತೀಶ್, ಹೇಮಂತ್ ಪಾರೇರ ಅವರು ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಲಿದ್ದಾರೆ.ಸಮ್ಮೇಳನದ ಮಹಾಪೋಷಕರಾಗಿ ಮಾಜಿ ಸಚಿವರಾದ ಬಿ.ಎ.ಜೀವಿಜಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ಕ.ಸ.ಬ. ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪಿಡಿಒ ಪೂರ್ಣಕುಮಾರ್, ಕ.ಸಾ.ಪ.ಪದಾಧಿಕಾರಿಗಳಾದ ಜ್ಯೋತಿ ಅರುಣ್, ಎ.ಪಿ.ವೀರರಾಜು, ಕೆ.ಪಿ.ದಿನೇಶ್, ಜಿಲ್ಲಾ ಪದಾಧಿಕಾರಿ ವಾಸುರೈ, ಹೋಬಳಿ ಅಧ್ಯಕ್ಷರಾದ ಸಿ.ಎಸ್. ನಾಗರಾಜು, ಶಾಂತಮಲ್ಲಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಕಾಂಟ್ರಾಕ್ಟರ್‌ ಡಿ.ವೈ.ಉಪ್ಪಾರ್ ಇನ್ನಿಲ್ಲ
ಇನ್ಮುಂದೆ ಚಾಲನಾ ಪರವಾನಗಿಗೆ ಮ್ಯಾನುವೆಲ್‌ ಇರಲ್ಲ